ಭಾರತದಲ್ಲಿ ಕಾರು ಖರೀದಿ ಟ್ರೆಂಡ್ ಬದಲಾಗುತ್ತಲೇ ಇರುತ್ತದೆ. ಹೊಸ ಕಾರು, ಅಗ್ಗದ ಬೆಲೆಯ ಕಾರು, ಉತ್ತಮ ಸೇಫ್ಟಿ, ಅತ್ಯಾಕರ್ಷಕ ಕಾರು ಹೀಗೆ ಒಬ್ಬೊಬ್ಬರು ಒಂದೊಂದು ಫೀಚರ್ಸ್ ಇಷ್ಟಪಟ್ಟು ಕಾರು ಖರೀದಿಸುತ್ತಾರೆ. ಭಾರತದಲ್ಲಿ ಇದೀಗ ಸುರಕ್ಷತೆ ಹಾಗೂ ಕೈಗೆಟುಕುವ ದರದ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಆದರೆ ಕಳೆದ ಕೆಲ ತಿಂಗಳಿನಿಂದ ಕಾರು ಮಾರುಕಟ್ಟೆ ಭಾರಿ ಏರಿಳಿತವಾಗುತ್ತಿದೆ. ಜೂನ್ ತಿಂಗಳಲ್ಲಿ ಗರಿಷ್ಠ ಮಾರಾಟದ ಕಾರುಗಳು ಪಾತಾಳಕ್ಕೆ ಕುಸಿದಿದೆ. ಟಾಟಾ ಮೋಟಾರ್ಸ್, ಮಹೀಂದ್ರ, ಮಾರುತಿ ಸುಜುಕಿ ಸೇರಿದಂತೆ ಹಲವು ಬ್ರ್ಯಾಂಡ್ ತಮ್ಮ ಕಾರುಗಳ ನಿರೀಕ್ಷಿತ ಮಾರಾಟ ಕಾಣುವಲ್ಲಿ ವಿಫಲವಾಗಿದೆ.