ಬೆಲೆ 5.64 ಲಕ್ಷ ರೂ, ಮಾರುತಿ ಸುಜುಕಿ ವ್ಯಾಗನರ್ ಸ್ಪೆಷಲ್ ಎಡಿಶನ್ ಕಾರು ಲಾಂಚ್!

First Published | Sep 20, 2024, 4:42 PM IST

ಮಾರುತಿ ಸುಜುಕಿಯ ಅತ್ಯಂತ ಜನಪ್ರಿಯ ಹಾಗೂ ಗರಿಷ್ಠ ಮಾರಾಟದ ಕಾರ ವ್ಯಾಗನರ್ ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ವಾಲ್ಟ್ಜ್ ಸ್ಪೆಷಲ್ ಎಡಿಶನ್ ಕಾರು ಇದಾಗಿದ್ದು ಕೇವಲ 5.64 ಲಕ್ಷ ರೂಗೆ ಲಭ್ಯವಿದೆ.

ಮಾರುತಿ ಸುಜುಕಿ ಭಾರತದ ಕಾರು ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿದೆ. ಮಾರುತಿ ಕಾರುಗಳು ಪೈಕಿ ಗರಿಷ್ಠ ಮಾರಾಟ ಕಂಡಿರುವ ಮಾರುತಿ ಸಜುಕಿ ವ್ಯಾಗನರ್ ಕಾರು ಇದೀಗ ಸ್ಪೆಷಲ್ ಎಡಿಶನ್‌ನಲ್ಲಿ ಬಿಡುಗಡೆಯಾಗಿದೆ. ಅತ್ಯಾಕರ್ಷಕ ವಿನ್ಯಾಸ, ಹೊಸ ಫೀಚರ್ಸ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ನೂತನ ವಾಲ್ಟ್ಜ್ ಎಡಿಶನ್ ಕಾರು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಹೊಚ್ಚ ಹೊಸ ವ್ಯಾಗನರ್ ಸ್ಪೆಷಲ್ ಎಡಿಶನ್ ಕಾರಿನ ಬೆಲೆ 5.64 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ಎಂದು ಕಂಪನಿ ಘೋಷಿಸಿದೆ. ಕೈಗೆಟುಕುವ ದರದಲ್ಲಿ ಫ್ಯಾಮಿಲಿ ಕಾರು ಬಿಡುಗಡೆ ಮಾಡಲಾಗಿದೆ. ಸ್ಪೆಷಲ್ ಎಡಿಶನ್ ಕಾರಾಗಿರುವ ಕಾರಣ ಹಲವು ಫೀಚರ್ಸ್ ಈ ಕಾರಿನಲ್ಲಿ ಲಭ್ಯವಿದೆ. ಇದು ಸಾಮಾನ್ಯ ವ್ಯಾಗನರ್‌ಗೆ ಹೋಲಿಸಿದರೆ ಹಲವು ಸ್ಟಾಂಡರ್ಡ್ ವರ್ಶನ್ ಫೀಚರ್ಸ್  ಈ ಕಾರಿನಲ್ಲಿ ನೀಡಲಾಗಿದೆ.

Tap to resize

ಫಾಗ್ ಲ್ಯಾಂಪ್ಸ್, ವ್ಹೀಲ್ ಆರ್ಚ್ ಕ್ಲಾಡಿಂಗ್, ಬಂಬರ್ ಪ್ರೊಟೆಕ್ಟರ್ಸ್, ಕಾರಿನೊಳಗೆ ಹೊಸ ಫ್ಲೋರ್ ಮ್ಯಾಟ್ಸ್, ಸ್ಟೈಲಿಂಗ್ ಕಿಟ್ಸ್, ಮುಂಭಾಗದಲ್ಲಿ ಕ್ರೋಮ್ ಫಿನೀಶಿಂಗ್ ಗ್ರಿಲ್, ಟಚ್ ಸ್ಕ್ರೀನ್ ಮ್ಯೂಸಿಕ್ ಸಿಸ್ಟಮ್, ರೇರ್ ವೀವ್ಯೂ ಪಾರ್ಕಿಂಗ್ ಸೇರಿದಂತೆ ಕೆಲ ಕಡ್ಡಾಯ ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿದೆ.

ಹೊಸ ಸ್ಪೆಷಲ್ ಎಡಿಶನ್ ವ್ಯಾಗನರ್ ಕಾರು  1.0 ಲೀಟರ್, 102 ಲೀಟರ್ ಎಂಜಿನ್ ಹಾಗೂ ಸಿಎನ್‌ಜಿ ವರ್ಶನ್‌ನಲ್ಲಿ ಲಭ್ಯವಿದೆ. 1.0 ಲೀಟರ್ ಎಂಜಿನ್ 66 ಬಿಹೆಚ್‌ಪಿ ಪವರ್ ಹಾಗೂ 89 ಎನಎಂ ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು ಸಿಎನ್‌ಜಿ ವರ್ಶನ್ 56 ಬಿಹೆಚ್‌ಪಿ ಪವರ್ ಹಾಗೂ 82ಎನ್ಎಂ ಟಾರ್ಕ್ ಉತ್ಪಾದಿಸಲಿದೆ. ಇನ್ನು 1.2 ಲೀಟರ್ ಪೆಟ್ರೋಲ್ ಎಂಜಿನ್ ಕಾರು 89 ಬಿಹೆಚ್‌ಪಿ ಪವರ್ ಹಾಗೂ 113 ಎನ್ಎಂ ಟಾರ್ಕ್ ಉತ್ಪಾದಿಸಲಿದೆ.

ಸ್ಪೆಷಲ್ ಎಡಿಶನ್ ವ್ಯಾಗನರ್ ಮೂರು ವೇರಿಯೆಂಟ್‌ನಲ್ಲಿ ಲಭ್ಯವಿದೆ.  LXi, VXi,ಹಾಗೂ ZXi. ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆಯೂ ಲಭ್ಯವಿದೆ. 

ಸ್ಪೆಷಲ್ ಎಡಿಶನ್ ಕಾರಿನ ಬೆಲೆ 5.64 ಲಕ್ಷ ರೂಪಾಯಿ ಆಗಿದ್ದರೆ, ಸಾಮಾನ್ಯ ವ್ಯಾಗನಆರ್ ಕಾರಿನ ಬೆಲೆ 5.54 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಟಾಪ್ ವೇರಿಯೆಂಟ್ ಬೆಲೆ 7.33 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 

Latest Videos

click me!