ಮಾರುತಿ ಕಾರು ಬೆಲೆ 3.69 ಲಕ್ಷ ರೂನಿಂದ ಆರಂಭ, ಜಿಎಸ್‌ಟಿ ಇಳಿಕೆ ಬಳಿಕ ಪರಿಷ್ಕೃತ ದರ ಘೋಷಣೆ

Published : Sep 18, 2025, 03:50 PM IST

ಮಾರುತಿ ಕಾರು ಬೆಲೆ 3.69 ಲಕ್ಷ ರೂನಿಂದ ಆರಂಭ, ಜಿಎಸ್‌ಟಿ ಇಳಿಕೆ ಬಳಿಕ ಪರಿಷ್ಕೃತ ದರ ಘೋಷಣೆ, ಮಾರುತಿ ಸುಜುಕಿ ಕಾರುಗಳ ಬೆಲೆ ಭಾರಿ ಇಳಿಕೆಯಾಗಿದೆ. ಜಿಎಸ್‌ಟಿ ಕಡಿತದ ಪರಿಣಾಮ ಸೆ.22ರಿಂದ ಮಾರುತಿ ಕಾರಿನ ಬೆಲೆ 3.69 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ.  ಪರಿಷ್ಕೃತ ದರ ಘೋಷಣೆ ಮಾಡಲಾಗಿದೆ.

PREV
15
ಮಾರುತಿ ಸುಜುಕಿ ಕಾರುಗಳ ಬೆಲೆ ಭಾರಿ ಇಳಿಕೆ

ಕೇಂದ್ರ ಸರ್ಕಾರ ಜಿಎಸ್‌ಟಿ ಕಡಿತ ಮಾಡಿದೆ. ಇದರಿಂದ ಅಗತ್ಯ ವಸ್ತುಗಳು ಬೆಲೆಯೂ ಕಡಿಮೆಯಾಗುತ್ತಿದೆ. ಶೇಕಡಾ 28ರಷ್ಟಿದ್ದ ಜಿಎಸ್‌ಟಿ ತೆರಿಗೆಯನ್ನು ಶೇಕಡಾ 18 ಹಾಗೂ ಶೇಕಡಾ 5ಕ್ಕೆ ಇಳಿಸಲಾಗಿದೆ. ಸೆಪ್ಟೆಂಬರ್ 22 ರಿಂದು ಹೊಸ ಜಿಎಸ್‌‌ಟಿ ದರ ಜಾರಿಯಾಗುತ್ತಿದೆ. ಇದರ ಪರಿಣಾಮ ಕಾರುಗಳ ಬೆಲೆಯೂ ಭಾರಿ ಇಳಿಕೆಯಾಗಿದೆ. ಇದೀಗ ಜಿಎಸ್‌ಟಿ ಭಾರಿ ಇಳಿಕೆಯಿಂದ ಎಲ್ಲಾ ವಾಹನ ಕಂಪನಿಗಳು ದರ ಇಳಿಕೆ ಮಾಡಿದೆ. ಇದೀಗ ಮಾರುತಿ ಸುಜುಕಿ ಪರಿಷ್ಕೃತ ದರ ಘೋಷಣೆ ಮಾಡಿದೆ. ಸೆ.22ರಿಂದ ಮಾರುತಿ ಸುಜುಕಿ ಕಾರುಗಳು ಆರಂಭಿಕ ಬೆಲೆ ಕೇವಲ 3.69 ಲಕ್ಷ ರೂಪಾಯಿ ಮಾತ್ರ. ಮಾರುತಿ ಸುಜುಕಿಯ ಎಲ್ಲಾ ಕಾರುಗಳ ಬೆಲೆ ಕಡಿತಗೊಳ್ಳುತ್ತಿದೆ.

25
1 ಲಕ್ಷ ರೂಪಾಯಿಗೂ ಅಧಿಕ ಇಳಿಕೆ

ಮಾರುತಿ ಅಲ್ಟೋ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿ ಇಳಿಕೆಯಾಗಿದ್ದರೆ, ಇತ್ತ ಗ್ರ್ಯಾಂಡ್ ವಿಟಾರಾ ಸೇರಿದಂತೆ ಇತರ ಮಾರುತಿ ಕಾರುಗಳ ಬೆಲೆಯಲ್ಲೂ ಇದೇ ರೀತು ಲಕ್ಷ ರೂಪಾಯಿ ಇಳಿಕೆಯಾಗಿದೆ. ಇದರ ಪರಿಣಾಮ ಮಾರುತಿ ಸುಜುಕಿ ಕಾರುಗಳು ಇದೀಗ ಕೈಗೆಟುಕುವ ದರದಲ್ಲಿ ಲಭ್ಯವಿದೆ. ಸೆಪ್ಟೆಂಬರ್ 4 ರಂದ ಮಹತ್ವದ ಸಭೆ ಬಳಿಕ ಕೇಂದ್ರ ಸರ್ಕಾರ ಸೋಪ್‌ನಿಂದ ಕಾರುಗಳವರೆಗೆ ಜಿಎಸ್‌ಟಿ ಇಳಿಕೆ ಮಾಡಿದೆ. ಸುಮಾರು 100ಕ್ಕೂ ಹೆಚ್ಚು ವಸ್ತುಗಳ ಬೆಲೆ ಇಳಿಕೆಯಾಗಿದೆ. ಮಾರುತಿ ಸುಜುಕಿ ಬಹುತೇಕ ಎಲ್ಲಾ ಕಾರುಗಳ ಬೆಲೆಯಲ್ಲಿ ಸರಿಸುಮಾರು 1 ಲಕ್ಷ ರೂಪಾಯಿಗೂ ಅಧಿಕ ಕಡಿತವಾಗಿದೆ. ಮಾರುತಿ ಸುಜುಕಿಯ ಘೋಷಿಸಿದ ಪರಿಷ್ಕೃತ ದರದ ಪಟ್ಟಿ ಇಲ್ಲಿದೆ.

35
ಜಿಎಸ್‌ಟಿ ಕಡಿತದ ಬಳಿಕ ಮಾರುತಿ ಸುಜುಕಿ ಕಾರುಗಳ ಆರಂಭಿಕ ಬೆಲೆ (ಎಕ್ಸ್ ಶೋ ರೂಂ)

ಜಿಎಸ್‌ಟಿ ಕಡಿತದ ಬಳಿಕ ಮಾರುತಿ ಸುಜುಕಿ ಕಾರುಗಳ ಆರಂಭಿಕ ಬೆಲೆ (ಎಕ್ಸ್ ಶೋ ರೂಂ)

ಮಾರುತಿ ಸುಜುಕಿ ಅಲ್ಟೋ : 3,69,900 ರೂಪಾಯಿ ( 1,07,600 ರೂಪಾಯಿ ಕಡಿತ

ಮಾರುತಿ ಸುಜುಕಿ ವ್ಯಾಗನ್ಆರ್ : 4,98,900 ರೂಪಾಯಿ ( 79,600 ರೂಪಾಯಿ ಕಡಿತ)

ಮಾರುತಿ ಸುಜುಕಿ ಇಗ್ನಿಸ್ : 5,35,100 ರೂಪಾಯಿ ( 71,300 ರೂಪಾಯಿ ಕಡಿತ)

ಮಾರುತಿ ಸುಜುಕಿ ಸ್ವಿಫ್ಟ್ : 5,78,900 ರೂಪಾಯಿ ( 84,600 ರೂಪಾಯಿ ಕಡಿತ)

ಮಾರುತಿ ಸುಜುಕಿ ಬಲೆನೋ: 5,98, 900 ರೂಪಾಯಿ ( 86,100 ರೂಪಾಯಿ ಕಡಿತ)

ಮಾರುತಿ ಸುಜುಕಿ ಡಿಸೈರ್: 6,25,600 ರೂಪಾಯಿ (87,700 ರೂಪಾಯಿ ಕಡಿತ)

ಮಾರುತಿ ಸುಜುಕಿ ಫ್ರಾಂಕ್ಸ್ : 6,84,900 ರೂಪಾಯಿ (1,12,600 ರೂಪಾಯಿ ಕಡಿತ)

ಮಾರುತಿ ಸುಜುಕಿ ಬ್ರೆಜಾ : 8,25,900 ರೂಪಾಯಿ ( 1,12,700 ರೂಪಾಯಿ ಕಡಿತ)

45
ಮಾರುತಿ ಸುಜುಕಿ ಹೈಎಂಡ್ ಕಾರುಗಳ ಪರಿಷ್ಕತ ದರ ಪಟ್ಟಿ

ಮಾರುತಿ ಸುಜುಕಿ ಹೈಎಂಡ್ ಕಾರುಗಳ ಪರಿಷ್ಕತ ದರ ಪಟ್ಟಿ

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ : 10,76,500 ರೂಪಾಯಿ (1,07,00 ರೂಪಾಯಿ)

ಮಾರುತಿ ಸುಜುಕಿ ಜಮ್ನಿ : 12,31,500 ರೂಪಾಯಿ (51,900 ರೂಪಾಯಿ ಕಡಿತ )

ಮಾರುತಿ ಸುಜುಕಿ ಎರ್ಟಿಗಾ : 8,80,000 ರೂಪಾಯಿ ( 46,400 ರೂಪಾಯಿ ಕಡಿತ)

ಮಾರುತಿ ಸುಜುಕಿ XL6: 11,52,300 ರೂಪಾಯಿ (52,000 ರೂಪಾಯಿ ಕಡಿತ)

ಮಾರುತಿ ಸುಜುಕಿ ಇನ್‌ವಿಕ್ಟೋ: 24,97,400 ರೂಪಾಯಿ ( 61,700 ರೂಪಾಯಿ ಕಡಿತ)

55
ಜಿಎಸ್‌ಟಿ ಭಾರಿ ಇಳಿಕೆ

ಎಲೆಕ್ಟ್ರಿಕ್ ಕಾರುಗಳ ಮೇಲಿ ಜಿಎಸ್‌ಟಿ ಶೇಕಡಾ 5ರಷ್ಟು ಮಾತ್ರ. ಇನ್ನು 4 ಮೀಟರ್ ಉದ್ದ, 1,200 ಸಿಸಿ ಪೆಟ್ರೋಲ್ ಎಂಜಿನ್ ಹಾಗೂ 1500 ಸಿಸಿ ಡೀಸೆಲ್ ಎಂಜಿನ್ ಕಾರುಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 28ರಿಂದ ಶೇಕಡಾ 18ಕ್ಕೆ ಇಳಿಕೆ ಮಾಡಲಾಗಿದೆ. ಇನ್ನು ಲಕ್ಷುರಿ ಕಾರುಗಳು 1,500 ಸಿಸಿಗಿಂತ ಹೆಚ್ಚಿನ ಎಂಜಿನ್ ಕಾರುಗಳ ಮೇಲಿನ ಜಿಎಸ್‌ಟಿ ಶೇಕಡಾ 40ರಷ್ಟಿದೆ.

Read more Photos on
click me!

Recommended Stories