
70 ವರ್ಷಗಳ ಇತಿಹಾಸದ ಟೊಯೋಟಾ ಲ್ಯಾಂಡ್ ಕ್ರೂಸರ್ 300 ಬುಕಿಂಗ್ ಆರಂಭಿಸಿದೆ. ಹೊಸ ವಿನ್ಯಾಸ, ಹೊಸ ಪವರ್, ಆಕರ್ಷಕ ವಿನ್ಯಾಸ, ಹೊಸ ಫೀಚರ್, ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆ ಈ ಕಾರಿನಲ್ಲಿ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೆಲ ನಾಯಕರು ಲ್ಯಾಂಡ್ ಕ್ರೂಸರ್ ವಾಹನ ಬಳಸುತ್ತಾರೆ. ಅತ್ಯಂತ ಸುರಕ್ಷತೆಯ ಈ ಕಾರು ಇದೀಗ ಹೊಸ ರೂಪದಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಬುಕಿಂಗ್ ಆರಂಭಗೊಂಡಿದೆ.
ಲ್ಯಾಂಡ್ ಕ್ರೂಸರ್ 300 ಕಾರು ಐಷಾರಾಮಿತನ ಮತ್ತು ಆಫ್ ರೋಡ್ ಸಾಮರ್ಥ್ಯವನ್ನು ಬಯಸುವ ಡ್ರೈವಿಂಗ್ ಉತ್ಸಾಹಿಗಳ ನಿರೀಕ್ಷೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ವಿಶ್ವಾಸಾರ್ಹತೆ, ಅದ್ಭುತ ಪ್ರೆಸೆನ್ಸ್ ಮತ್ತು ಉತ್ತಮ ಕಾರ್ಯಕ್ಷಮತೆಗಾಗಿ ಹೆಸರುವಾಸಿಯಾಗಿರುವ ಲ್ಯಾಂಡ್ ಕ್ರೂಸರ್ 300 ಟೊಯೋಟಾದ ಜಾಗತಿಕ ಶ್ರೇಣಿಯ ಪ್ರಮುಖ ಎಸ್‌ಯುವಿ ಆಗಿದೆ. ಇದೀಗ ಬಂದಿರುವ ಹೊಸ ಅಪ್ ಡೇಟೆಡ್ ವರ್ಷನ್ ಹೊಸ ಪ್ಲಾಟ್ ಫಾರ್ಮ್, ಸುಧಾರಿತ ಪವರ್ ಟ್ರೇನ್, ಅತ್ಯಾಧುನಿಕ ಸುರಕ್ಷತಾ ಫೀಚರ್ ಗಳು ಮತ್ತು ಶ್ರೀಮಂತ ಇಂಟೀರಿಯರ್ ನ ಸೊಗಸಾದ ಮಿಶ್ರಣವಾಗಿದೆ. ಐಷಾರಾಮಿತನ, ಪವರ್ ಮತ್ತು ಅದ್ಭುತ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿದೆ.
ಲ್ಯಾಂಡ್ ಕ್ರೂಸರ್ 300 ಎರಡು ಮಾದರಿಯಲ್ಲಿ ಬಿಡುಗಡೆಯಾಗಿದೆ. ZX ಗ್ರೇಡ್ ಹಾಗೂ GRS ಗ್ರೇಡ್. ಝಡ್ಎಕ್ಸ್ ಗ್ರೇಡ್' ಬೆಲೆ ರೂ. 2,31,00,000 (ಎಕ್ಸ್ ಶೋರೂಂ) ಮತ್ತು 'ಜಿಆರ್-ಎಸ್ ಗ್ರೇಡ್' ಬೆಲೆ ರೂ. 2,41,00,000 ಎಕ್ಸ್ ಶೋರೂಂ (ಎಕ್ಸ್ ಶೋ ರೂಂ ಮಟ್ಟದಲ್ಲಿ ಬೆಲೆಗಳು ದೇಶದಾದ್ಯಂತ ಒಂದೇ ಆಗಿರುತ್ತವೆ)
ಹೊರಾಂಗಣ ಫೀಚರ್ ಗಳು
ಅಟೋ ಲೆವೆಲಿಂಗ್ ಮತ್ತು ಹೆಡ್ ಲ್ಯಾಂಪ್ ವಾಷರ್ ಗಳುಳ್ಳ ಎಲ್ಇಡಿ ಹೆಡ್ ಲ್ಯಾಂಪ್‌ಗಳು.
ರೇರ್ ಎಲ್ಇಡಿ ಕಾಂಬಿ ಲ್ಯಾಂಪ್
ಫ್ರಂಟ್ ಮತ್ತು ರೇರ್ ಸೀಕ್ವೆನ್ಷಿಯಲ್ ಟರ್ನ್ ಇಂಡಿಕೇಟರ್ ಗಳು
ಫ್ರಂಟ್ ಮತ್ತು ರೇರ್ ಎಲ್ಇಡಿ ಫಾಗ್ ಲ್ಯಾಂಪ್ ಗಳು
ಇಲ್ಯುಮಿನೇಟೆಡ್ ಸೈಡ್ ಸ್ಟೆಪ್ಸ್*
ಜಾಮ್ ಪ್ರೊಟೆಕ್ಷನ್ ಹೊಂದಿರುವ ಸನ್‌ರೂಫ್
ರೂಫ್ ರೇಲ್ಸ್
ರಿಚ್ ಗ್ಲೋಸ್ ಇರುವ ಪ್ರೀಮಿಯಂ ಬಾಡಿ ಕೋಟಿಂಗ್
ಸೌಕರ್ಯ ಮತ್ತು ಅನುಕೂಲತೆ
ಸ್ಮೂತ್ ಲೆದರ್ ಅಪ್ ಹೋಲ್ ಸ್ಟರಿ
ಫ್ರಂಟ್ ಮತ್ತು ರೇರ್ ಸೀಟ್ ವೆಂಟಿಲೇಷನ್ ಮತ್ತು ಹೀಟಿಂಗ್
ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್
ದೊಡ್ಡ ಕೂಲ್ ಬಾಕ್ಸ್
ರಿಕ್ಲೈನ್ ಸೌಲಭ್ಯದ ಜೊತೆ 40:20:40 ರೇರ್ ಸೀಟ್
5 ಡ್ರೈವ್ ಮೋಡ್ + ಕಸ್ಟಮೈಸ್ ಮಾಡಿದ ಡ್ರೈವ್ ಮೋಡ್‌ಗಳು
ಫ್ರಂಟ್ ಮತ್ತು ರೇರ್ ಡಿಫಾಗರ್
ವೈಯಕ್ತಿಕವಾಗಿ ಅಡ್ಜಸ್ಟ್ ಮಾಡಬಹುದಾದ ಹೆಡ್ ರೆಸ್ಟ್ ಗಳು
ಕಪ್ ಹೋಲ್ಡರ್ ಜೊತೆಗೆ ಕನ್ವರ್ಟಿಬಲ್ ರೇರ್ ಆರ್ಮ್ ರೆಸ್ಟ್
ಸ್ಟಾರ್ಟ್/ಸ್ಟಾಪ್ ಬಟನ್ ಜೊತೆಗೆ ಸ್ಮಾರ್ಟ್ ಎಂಟ್ರಿ ಸಿಸ್ಟಮ್
ಹೈಡ್ರಾಲಿಕ್ ಪವರ್ ಸ್ಟೀರಿಂಗ್ [ಇ-ಟಿಲ್ಟ್ + ಟೆಲಿಸ್ಕೋಪಿಕ್]
• 8 ವೇ ಪವರ್ ಅಡ್ಜಸ್ಟಬಲ್ ಫ್ರಂಟ್ ಸೀಟ್‌ಗಳು [ಡ್ರೈವರ್ ಸೀಟ್‌ಗೆ ಲಂಬರ್ ಸಪೋರ್ಟ್]
ಉತ್ತಮ ಗೋಚರತೆಗಾಗಿ ಹೆಡ್ ಅಪ್ ಡಿಸ್ಪ್ಲೇ
ಮುಂಭಾಗದ ಆಸನಗಳಿಗೆ ವೈರ್‌ಲೆಸ್ ಚಾರ್ಜರ್
ಆಟೋ-ಡಿಮ್ಮಿಂಗ್ ಫಂಕ್ಷನ್ ಜೊತೆಗೆ ಇಂಟೀರಿಯರ್ ರೇರ್ ವ್ಯೂ ಮಿರರ್
ಕಿಕ್ ಸೆನ್ಸರ್ ಹೊಂದಿರುವ ಪವರ್ ಬ್ಯಾಕ್ ಡೋರ್*
ಒಳಾಂಗಣ ಫೀಚರ್ ಗಳು
ಎಲ್ಇಡಿ ಡೋರ್ ಕರ್ಟಸಿ ಲ್ಯಾಂಪ್
4 ಜೋನ್ ಸ್ವಯಂಚಾಲಿತ ಹವಾನಿಯಂತ್ರಣ ವ್ಯವಸ್ಥೆ
ಹೀಟ್ ಶೀಲ್ಡ್ ಜೊತೆಗೆ ಗ್ರೀನ್ ಲ್ಯಾಮಿನೇಟೆಡ್ ಅಕೌಸ್ಟಿಕ್ ಗ್ಲಾಸ್
ಇಲ್ಯುಮಿನೇಟೆಡ್ ಎಂಟ್ರಿ ಸಿಸ್ಟಮ್
14ಎನ್ ಸ್ಪೀಕರ್ ಜೊತೆಗೆ 31.24 ಸೆಂಮೀನ ಆಡಿಯೋ ಸಿಸ್ಟಮ್ ಮತ್ತು ಆಪಲ್ ಕಾರ್ ಪ್ಲೇ & ಆಂಡ್ರಾಯ್ಡ್ ಅಟೋ ವ್ಯವಸ್ಥೆ.
ರೇರ್ ಸೀಟ್ ಎಂಟರ್ ಟೇನ್ ಮೆಂಟ್ [ಹೆಡ್ ರೆಸ್ಟ್ ಮೌಂಟೆಡ್ 2]
ಲೆದರ್ ಆಕ್ಸೆಂಟೆಡ್ ಗೇರ್ ಶಿಫ್ಟ್ ನಾಬ್
ಸುರಕ್ಷತೆ ಮತ್ತು ಭದ್ರತೆ
• ಟೊಯೋಟಾ ಸೇಫ್ಟಿ ಸೆನ್ಸ್
ಟೊಯೋಟಾ ಕನೆಕ್ಟೆಡ್ ಸರ್ವೀಸ್ ಗಳು
• ಟೊಯೋಟಾ ಐ-ಕನೆಕ್ಟ್ ಆಪ್ ಜೊತೆಗೆ ಟೊಯೋಟಾ ಕನೆಕ್ಟೆಡ್ ಸರ್ವೀಸ್ ಗಳು
• ರಿಮೋಟ್ ಏರ್ ಕಂಡಿಷನರ್ ಪ್ಯಾಕೇಜ್
• ಕದ್ದು ಹೋದ ವಾಹನ ಟ್ರ್ಯಾಕಿಂಗ್
• ಅಟೋಮ್ಯಾಟಿಕ್ ಕೊಲಿಷನ್ ನೋಟಿಫಿಕೇಷನ
• ಎಸ್ ಓ ಎಸ್ ಎಂರ್ಜೆನ್ಸಿ ಕಾಲ್