ಐದೂವರೆ ಲಕ್ಷ ರೂ ಈ ಮಾರುತಿ ಕಾರಿಗೆ ಎಲ್ಲಿಲ್ಲದ ಬೇಡಿಕೆ, ಮಾರಾಟದಲ್ಲಿ ಮೊದಲ ಸ್ಥಾನ

Published : Jul 07, 2025, 12:53 PM IST

ಮಾರುತಿ ಸುಜುಕಿ ಕಂಪನಿಯ ಐದೂವರೆ ಲಕ್ಷ ರೂಪಾಯಿ ಮೌಲ್ಯದ ವ್ಯಾಗನ್ ಆರ್ ಕಾರು ಇದೀಗ ಎಲ್ಲರ ನೆಚ್ಚಿನ ಕಾರಾಗಿ ಹೊರಹೊಮ್ಮಿದೆ, ಬೆಲೆಯೂ ಕಡಿಮೆ, ಉತ್ತಮ ಸ್ಥಳಾವಕಾಶ , ಅಡ್ವಾನ್ಸ್ ಫೀಚರ್ಸ್ ಸೇರಿದಂತೆ ಎಲ್ಲಾ ಸೌಲಭ್ಯ ಇದರಲ್ಲಿದೆ. ಇದೀಗ ವ್ಯಾಗನ್ಆರ್ ಕಾರು ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ.  

PREV
14
ವ್ಯಾಗನ್ ಆರ್ ಕಾರಿಗೆ ಭಾರಿ ಬೇಡಿಕೆ

ಮಾರುತಿ ಸುಜುಕಿ ಕಾರುಗಳು ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗು ಕಾರಾಗಿ ಹೊರಹೊಮ್ಮಿದೆ. ಟಾಪ್ 10 ಪಟ್ಟಿಯಲ್ಲಿ ಬಹುತೇಕ ಕಾರುಗಳು ಮಾರುತಿ ಸುಜುಕಿ ಕಾರುಗಳಾಗಿವೆ.  ಈ ಪೈಕಿ ಕಡಿಮೆ ಬೆಲೆ ಹಾಗೂ ಉತ್ತಮ ಸ್ಥಳವಕಾಶದ ಕಾರಿಗೆ ಬಾರಿ ಬೇಡಿಕೆ. ಹೀಗಾಗಿ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಭಾರತ ಬಹು ಬೇಡಿಕೆಯ ಕಾರಾಗಿ ಮಾರ್ಪಟ್ಟಿದೆ. ಇದೀಗ ಜನವರಿಯಿಂದ ಜೂನ್ ತಿಂಗಳ ವರೆಗಿನ ಅಂಕಿ ಅಂಶದಲ್ಲಿ ಮಾರುತಿ ವ್ಯಾಗನ್ ಆರ್ ಕಾರು ನಂಬರ್ 1 ಸ್ಥಾನ ಪಡೆದಿದೆ. ಐದೂವರೆ ಲಕ್ಷ ರೂಪಾಯಿ ಬೆಲೆಯ ವ್ಯಾಗನ್ ಆರ್ ಕಾರನ್ನು ಖರೀದಿಸಲು ಎಲ್ಲರೂ ಮುಗಿ ಬೀಳುತ್ತಿದ್ದಾರೆ. 

ನಾಲ್ಕು ವರ್ಷಗಳಿಂದ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಮಾರುತಿ ಸುಜುಕಿ ವ್ಯಾಗನ್ R, 2025ರ ಜನವರಿ-ಜೂನ್ ಅವಧಿಯಲ್ಲೂ ಮೊದಲ ಸ್ಥಾನದಲ್ಲಿದೆ. ಈ ಅವಧಿಯಲ್ಲಿ 101,424 ಯುನಿಟ್‌ಗಳು ಮಾರಾಟವಾಗಿವೆ.

24
ಪ್ರೀಮಿಯಂ ಫೀಚರ್ಸ್

ವ್ಯಾಗನ್ R ನ ಯಶಸ್ಸಿಗೆ ಅದರ ವಿಶಾಲವಾದ ಒಳಭಾಗ, ಕಡಿಮೆ ಬೆಲೆ ಮತ್ತು ಮಾರುತಿ ಸುಜುಕಿಯ ವ್ಯಾಪಕ ಸೇವಾ ಜಾಲ ಮುಖ್ಯ ಕಾರಣಗಳು. ಜನವರಿ-ಜೂನ್ ಅವಧಿಯಲ್ಲಿ ಹುಂಡೈ ಕ್ರೆಟಾ ಎರಡನೇ ಸ್ಥಾನದಲ್ಲಿದೆ. ಇತರ ಪ್ರೀಮಿಯಂ ಕಾರಿನಲ್ಲಿರುವ ಎಲ್ಲಾ ಫೀಚರ್ಸ್ ವ್ಯಾಗನ್ ಆರ್ ಕಾರಿನಲ್ಲಿದೆ. ಪ್ರಮುಖವಾಗಿ ಹೆಡ್‌ರೂಂ ಉತ್ತಮವಾಗಿದೆ, ಫ್ಯಾಮಿಲಿ ಕಾರಾಗಿ, ಯುವ ಸಮೂಹಕ್ಕೆ ಸ್ಪೋರ್ಟ್ ಕಾರಾಗಿ ಸೇರಿದಂತೆ ಎಲ್ಲಾ ರೀತಿಯಲ್ಲಿ ವ್ಯಾಗನ್ ಆರ್ ಕಾರು ಹೆಚ್ಚು ಸೂಕ್ತವಾಗಿ ಹೊಂದಿಕೊಳ್ಳುತ್ತದೆ. 

34
5.64 ಲಕ್ಷ ರೂಪಾಯಿ

ಪೆಟ್ರೋಲ್ ಮತ್ತು ಡೀಸೆಲ್ ರೂಪಾಂತರಗಳಲ್ಲಿ ಲಭ್ಯವಿರುವ ಕ್ರೆಟಾ, ಜನವರಿಯಲ್ಲಿ ತನ್ನ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿತು. 2025ರ ಮಾರ್ಚ್, ಏಪ್ರಿಲ್ ಮತ್ತು ಜೂನ್ ತಿಂಗಳಿನಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಇದಾಗಿದೆ. ಆದರೆ 6 ತಿಂಗಳಿಗೆ ಹೋಲಿಸಿದರೆ ವ್ಯಾಗನ್ಆರ್ ಮೊದಲ ಸ್ಥಾನದಲ್ಲಿದೆ. 

ಮಾರುತಿ ವ್ಯಾಗನ್ಆರ್ ಕಾರಿನ ಆರಂಭಿಕ ಬೆಲೆ 5.64 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಕೈಗೆಟುಕುವ ದರದಲ್ಲಿ ದೊಡ್ಡ ಗಾತ್ರ ಹಾಗೂ ಎಲ್ಲಾ ಫೀಚರ್ಸ್ ಲಭ್ಯವಾಗಿರುವ ಕಾರಣ ಮಧ್ಯಮ ವರ್ಗದ ಮೊದಲ ಆಯ್ಕೆಯಾಗಿದೆ.

44
ಟಾಪ್ 10 ಪಟ್ಟಿ

ಟಾಪ್ 10 ಪಟ್ಟಿಯಲ್ಲಿ ಆರು SUV ಗಳು, ಎರಡು ಹ್ಯಾಚ್‌ಬ್ಯಾಕ್‌ಗಳು, ಒಂದು ಸೆಡಾನ್ ಮತ್ತು ಒಂದು MPV ಸ್ಥಾನ ಪಡೆದಿವೆ. 11 ರಿಂದ 13ನೇ ಸ್ಥಾನದಲ್ಲಿ ಮೂರು ಮಾರುತಿ ಸುಜುಕಿ ಕಾರುಗಳಿವೆ.

Read more Photos on
click me!

Recommended Stories