ಭಾರತದಲ್ಲಿ ಆದ ಮಹತ್ವದ ಬದಲಾವಣೆಗೆ ಕಂಗಾಲಾದ ಮಾರುತಿ ಸುಜುಕಿ ಕಂಪನಿ!

First Published | Oct 30, 2024, 1:16 PM IST

ಕಡಿಮೆ ಬೆಲೆಯ ಕಾರಿಗೆ ಭಾರತದಲ್ಲಿ ಎಲ್ಲಿಲ್ಲದ ಬೇಡಿಕೆ ಇತ್ತು. ಆದರೆ ಕಾಲ ಬದಲಾಗುತ್ತಿದೆ. ಭಾರತದಲ್ಲಿ ಕೈಗೆಟುಕುವ ದರದ ಕಾರಿನ ಬೇಡಿಕೆ ಇಲ್ಲದಾಗಿದೆ. ಇದು ಮಾರುತಿ ಸುಜುಕಿ ಆತಂಕಕ್ಕೆ ಕಾರಣವಾಗಿದೆ.  

ಭಾರತದಲ್ಲಿ ಮಾರುತಿ ಸುಜುಕಿ ಗರಿಷ್ಠ ಮಾರಾಟವಾಗುತ್ತಿರುವ ಕಾರು ಬ್ರ್ಯಾಂಡ್. ಸಣ್ಣ ಕಾರು, ಕೈಗೆಟುಕುವ ದರದ ಕಾರು, ಕಡಿಮೆ ಬೆಲೆಗೆ 4 ಸೀಟರ್, 7 ಸೀಟರ್ ಕಾರುಗಳನ್ನು ಮಾರುತಿ ನೀಡತ್ತಿದೆ. ಅತ್ಯಾಕರ್ಷಕ, ಗರಿಷ್ಠ ಮೈಲೇಜ್, ಕಡಿಮೆ ನಿರ್ವಹಣಾ ವೆಚ್ಚ, ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳು ಮಾರುತಿ ಸುಜುಕಿ ಕಾರಿನಲ್ಲಿದೆ. ಹೀಗಾಗಿ ಮಾರುತಿ ಸುಜುಕಿ ಭಾರತದ ನಂ.1 ಕಾರು ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಆದರೆ ಈ ಪಟ್ಟ ಕಳಚುವ ಆತಂಕ ಎದುರಾಗಿದೆ.

ಮಾರುತಿ ಸುಜುಕಿ ಆತಂಕವನ್ನು ಖುದ್ದು ಕಂಪನಿ ಮುಖ್ಯಸ್ಥ ಆರ್‌ಸಿ ಭಾರ್ಗವ್ ತೋಡಿಕೊಂಡಿದ್ದಾರೆ. ಹೌದು, ಮಾರುತಿ ಸುಜುಕಿಯ ಸಣ್ಣ ಕಾರು, ಕೈಗೆಟುಕುವ ಸಣ್ಣ ಕಾರಿನ ಬೇಡಿಕೆ ಕಡಿಮೆಯಾಗುತ್ತಿದೆ. ಈ ಕುರಿತು ಆರ್‌ಸಿ ಭಾರ್ಗವ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಭಾರತದಲ್ಲಿ 10 ಲಕ್ಷ ರೂಪಾಯಿ ಒಳಗಿನ ಕಾರಿನ ಬೇಡಿಕೆ ಕಡಿಮೆಯಾಗಿದೆ. ಇದು ಮಾರುತಿ ಸುಜುಕಿಗೆ ತೀವ್ರ ಹೊಡೆತ ನೀಡಿದೆ.

Tap to resize

ಪ್ರಯಾಣಿಕರ ವಾಹನದಲ್ಲಿ ಆಗಿರುವ ಬದಲಾವಣೆ ಮಾರುತಿ ಸುಜುಕಿ ನಿದ್ದಿಗೆಡಿಸಿದೆ. SIAM ದಾಖಲೆ ಪ್ರಕಾರ ಈ ವರ್ಷದ ಮೊದಲಾರ್ಧದಲ್ಲಿ ಭಾರತದಲ್ಲಿ 20.81 ಲಕ್ಷ ವಾಹನಗಳು ಮಾರಾಟವಾಗಿದೆ. ಆದರೆ ಇದಲ್ಲಿ 10 ಲಕ್ಷ ರೂಪಾಯಿ ಒಳಗಿನ ಕಾರು ಮಾರಾಟದಲ್ಲಿ ಭಾರಿ ಕುಸಿತ ಕಂಡಿದೆ. ಮಾರುತಿ ಸುಜುಕಿಯ ಗರಿಷ್ಠ ಮಾರಾಟವಾಗುತ್ತಿರುವ ಕಾರುಗಳ ಸಣ್ಣ ಹ್ಯಾಚ್‌ಬ್ಯಾಕ್ ಕಾರುಗಳಾಗಿದೆ.
 

ಸಣ್ಣ ಹ್ಯಾಚ್‌ಬ್ಯಾಕ್ ಹಾಗೂ 10 ಲಕ್ಷ ರೂಪಾಯಿ ಒಳಗಿನ ಕಾರುಗಳಿಗೆ ಬೇಡಿಕೆ ಕಡಿಮೆಯಾಗಿರುವುದು ನೇರವಾಗಿ ಮಾರುತಿ ಸುಜುಕಿ ಮೇಲೆ ಹೊಡೆತ ಬಿದ್ದಿದೆ. ಅಲ್ಟೋ, ಸೆಲೆರಿಯೋ, ವ್ಯಾಗನಆರ್, ಸ್ವಿಫ್ಟ್, ಡಿಸೈರ್, ಬ್ರೆಜ್ಜಾ ಸೇರಿದಂತೆ ಕೆಲ ಕಾರುಗಳ ಎಕ್ಸ್ ಶೋ ರೂಂ ಬೆಲೆ 10 ಲಕ್ಷ ರೂಪಾಯಿ ಒಳಗಿದೆ. ಈ ಕಾರುಗಳ ಬೇಡಿಕೆ ಕಡಿಮೆಯಾಗಿದೆ.

ದಾಖಲೆಗಳ ಪ್ರಕಾರ ಭಾರತದಲ್ಲಿ ಇದೀಗ ಎಸ್‌ಯುವಿ ಕಾರುಗಳ ಬೇಡಿಕೆ ಹೆಚ್ಚಾಗಿದೆ. ಸದ್ಯ ಮಾರುಟವಾಗುತ್ತಿರುವ ಕಾರುಗಳ ಪೈಕಿ ಶೇಕಡಾ 50 ರಷ್ಟು ಎಸ್‌ಯುವಿ ಕಾರುಗಳಾಗಿದೆ. ಮಾರುತಿ ಸುಜುಕಿ ಕೂಡ ಬ್ರೆಜ್ಜಾ, ಗ್ರ್ಯಾಂಡ್ ವಿಟಾರ ಸೇರಿಂತೆ ಕೆಲ ಎಸ್‌ಯುವಿ ಕಾರುಗಳನ್ನು ಮಾರಾಟ ಮಾಡುತ್ತಿದೆ. ಆದರೆ ಜನ ಇದೀಗ 10 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಕಾರುಗಳತ್ತ ಆಕರ್ಷಿತರಾಗಿದ್ದಾರೆ ಅನ್ನೋದು ಅಂಕಿ ಅಂಶ ಹೇಳುತ್ತಿದೆ.

ಕೋವಿಡ್ ಬಳಿಕ ಸಣ್ಣ ಹ್ಯಾಚ್‌ಬ್ಯಾಕ್, 10 ಲಕ್ಷ ರೂಪಾಯಿ ಒಳಗಿನ ಕಾರುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಪ್ರಮುಖವಾಗಿ ಕೈಗೆಟುಕುವ ದರದಲ್ಲಿ ಕಾರು ಖರೀದಿಸುವ ಜನ ಆರ್ಥಿಕಾಗಿ ಸಂಕಷ್ಟಕ್ಕೆ ಸುಲುಕಿದ್ದಾರೆ ಎಂದು ಆರ್‌ಸಿ ಭಾರ್ಗವ್ ಹೇಳಿದ್ದಾರೆ. ಇದರ ಜೊತೆಗೆ ಸದ್ಯ ಭಾರತೀಯರು ಹೆಚ್ಚು ಸುರಕ್ಷತೆ ಕಾರಿಗೆ ಆದ್ಯತೆ ನೀಡುತ್ತಾರೆ. ಈ ಹಿಂದೆ ಇದ್ದ ಎಷ್ಟು ಮೈಲೇಜ್ ಕೊಡುತ್ತೆ, ಬೆಲೆ ಕಡಿಮೆ ಆಸಕ್ತಿಗಳು ಈಗ ಇಲ್ಲದಾಗಿದೆ. 

ಪ್ಯಾಸೆಂಜರ್ ವಾಹನ ಮಾರುಕಟ್ಟೆಯಲ್ಲಿನ ಬೆಳವಣಿಗೆಗೆ ಸಣ್ಣ ಹ್ಯಾಚ್‌ಬ್ಯಾಕ್, ಕೈಗೆಟುಕುವ ಕಾರುಗಳ ಮಾರಾಟದಲ್ಲಿನ ಪ್ರಗತಿ ಅತ್ಯವಶ್ಯಕವಾಗಿದೆ. ಕಾರಣ ಈ ಸೆಗ್ಮೆಂಟ್ ಮೊದಲ ಬಾರಿ ಕಾರು ಖರೀದಿಸುವವರನ್ನು ಹೆಚ್ಚು ಆಕರ್ಷಿಸುವ ಕ್ಷೇತ್ರವಾಗಿದೆ. ಹೀಗಾಗಿ ಈ ಸಂಕೇತ ಉತ್ತಮವಲ್ಲ ಎಂದು ಆರ್‌ಸಿ ಭಾರ್ಗವ್ ಹೇಳಿದ್ದಾರೆ.

Latest Videos

click me!