ಮಹಾಕುಂಭದಲ್ಲಿ ಕೊಹ್ಲಿ, ಧೋನಿ ಸೇರಿ ಕ್ರಿಕೆಟಿಗರು, AI ಚಿತ್ರಕ್ಕೆ ಮನಸೋತ ಫ್ಯಾನ್ಸ್

Published : Jan 25, 2025, 01:45 PM ISTUpdated : Jan 25, 2025, 01:48 PM IST

ಮಹಾಕುಂಭ ಮೇಳದಲ್ಲಿ ಕೋಟ್ಯಾಂತರ ಭಕ್ತರು ಪುಣ್ಯಸ್ನಾನ ಮಾಡುತ್ತಿದ್ದಾರೆ. ಇದೇ ಮಹಾಕುಭ ಮೇಳದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಪಾಲ್ಗೊಂಡರೆ ಹೇಗಿರುತ್ತೆ? ಈ ಕುರಿತು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಚಿತ್ರ ಭಾರಿ ಸದ್ದು ಮಾಡುತ್ತಿದೆ.  

PREV
111
ಮಹಾಕುಂಭದಲ್ಲಿ ಕೊಹ್ಲಿ, ಧೋನಿ ಸೇರಿ ಕ್ರಿಕೆಟಿಗರು, AI ಚಿತ್ರಕ್ಕೆ ಮನಸೋತ ಫ್ಯಾನ್ಸ್

ಪ್ರಯಾಗರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯತ್ತಿದೆ. ಪ್ರತಿ ದಿನ ಲಕ್ಷಾಂತರ ಭಕ್ತರು ಪುಣ್ಯಸ್ನಾನ ಮಾಡುತ್ತಿದ್ದಾರೆ. ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಹಲವು ಗಣ್ಯರು ಮಹಾಕುಂಭ ಮೇಳಕ್ಕೆ ಆಗಮಿಸುತ್ತಿದ್ದಾರೆ. ಕ್ರಿಕೆಟಿಗರು ಮಹಾಕುಂಭಮೇಳಕ್ಕೆ ಹೋದ್ರೆ.. ಇಲ್ಲ ಸಾಧುಗಳಾದ್ರೆ.. ಆ ಊಹೆಗೆ AI ರೂಪ ಕೊಟ್ಟಿದೆ. ದಿ ಭಾರತ್ ಆರ್ಮಿ ಟೀಂ ಇಂಡಿಯಾ ಕ್ರಿಕೆಟಿಗರ ಕುಂಭಮೇಳದ ಚಿತ್ರಗಳನ್ನು ಪೋಸ್ಟ್ ಮಾಡಿದೆ.

211

ಈ ಫೋಟೋಗಳನ್ನು ನೋಡಿದರೆ ಕ್ರಿಕೆಟಿಗರು ಮಹಾಕುಂಭ ಮೇಳದಲ್ಲಿ ಮಿಂದೆದ್ದಂತೆ ಕಾಣುತ್ತಿದೆ.  ಎಐ ಜನರೇಟೀವ್ ಚಿತ್ರಗಳು ಅಸಲಿ ಚಿತ್ರದಂತೆ ಕಾಣುತ್ತಿದೆ. ಕ್ರಿಕೆಟಿಗರ ಭಕ್ತಿಯ ಪರಾಕಾಷ್ಟೆ, ಧನ್ಯತಾ ಭಾವ ಸೇರಿದಂತೆ ಎಲ್ಲವನ್ನೂ ಎಐ ಚಿತ್ರಿಸಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಹರಿದಾಡುತ್ತಿದೆ. 

311

ಕ್ರಿಕೆಟಿಗರು ಮಹಾಕುಂಭಮೇಳಕ್ಕೆ ಹೋದ್ರೆ' ಅನ್ನೋ ಶೀರ್ಷಿಕೆಯಲ್ಲಿ 'ದಿ ಭಾರತ್ ಆರ್ಮಿ' ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ಧೋನಿ, ಕೊಹ್ಲಿ, ರೋಹಿತ್ ಶರ್ಮಾ, ಬುಮ್ರಾ, ಪಾಂಡ್ಯ, ರಾಹುಲ್, ಶ್ರೇಯಸ್ ಅಯ್ಯರ್ , ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್ ಸೇರಿದಂತೆ ಹಲವು ಕ್ರಿಕೆಟಿಗರು ಕಾವಿ ಬಟ್ಟೆಯಲ್ಲಿ ಕುಂಭಮೇಳಕ್ಕೆ ಭೇಟಿ ನೀಡಿದಂತೆ ಈ ಫೋಟೋಗಳನ್ನು ಸೃಷ್ಟಿಸಲಾಗಿದೆ.

411

ಎಲ್ಲಾ ಕ್ರಿಕೆಟಿಗರನ್ನು ಕೇಸರಿ ಬಟ್ಟೆ ಧರಿಸಿದಂತೆ, ಕೇಸರಿ ತಿಲಕ ಇಟ್ಟಕೊಂಡಂತೆ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಚಿತ್ರಿಸಿದೆ. ಈ ಪೈಕಿ ಧೋನಿಯನ್ನು ಸಂಪೂರ್ಣ ಸನ್ಯಾಸಿ ರೀತಿ ಚಿತ್ರಿಸಿದರೆ, ಕೊಹ್ಲಿ ಗಡ್ಡಗಳು ಬಿಳಿಯಾಗಿದೆ.ಇನ್ನು ಶ್ರೇಯಸ್ ಅಯ್ಯರ್ ಕೂಡ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

511

ರೋಹಿತ್ ಶರ್ಮಾ ಮತ್ತಷ್ಟು ತೂಕ ಹೆಚ್ಚಿಸಿಕೊಂಡಂತೆ ಚಿತ್ರಿಸಲಾಗಿದೆ. ಈ ಮಹಾಕುಂಭ ಮೇಳ ಎಐ ಚಿತ್ರದಲ್ಲಿ ಸಂಜು ಸ್ಯಾಮ್ಸನ್ ಚಿತ್ರವನ್ನು ಸೃಷ್ಟಿಸಲಾಗಿದೆ. ಸದ್ಯ ಟೀಂ ಇಂಡಿಯಾದಲ್ಲಿ ಚಾಲ್ತಿಯಲ್ಲಿರುವ ಕ್ರಿಕೆಟಿಗರ ಫೋಟೋಗಳನ್ನು ಎಐ ಮೂಲಕ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಂತೆ ಚಿತ್ರಿಸಲಾಗಿದೆ. 

611

ವಿಶೇಷ ಅಂದರೆ ಒಬ್ಬೊಬ್ಬ ಕ್ರಿಕೆಟಿಗರ ತಿಲಕ ಬೇರೆ ಬೇರೆ ರೂಪದಲ್ಲಿ ಚಿತ್ರಿಸಲಾಗಿದೆ. ಉದ್ದ ನಾಮ, ಅಡ್ಡ ನಾಮ, ಬಾಲಾಜಿ ನಾಮ ರೂಪ ಸೇರಿದಂತೆ ಹಲುವು ರೀತಿಯಲ್ಲಿ ಎಐ ತಿಲಕವನ್ನು ಚಿತ್ರಿಸಿದೆ.

711

ಕ್ರಿಕೆಟಿಗ ಮಹಾಕುಂಭ ಮೇಳ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಚಿತ್ರಗಳಲ್ಲಿ ಬ್ಯಾಗ್ರೌಂಡ್‌ನಲ್ಲೂ ಕುಂಭಮೇಳ ಸೂಕ್ಷ್ಮತೆಯನ್ನು ನೀಡಲಾಗಿದೆ. ಹೀಗಾಗಿ ಮೇಲ್ನೋಟಕ್ಕೆ ನಿಜವಾಗಿಯೂ ಕ್ರಿಕೆಟಿಗರು ಕುಂಭ ಮೇಳದಲ್ಲಿ ಪಾಲ್ಗೊಂಡಂತೆ ಕಾಣುತ್ತಿದೆ.
 

811

ಈ ಪೋಟೋಗಳಿಗೆ ಅಭಿಮಾನಿಗಳು ಭರ್ಜರಿ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ ಮತ್ತಷ್ಟು ಕ್ರಿಕೆಟಿಗ ಎಐ ಚಿತ್ರ ಪೋಸ್ಟ್ ಮಾಡುವಂತೆ ಕೆಲವರು ಅಭಿಪ್ರಾಯಪಟ್ಟಿದ್ದಾರೆ.ಮತ್ತೆ ಕೆಲವರು ವಿರಾಟ್ ಕೊಹ್ಲಿಯನ್ನು ವಯಸ್ಸಾದಂತೆ ಯಾಕೆ ಚಿತ್ರಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.

911

ಟೀಂ ಇಂಡಿಯಾದ 11 ಕ್ರಿಕೆಟಿಗರ ಫೋಟೋಗಳನ್ನು ಎಐ ಮೂಲಕ ಮಹಾಕುಂಭ ಮೇಳಕ್ಕೆ ತೆರಳಿದಂತೆ ಚಿತ್ರಿಸಲಾಗಿದೆ. ಸದ್ಯ ಟೀಂ ಇಂಡಿಯಾ ಕ್ರಿಕೆಟಿಗರು ಇಂಗ್ಲೆಂಡ್ ವಿರುದ್ದದ ಟಿ20 ಪಂದ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಗೆದ್ದುಕೊಂಡಿದೆ.

1011

ಇಂಗ್ಲೆಂಡ್ ವಿರುದ್ದ ಭಾರತ 5 ಪಂದ್ಯಗಳ ಟಿ20 ಸರಣಿ ಆಡುತ್ತಿದೆ. ಕೋಲ್ಕತಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ 7 ವಿಕೆಟ್ ಗೆಲುವು ದಾಖಲಿಸಿತ್ತು. ದ್ವಿತೀಯ ಪಂದ್ಯ ಜನವರಿ25 ರಂದು ಚೆನ್ನೈನಲ್ಲಿ ನಡೆಯಲಿದೆ. ಒಂದೆಡೆ ಟಿ20 ಕ್ರಿಕೆಟ್ ಕಾವು ಜೋರಾಗುತ್ತಿದ್ದರೆ, ಸೋಶಿಯಲ್ ಮೀಡಿಯಾದಲ್ಲಿ ಎಐ ಚಿತ್ರಗಳು ಕಾವು ಪಡೆದುಕೊಂಡಿದೆ. 

1111

5 ಪಂದ್ಯಗಳ ಟಿ20 ಸರಣಿ ಬಳಿಕ ಇಂಗ್ಲೆಂಡ್ ವಿರುದ್ದ ಭಾರತ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಇದು ಫೆಬ್ರವರಿ 6 ರಿಂದ 12ರ ವರೆಗೆ ಭಾರತದಲ್ಲಿ ನಡೆಯಲಿದೆ. 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories