ಭಾರತೀಯ ರೈಲ್ವೇಯ 1036 ಹುದ್ದೆಗೆ ನೇಮಕಾತಿ ಆರಂಭ, ಅರ್ಜಿ ಸಲ್ಲಿಕೆ ಹೇಗೆ?

First Published | Dec 22, 2024, 6:37 PM IST

ಭಾರತೀಯ ರೈಲ್ವೇಯ 1036 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಗೊಳ್ಳುತ್ತಿದೆ. ಹಲವು ವಿಭಾಗದಲ್ಲಿ ಉತ್ತಮ ಹುದ್ದೆಗಳಿವೆ. ಉದ್ಯೋಗ ಹುಡುಕುತ್ತಿರುವ ಯುವ ಸಮೂಹಕ್ಕೆ ಉತ್ತಮ ಅವಕಾಶ ಒದಗಿ ಬಂದಿದೆ. ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ, ಶುಲ್ಕ ಸೇರಿ ಇತರ ಮಾಹಿತಿ ಇಲ್ಲಿದೆ.

ಭಾರತೀಯ ರೈಲ್ವೇ ಅತೀ ದೊಡ್ಡ ಸಂಪರ್ಕ ಜಾಲ ಸಂಸ್ಥೆ. ಹೀಗಾಗಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಳು ಕೆಲಸ ಮಾಡುತ್ತಿದ್ದಾರೆ. ಇದೀಗ ಭಾರತೀಯ ರೈಲ್ವೇ ಖಾಲಿ ಇರುವ ಹುದ್ದಗಳಿಗೆ ನೇಮಕಾತಿ ಘೋಷಿಸಿದೆ. ಪ್ರಮುಖವಾಗಿ ಭಾರತೀಯ ರೈಲ್ವೇಯಲ್ಲಿರುವ 1036 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಗೊಳ್ಳುತ್ತಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ, ಹುದ್ದೆಗಳ ವಿವರ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
 

ಭಾರತೀಯ ರೈಲ್ವೇಯ ಹಲವು ವಿಭಾಗದ ಪ್ರಮುಖವಾಗಿ ಮಿನಿಸ್ಟ್ರಿಯಲ್ ಹಾಗೂ ಐಸೋಲೇಟೆಡ್ ಪೋಸ್ಟ್ ಒಪನಿಂಗ್ ನಡೆಯಲಿದೆ. ಮುಂದಿನ ತಿಂಗಳು ಅಂದರೆ 2025ರ ಜನವರಿ 7 ರಿಂದ ಅರ್ಜಿ ಸಲ್ಲಿಕೆ ಆರಂಭಗೊಳ್ಳಲಿದೆ. ಫೆಬ್ರವರಿ 6ರ ವರೆಗೆ ಕೆಲ ವಿಭಾಗಗಳ ರೈಲ್ವೇ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ. 
 

Tap to resize

16 ವಿವಿಧ ವಿಭಾಗಗಳಲ್ಲಿ ಒಟ್ಟು 1036 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಜನರಲ್, ಒಬಿಸಿ, EWS ಕೆಟಗರಿಯಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 500 ರೂಪಾಯಿ ಅರ್ಜಿ ಶುಲ್ಕ ಪಾವತಿ ಮಾಡಬೇಕು. ಇನ್ನು ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು 250 ರೂಪಾಯಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಮಾಡಬೇಕು.
 

ಪೋಸ್ಟ್ ಗ್ರಾಜ್ಯುಯೇಟ್ ಟೀಚರ್(PGT): 187, ಟ್ರೈನಿ ಗ್ರ್ಯಾಜ್ಯುಯೇಟ್ (TGT): 338, ಸೈಂಟಿಫಿಕ್ ಸೂಪರ್‌ವೈರಸರ್ (ಟ್ರೈನಿ) 03, ಚೀಫ್ ಲಾ ಅಸಿಸ್ಟೆಂಟ್ 54, ಪಬ್ಲಿಕ್ ಪ್ರಾಸಿಕ್ಯೂಟರ್ 20, ಫಿಸಿಕಲ್ ಟ್ರೈನಿಂಗ್ ಇನ್ಸ್‌ಟ್ರಕ್ಟರ್ (ಇಂಗ್ಲೀಷ್ ಮೀಡಿಯಂ 18, ಸೈಂಟಿಫಿಕ್ ಅಸಿಸ್ಟೆಂಟ್ 02,  ಜ್ಯೂನಿಯರ್ ಟ್ರಾನ್ಸಲೇಟರ್ ಹಿಂದಿ 130, ಸೀನಿಯರ್ ಪಬ್ಲಿಸಿಟಿ ಇನ್ಸ್‌ಪೆಕ್ಟರ್ 03, ಸ್ಟಾಫ್ ವೆಲ್‌ಫೇರ್ ಇನ್ಸ್‌ಪೆಕ್ಟರ್ 59, ಲೈಬ್ರೇರಿಯನ್ 10 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
 

ಇನ್ನು ಮ್ಯೂಸಿಕ್ ಟೀಚರ್(ಮಹಿಳೆ) 03, ಪ್ರೈಮರಿ ರೈಲ್ವೇ ಟೀಚರ್ 188, ಅಸಿಸ್ಟೆಂಟ್ ಟೀಚರ್ 02, ಲ್ಯಾಬೋರೇಟರಿ 07, ಲ್ಯಾಬ್ ಅಸಿಸ್ಟೆಂಟ್ ಐಐಐ 12  ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಕುರಿತ ಸಂಪೂರ್ಣ ವಿವರವನ್ನು  ಭಾರತೀಯ ರೈಲ್ವೇ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ಅರ್ಹತೆ, ವಿದ್ಯಾಭ್ಯಾಸ, ವೇತನ ವಿವರಗಳನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.  

Latest Videos

click me!