ಮಾರುತಿ ಸುಜುಕಿ ಬಲೆನೊ, ಟೊಯೋಟಾ ಗ್ಲಾನ್ಜಾ
ಈ ಎರಡೂ ಕಾರುಗಳನ್ನು ಮಾರುತಿ ಸುಜುಕಿ ಮತ್ತು ಟೊಯೋಟಾ ಕಂಪನಿಗಳು ತಯಾರಿಸುತ್ತಿವೆ. ಇವು 1.2-ಲೀಟರ್, K-ಸರಣಿಯ ಎಂಜಿನ್ ಹೊಂದಿವೆ. ಇದು 30.61 ಕಿ.ಮೀ. ಮೈಲೇಜ್ ನೀಡುತ್ತವೆ. ಬಲೆನೊ CNG ಬೆಲೆ ರೂ. 8.40 ಲಕ್ಷದಿಂದ ರೂ. 9.33 ಲಕ್ಷ (ಎಕ್ಸ್-ಶೋ ರೂಂ) ಆಗಿದ್ದರೆ, ಗ್ಲಾನ್ಜಾ ಬಲೆನೊಗಿಂತ ರೂ.25,000 ಹೆಚ್ಚು.
ಮಾರುತಿ ಸುಜುಕಿ ಎಸ್-ಪ್ರೆಸ್ಸೊ
ಮಾರುತಿ ಸುಜುಕಿ ಎಸ್-ಪ್ರೆಸ್ಸೊ 32.73 ಮೈಲೇಜ್ ನೀಡುತ್ತದೆ. ಇದು 1-ಲೀಟರ್ K-ಸರಣಿಯ ಪೆಟ್ರೋಲ್ ಎಂಜಿನ್‌ನಿಂದ ಕಾರ್ಯನಿರ್ವಹಿಸುತ್ತದೆ. ಎರಡು ಟ್ರಿಮ್‌ಗಳಲ್ಲಿ ಲಭ್ಯವಿದೆ. ಇದರ ಬೆಲೆ ರೂ. 5.91 ಲಕ್ಷದಿಂದ ರೂ. 6.11 ಲಕ್ಷ (ಎಕ್ಸ್-ಶೋ ರೂಂ) ವರೆಗೆ ಇದೆ.