ದೇವರು ಕೊಟ್ಟ ವರ: ಪಾಂಡ್ಯ ಕೈಯಲ್ಲಿ ಮಗ ಕಿಲ ಕಿಲ

Suvarna News   | Asianet News
Published : Aug 01, 2020, 07:00 PM IST

ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ-ನಟಿ ನತಾಶ ಸ್ಟಾಂಕೋವಿಚ್ ದಂಪತಿಯ ಕುಟುಂಬಕ್ಕೆ ಜುಲೈ 30ರಂದು ಮತ್ತೊಬ್ಬ ಅತಿಥಿಯ ಆಗಮನವಾಗಿದೆ. ನತಾಶ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಶನಿವಾರ(ಆ.01) ಹಾರ್ದಿಕ್ ಪಾಂಡ್ಯ ತಮ್ಮ ಮುದ್ದಾದ ಮಗುವನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರ ಕೆಳಗೆ ದೇವರು ಕೊಟ್ಟ ವರ ಎಂದು ಬರೆದುಕೊಂಡಿದ್ದಾರೆ. 2020ರ ಜನವರಿ 01ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಪಾಂಡ್ಯ ವರ್ಷ ತುಂಬುವುದರೊಳಗಾಗಿ ತಂದೆಯಾಗಿದ್ದಾರೆ.

PREV
110
ದೇವರು ಕೊಟ್ಟ ವರ: ಪಾಂಡ್ಯ ಕೈಯಲ್ಲಿ ಮಗ ಕಿಲ ಕಿಲ

2020ರ ಹೊಸವರ್ಷದ ಮೊದಲ ದಿನವೇ ಲವ್ ಕಹಾನಿ ಬಿಚ್ಚಿಟ್ಟಿದ್ದ ಹಾರ್ದಿಕ್ ಪಾಂಡ್ಯ.

210

ನತಾಶ ಕೈಹಿಡಿದು ಪಟಾಕಿಯೊಂದಿಗೆ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇನೆ ಎಂದಿದ್ದ ಆಲ್ರೌಂಡರ್.

310

26ರ ಹರೆಯದ ಪಾಂಡ್ಯ 27 ವರ್ಷದ ಬಾಲಿವುಡ್ ಬೆಡಗಿಗೆ ಮನಸೋತಿದ್ದ.

410

ನತಾಶ-ಪಾಂಡ್ಯ ಎಂಗೇಜ್‌ಮೆಂಟ್ ಫೋಟೋಗಳು ಸಾಕಷ್ಟು ವೈರಲ್ ಆಗಿದ್ದವು.

510

ಇನ್ನೂ ಆಶ್ಚರ್ಯಕರ ಸಂಗತಿಯೆಂದರೆ ಪಾಂಡ್ಯ ದುಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಸ್ವತಃ ಅವರ ತಂದೆಗೇ ಗೊತ್ತಿರಲಿಲ್ಲವಂತೆ.

610

ನಿಶ್ಚಿತಾರ್ಥ ಮಾಡಿಕೊಂಡ 5 ತಿಂಗಳಿನಲ್ಲೇ ಗುಡ್‌ ನ್ಯೂಸ್ ನೀಡಿದ್ದ ಪಾಂಡ್ಯ ತಾವು ತಂದೆಯಾಗುತ್ತಿರುವ ಸಂತಸದ ಸುದ್ದಿ ಹಂಚಿಕೊಂಡಿದ್ದರು.

710

ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಂತೆ ಅಷ್ಟೇ ಗುಟ್ಟಾಗಿ ಕೆಲವೇ ಕೆಲವು ಆಪ್ತರ ನಡುವೆ ಪಾಂಡ್ಯ ಸಪ್ತಪದಿಯನ್ನು ತುಳಿದಿದ್ದರು.

810

ಇನ್ನು ಮೆಟರ್ನಿಟಿ ಫೋಟೋ ಶೂಟ್‌ಗಳು ಕೂಡಾ ಸಾಕಷ್ಟು ವೈರಲ್ ಆಗಿದ್ದವು.

910

ಇದಾಗಿ ಕೆಲವೇ ದಿನಗಳಲ್ಲಿ ಪಾಂಡ್ಯ ಗಂಡು ಮಗುವಿಗೆ ತಂದೆಯಾಗಿದ್ದಾರೆ.

1010

ಅಂದರೆ ಹಾರ್ಡ್‌ ಹಿಟ್ಟರ್ ಹಾರ್ದಿಕ್ ನಿಶ್ಚಿತಾರ್ಥ ಮಾಡಿಕೊಂಡ ಭರ್ತಿ ಏಳು ತಿಂಗಳಿನಲ್ಲಿ ತಂದೆಯಾಗಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories