ಹೊಸ ವರ್ಷದ ಆಫರ್ ಮೂಲಕ ಕಾರು ಖರೀದಿ ಪ್ಲಾನ್ ಇದೆಯಾ? ಅಪ್‌ಡೇಟ್ ನೀಡಿದ ಮಹೀಂದ್ರ!

ಹೊಸ ವರ್ಷ ಸಮೀಪಿಸುತ್ತಿದೆ. ಇದರ ಬೆನ್ನಲ್ಲೇ ಕೆಲ ಕಂಪನಿಗಳು ಆಫರ್ ನೀಡುವುದು ಸಹಜ. ಈ ರೀತಿ ಆಫರ್ ಮೂಲಕ ಕಾರು ಖರೀದಿಸಲು ಪ್ಲಾನ್ ಮಾಡುತ್ತಿರುವ ಗ್ರಾಹಕರಿಗೆ ಮಹೀಂದ್ರ ಮಹತ್ವದ ಅಪ್‌ಡೇಟ್ ನೀಡಿದೆ.

Mahindra to hike car price up to 3 percent from new year 2025 ckm

ಕ್ರಿಸ್ಮಸ್, ಹೊಸ ವರ್ಷ ಬರುತ್ತಿದೆ. ಹೀಗಾಗಿ ಕೆಲ ಕಂಪನಿಗಳು ಮಾರಾಟ ಹೆಚ್ಚಿಸಲು ಸಾಮಾನ್ಯವಾಗಿ ಆಫರ್ ನೀಡುತ್ತದೆ. ಕಾರು, ಬೈಕ್, ಎಲೆಕ್ಟ್ರಾನಿಕ್ ಐಟಮ್ ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಆಫರ್ ಲಭ್ಯವಿದೆ. ಇದರಿಂದ ಗ್ರಾಹಕರಿಗೆ ಉತ್ಪನ್ನ ಜೊತೆ ಇತರ ಕೊಡುಗೆಗಳು ಲಭ್ಯವಾಗಲಿದೆ. ಇತ್ತೀಗೆ ಮಹೀಂದ್ರ ಅತ್ಯಾಕರ್ಷಕ ಎಲೆಕ್ಟ್ರಿಕ್ ಕಾರು, ಎಸ್‌ಯುವಿ ಕಾರನ್ನು ಬಿಡುಗಡೆ ಮಾಡಿದೆ. ಕೈಗೆಟುಕುವ ದರದಲ್ಲಿ ಈ ಕಾರುಗಳನ್ನು ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಹೊಸ ಅಪ್‌ಡೇಟ್ ನೀಡಿದೆ.

Mahindra to hike car price up to 3 percent from new year 2025 ckm

ಹೊಸ ವರ್ಷಕ್ಕೆ ಕಾರು ಖರೀದಿಸಲು ಪ್ಲಾನ್ ಮಾಡಿರುವ ಗ್ರಾಹಕರಿಗೆ ನಿರಾಸೆಯಾಗಲಿದೆ. ಕಾರಣ ಆಫರ್ ಇರಲ್ಲ ಎಂದಲ್ಲ, ಹೊಸ ವರ್ಷ ಅಂದರೆ ಜನವರಿ 1, 2025ರಿಂದ ಮಹೀಂದ್ರ ಕಾರುಗಳ ಬೆಲೆ ಏರಿಕೆಯಾಗುತ್ತಿದೆ. ಮಹೀಂದ್ರ ಮಾತ್ರವಲ್ಲ ಈಗಾಗಲೇ ಹಲವು ಆಟೋಮೊಬೈಲ್  ಕಂಪನಿಗಳು ತಮ್ಮ ತಮ್ಮ ಕಾರುಗಳ ಬೆಲೆ ಏರಿಕೆ ಮಾಡಿದೆ. ಇದೀಗ ಮಹೀಂದ್ರ ಘೋಷಣೆ ಮಾಡಿದೆ.


ಮಹೀಂದ್ರ ತನ್ನ ಥಾರ್, ಎಕ್ಸ್‌ಯುವಿ 3ಎಕ್ಸ್0 ಬೊಲೆರೋ, ಬೊಲೆರೋ ನಿಯೋ, ಎಕ್ಸ್‌ಯವಿ 700, ಸ್ಕಾರ್ಪೋಯಿ ಎನ್, ಥಾರ್ ರಾಕ್ಸ್ ಹಾಗೂ ಎಕ್ಸ್‌ಯುವಿ400 ಇವಿ(ಎಲೆಕ್ಟ್ರಿಕ್ ಕಾರು)ಕಾರುಗಳ ಬೆಲೆ ಏರಿಕೆ ಮಾಡಿದೆ. ಮಹೀಂದ್ರ ತನ್ನ ಬಹುತೇಕ ಎಲ್ಲಾ ಕಾರುಗಳ ಬೆಲೆ ಏರಿಕೆ ಮಾಡಿದೆ. ಈ ಪೈಕಿ ಹೊಸದಾಗಿ ಬಿಡುಗಡೆ ಮಾಡಿದ ಬಿಐ 6ಇ ಹಾಗೂ ಎಕ್ಸ್‌ಇವಿ 9ಇ ಕಾರುಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಕಾರುಗಳ ಬೆಲೆ ಏರಿಕೆಯಾಗಿದೆ.

ಮಹೀಂದ್ರ ಕಾರುಗಳ ಬೆಲೆ ಹೊಸ ವರ್ಷದಿಂದ ಶೇಕಡಾ 3ರಷ್ಟು ಏರಿಕೆಯಾಗಲಿದೆ ಎಂದು ಘೋಷಿಸಿದೆ. ಆದರೆ ಪ್ರತಿ ಕಾರುಗಳ ಬೆಲೆಯಲ್ಲಿ ಗರಿಷ್ಠ ಏರಿಕೆ ಕುರಿತು ಮಾಹಿತಿ ನೀಡಿಲ್ಲ. ಇತ್ತೀಚೆಗೆ ಮಾರುತಿ ಸುಜುಕಿ, ಹ್ಯುಂಡೈ ಸೇರಿದಂತೆ ಪ್ರಮುಖ  ಆಟೋಮೊಬೈಲ್ ಕಂಪನಿಗಳು ಬೆಲೆ ಏರಿಕೆ ಮಾಡಿದೆ. ಇದೀಗ ಮಹೀಂದ್ರ ಸರದಿ.

ಕಚ್ಚಾ ವಸ್ತುಗಳ ಬೆಲೆ ಏರಿಕೆ, ಆಮದು ಸುಂಕ ಸೇರಿದಂತೆ ಹಲವು ಬೆಲೆ ಏರಿಕೆಯಿಂದ ಕಾರಿನ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಹೀಗಾಗಿ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದಿದೆ. ಬಹುತೇಕ ಕಾರು ಕಂಪನಿಗಳು ಶೇಕಡಾ 3ರಷ್ಟು ಬೆಲೆ ಏರಿಕೆ ಮಾಡಿದೆ. ಹ್ಯುಂಡೈ ಇಂಡಿಯಾ ಕೂಡ ಶೇಕಡಾ 3ರಷ್ಟು ಬೆಲೆ ಏರಿಕೆ ಮಾಡಿದೆ. ಮಾರುತಿ ಸುಜುಕಿ ಶೇಕಡಾ 4ರಷ್ಟು ಬೆಲೆ ಏರಿಕೆ ಮಾಡಿದೆ.

Latest Videos

click me!