ದೀಪಾವಳಿ ಹಬ್ಬಕ್ಕೆ ಟಾಟಾ ಮೋಟಾರ್ಸ್ ಕಾರುಗಳಿಗೆ ಎಲ್ಲಿಲ್ಲದ ಬೇಡಿಕೆ ವ್ಯಕ್ತವಾಗಿದೆ. ಗ್ರಾಹಕರು ಟಾಟಾ ಕಾರುಗಳನ್ನು ಬುಕ್ ಮಾಡುತ್ತಿದ್ದಾರೆ. ಹಲವರು ದೀಪಾವಳಿ ಶುಭಸಂದರ್ಭದಲ್ಲಿ ಕಾರು ಡೆಲಿವರಿ ಪಡೆದಿದ್ದಾರೆ.
ದೀಪಾವಳಿ ಹಬ್ಬಕ್ಕೆ ಟಾಟಾ ಮೋಟಾರ್ಸ್ ಕೆಲ ಆಯ್ದ ಕಾರುಗಳ ಮೇಲೆ ಭಾರಿ ಡಿಸ್ಕೌಂಟ್ ಘೋಷಿಸಿದೆ. ಪ್ರಮುಖವಾಗಿ ಟಾಟಾ ಹ್ಯಾರಿಯರ್ ಹಾಗೂ ಟಾಟಾ ಸಫಾರಿ ಕಾರಿನ ಮೇಲೆ ಬರೋಬ್ಬರಿ 1.4 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.
ಹ್ಯಾರಿಯರ್ ಹಾಗೂ ಸಫಾರಿ ಕಾರಿಗೆ 75,000 ರೂಪಾಯಿ ಕ್ಯಾಶ್ ಡಿಸ್ಕೌಂಟ್, 50,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಹಾಗೂ 15,000 ರೂಪಾಯಿ ಕಾರ್ಪೋರೇಟ್ ಬೋನಸ್ ಘೋಷಿಸಲಾಗಿದೆ.
ಟಾಟಾ ಹ್ಯಾರಿಯರ್ ಹಾಗೂ ಸಫಾರಿ ಪ್ರೀ ಫೇಸ್‌ಲಿಫ್ಟ್ ಮಾಡೆಲ್ ಕಾರುಗಳಿಗೆ ಮಾತ್ರ ಈ ಆಫರ್ ಲಭ್ಯವಿದೆ. ಡೀಲರ್ ಬಳಿ ಇರುವ ಸ್ಟಾಕ್ ಕ್ಲೀಯರೆನ್ಸ್‌ಗೆ ಈ ಆಫರ್ ನೀಡಲಾಗಿದೆ.
ಟಾಟಾ ಕಾರುಗಳ ಪೈಕಿ ಹ್ಯಾರಿಯರ್ ಹಾಗೂ ಸಫಾರಿ ಕಾರು ಭಾರಿ ಬೇಡಿಕೆಯ ಕಾರುಗಳಾಗಿದೆ. ಅತ್ಯುತ್ತಮ ಡಿಸೈನ್, 5 ಸ್ಟಾರ್ ರೇಟಿಂಗ್, ಪರ್ಫಾಮೆನ್ಸ್, ತಂತ್ರಜ್ಞಾನದಲ್ಲಿ ಟಾಟಾ ಕಾರುಗಳು ಮುಂಚೂಣಿಯಲ್ಲಿದೆ.
ಟಾಟಾ ಹ್ಯಾರಿಯರ್ ಕಾರಿನ ಆರಂಭಿಕ ಬೆಲೆ 15.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಟಾಟಾ ಸಫಾರಿ ಕಾರಿನ ಬೆಲೆ 16.19 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ.
ದೀಪಾವಳಿ ಹಬ್ಬಕ್ಕೆ ಹಲವು ಆಟೋಮೊಬೈಲ್ ಕಂಪನಿಗಳು ಆಫರ್ ಘೋಷಿಸಿದೆ. ಇದೀಗ ದೀಪಾವಳಿ ಸಂದರ್ಭದಲ್ಲಿ ಟಾಟಾ ಕಾರು ಖರೀದಿಸುವ ಗ್ರಾಹಕರಿಗೆ ಬಂಪರ್ ಡಿಸ್ಕೌಂಡ್ ಸಿಗಲಿದೆ.
ಟಾಟಾ ಹ್ಯಾರಿಯರ್ ಹಾಗೂ ಸಫಾರಿ ಮೇಲಿನ ಆಫರ್ ಡೀಲರ್‌ನಿಂದ ಡೀಲರ್‌ಗೆ ವ್ಯತ್ಯಾಸವಾಗುವ ಸಾಧ್ಯತೆಗಳಿವೆ. ಹೀಗಾಗಿ ಹತ್ತಿರದ ಟಾಟಾ ಡೀಲರ್ ಸಂಪರ್ಕಿಸಿ ಆಫರ್ ಖಚಿತಪಡಿಸಿಕೊಳ್ಳಿ.