Published : Mar 23, 2020, 02:45 PM ISTUpdated : Mar 23, 2020, 02:48 PM IST
ಹುಬ್ಬಳ್ಳಿ[ಮಾ.23]: ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಧಾರವಾಡ ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಇದರಿಂದ ಸಾರಿಗೆ ಬಸ್ ಗಳ ಓಡಾಟ ಸಂಪೂರ್ಣ ಬಂದ್ ಆಗಿದೆ. ಆದರೆ ಕೆಲ ಖಾಸಗಿ ಮ್ಯಾಕ್ಸಿಕ್ಯಾಬ್, ಕ್ರೂಸರ್, ಟಂ ಟಂ ಮತ್ತಿತರ ವಾಹನಗಳ ಮಾಲೀಕರು ಇದನ್ನೇ ಬಂಡವಾಳ ಮಾಡಿಕೊಂಡು ಜನರನ್ನು ತುಂಬಿಕೊಂಡು ಓಡಾಡುತ್ತಿದ್ದು ಇಂತವರ ವಿರುದ್ಧ ಆರ್‌ಟಿಓ ಸಿಬ್ಬಂದಿ ಚಾಟಿ ಬೀಸಿದ್ದಾರೆ.