ಭಾರತದಲ್ಲಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ, ಹೊಸ ಮಾಡೆಲ್‌ಗಳು ಮಾರುಕಟ್ಟೆಗೆ ಬರಲು ಪ್ರಾರಂಭಿಸಿವೆ.
ಬ್ಯಾಟರಿ, ರೇಂಜ್ ಮತ್ತು ಫೀಚರ್‌ಗಳು
ವಿಯೆಟ್ನಾಂನ ಎಲೆಕ್ಟ್ರಿಕ್ ಕಾರ್ VinFast VF3 ಎಲೆಕ್ಟ್ರಿಕ್ ಕಾರಿನಲ್ಲಿ 18.64 kWh ಬ್ಯಾಟರಿ ಪ್ಯಾಕ್ ಸಿಗಲಿದೆ.
ಅಳತೆಗಳ ಬಗ್ಗೆ ಹೇಳುವುದಾದರೆ, VF3 ಎಲೆಕ್ಟ್ರಿಕ್ ಕಾರಿನ ಉದ್ದ 3,190mm, ಅಗಲ 1,679mm ಮತ್ತು ಎತ್ತರ 1,652mm ಇದೆ. ಇದು MG Comet EV ಜೊತೆ ಪೈಪೋಟಿ ನಡೆಸುವ ಸಾಧ್ಯತೆಯಿದೆ.
ಸುರಕ್ಷತೆಗಾಗಿ, ಇದರಲ್ಲಿ 2 ಏರ್‌ಬ್ಯಾಗ್‌ಗಳು, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ನೀಡಲಾಗಿದೆ. ಕಾರು ಕಡಿಮೆ ಬೆಲೆಯಲ್ಲೂ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಲು ಮುಂದಾಗಿದೆ.
VinFast VF3 ಬೆಲೆ ರೂ.10 ಲಕ್ಷ ಎಕ್ಸ್ ಶೋ ರೂಂ ಬೆಲೆಯಲ್ಲಿ ಪ್ರಾರಂಭವಾಗುತ್ತದೆ ಅಷ್ಟೇ. ಇದು ಸಾಮಾನ್ಯ ಮಧ್ಯಮ ವರ್ಗದವರಿಗೆ ಖರೀದಿಸಲು ಅನುಕೂಲವಾಗಲಿದೆ.