ನವೆಂಬರ್, ಈ ಕಾರ್ತಿಕ ಮಾಸದಲ್ಲಿ ಮಾರಕಟ್ಟೆ ಬರೋ ಕಾರ್‌ಗಳಿವು

First Published | Nov 3, 2024, 8:23 AM IST

ನವೆಂಬರ್‌ನಲ್ಲಿ ಸುಜುಕಿ ಮತ್ತು ಸ್ಕೋಡಾದ 3 ಹೊಸ ಕಾರುಗಳು ಭಾರತದಲ್ಲಿ ಬಿಡುಗಡೆಯಾಗಲಿವೆ. ಕಾರ್ತಿಕ ಮಾಸವಾಗಿದ್ದು, ಒಳ್ಳೇ ಕೆಲಸಕ್ಕೆ ಸಾಕಷ್ಟು ಶುಭ ಮುಹೂರ್ತಗಳೂ ಇರುತ್ತವೆ. ಕಾರು ಕೊಳ್ಳುವ ಐಡಿಯಾವಿದ್ದರೆ, ನೋಡಿ ಮಾರುಗಟ್ಟೆಗೆ ಬರುತ್ತಿರುವ ಬೇರೆ ಬೇರೆ ಕಂಪನಿಗಳ ಕಾರುಗಳಿವು.

ಈಗಲೇ ಹಬ್ಬದ ಸಮಯದಲ್ಲಿ ಹಲವು ಸ್ಪೆಷಲ್ ಎಡಿಷನ್ ಕಾರುಗಳು ಬಿಡುಗಡೆಯಾಗುತ್ತಿವೆ. ಮಾರುತಿ ಎರಡು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ. ಸ್ಕೋಡಾ ಕೂಡ ಹೊಸ SUV ಕಾರನ್ನು ಬಿಡುಗಡೆ ಮಾಡಲಿದೆ. 

ಮಾರುತಿ ಸುಜುಕಿ eVX

2023 ಆಟೋ ಎಕ್ಸ್‌ಪೋದಲ್ಲಿ ಕಾನ್ಸೆಪ್ಟ್ ಆಗಿ ತೋರಿಸಿದ್ದ ಮಾರುತಿ ಸುಜುಕಿಯ eVX ಕಾರು ನವೆಂಬರ್ 4 ರಂದು ಇಟಲಿಯ ಮಿಲನ್‌ನಲ್ಲಿ ಎಲೆಕ್ಟ್ರಿಕ್ SUV ಆಗಿ ಬಿಡುಗಡೆಯಾಗಲಿದೆ. eVX 60kWh ಬ್ಯಾಟರಿಯನ್ನು ಹೊಂದಿರುತ್ತದೆ, ಇದು 500km ಮೈಲೇಜ್ ನೀಡುತ್ತದೆ ಎನ್ನಲಾಗಿದೆ. AWD ಸಿಸ್ಟಮ್‌ನೊಂದಿಗೆ ಬರುವ ನಿರೀಕ್ಷೆ ಇದೆ. ಮಾರ್ಚ್ 2025ಕ್ಕೆ ಮಾರಾಟ ಶುರು ಮಾಡಲಿದೆ.

Tap to resize

ಸ್ಕೋಡಾ ಕೈಲಾಕ್

ಸ್ಕೋಡಾ ಕೈಲಾಕ್, ನವೆಂಬರ್ 6 ರಂದು ಬಿಡುಗಡೆಯಾಗಲಿದೆ. ಇದು ಸ್ಕೋಡಾದ ಹೊಸ ಸಬ್-ಕಾಂಪ್ಯಾಕ್ಟ್ SUV. MQB-A0-IN ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಕುಶಾಕ್ ಸರಣಿಯಲ್ಲಿ ಬಿಡುಗಡೆಯಾಗಲಿದೆ. ಆದರೆ ಕುಶಾಕ್‌ಗಿಂತ ಕಡಿಮೆ ವೀಲ್‌ಬೇಸ್ ಹೊಂದಿರುತ್ತದೆ. 6-ಸ್ಪೀಡ್ MT ಮತ್ತು AT ಗೇರ್‌ಬಾಕ್ಸ್‌ನೊಂದಿಗೆ 1.0-ಲೀಟರ್ TSI ಟರ್ಬೋ-ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿರುತ್ತದೆ.

ಸುಜುಕಿ ಡಿಜೈರ್

ಮಾರುತಿ ತನ್ನ ಮೊದಲ EV ನಂತರ ಹೊಸ ಡಿಜೈರ್ ಕಾರನ್ನು ಬಿಡುಗಡೆ ಮಾಡಲಿದೆ. ಹೊಸ ಜೆನ್ ಸ್ವಿಫ್ಟ್ ಅನ್ನು ಆಧರಿಸಿದ್ದರೂ, ಅದರಿಂದ ಭಿನ್ನವಾಗಿರುತ್ತದೆ. ಹೊಸ ಡಿಜೈರ್ ಹೆಚ್ಚು ಶಾರ್ಪ್ ಮತ್ತು ಮೆಚ್ಯೂರ್ ಡಿಸೈನ್ ಹೊಂದಿದೆ. ಸ್ವಿಫ್ಟ್‌ನಂತೆಯೇ 1.2 ಲೀಟರ್, ಮೂರು ಸಿಲಿಂಡರ್ Z ಸೀರೀಸ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, 82hp ಮತ್ತು 112Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪೆಟ್ರೋಲ್-CNG ಆಯ್ಕೆಯನ್ನು ಸಹ ಪಡೆಯಬಹುದು.

Latest Videos

click me!