ಈ ಕಾರಿನ ಹೆಸರು ಬಜಾಜ್ ಕ್ಯೂಟ್ RE60 ಒಂದು ಮೈಕ್ರೋ ಕಾರು (ಕ್ವಾಡ್ರಿಸೈಕಲ್). ಇದನ್ನ ಮುಖ್ಯವಾಗಿ ಸ್ವಲ್ಪ ದೂರದ ಸ್ಥಳಗಳಿಗೆ ಚಿಕ್ಕ ಕುಟುಂಬದ ಜನರು ಪ್ರಯಾಣಿಸಲು ತಯಾರಿಸಲಾಗಿದೆ. ನಗರಗಳಲ್ಲಿ ಸಣ್ಣಪುಟ್ಟ ಕೆಲಸಗಳಿಗೆ ಉಪಯೋಗಿಸಬಹುದು. ಇದು 2019 ರಲ್ಲಿ ಲಾಂಚ್ ಆಗಿದೆ. ಕಡಿಮೆ ಇಂಧನ ಬಳಕೆ, ಕಡಿಮೆ ಬಜೆಟ್‌ನಲ್ಲಿ ಸಿಗುತ್ತದೆ. ಬಜಾಜ್ ಕ್ಯೂಟ್ RE60 ಫೀಚರ್ಸ್, ಲುಕ್, ಡಿಸೈನ್ ಸೂಪರ್ ಆಗಿವೆ.
ಕಡಿಮೆ ಬಜೆಟ್‌ನಲ್ಲಿ ಬಜಾಜ್ ಕ್ಯೂಟ್ RE60 ಕಾರನ್ನು ಖರೀದಿ ಮಾಡಿ ಸಿಟಿ ಸುತ್ತಬಹುದು. ಹಾರ್ಡ್ ಎಲ್‌ಇಡಿ ಹೆಡ್‌ಲೈಟ್‌ಗಳು, ಎಸಿ, ರೂಫ್, ಡೋರ್‌ಗಳು, ಸ್ಟೀರಿಂಗ್ ವೀಲ್, 2×2 ಸೀಟುಗಳು, 20 ಲೀಟರ್ ಬೂಟ್ ಸ್ಪೇಸ್ ಇದೆ. ಡ್ರೈವರ್ ಸೇರಿ ನಾಲ್ಕು ಜನ ಕೂರಬಹುದು. ಚಿಕ್ಕ ಕಾರು ಆದ್ದರಿಂದ ಟ್ರಾಫಿಕ್‌ನಲ್ಲಿ ಸುಲಭವಾಗಿ ಓಡಿಸಬಹುದು. ಸೀಟ್ ಬೆಲ್ಟ್‌ಗಳಿವೆ. ಬಜಾಜ್ ಕ್ಯೂಟ್ RE60 ಕಾರಿನ ಬಾಡಿ ಸ್ಟ್ರಾಂಗ್ ಆಗಿದೆ. ಸ್ವಲ್ಪ ಲಗೇಜ್‌ಗೂ ಜಾಗ ಇದೆ.
ಬಜಾಜ್ ಕ್ಯೂಟ್ RE60ರಲ್ಲಿ 217cc ಎಂಜಿನ್ ಇದೆ. ಪೆಟ್ರೋಲ್, CNG ಆಯ್ಕೆಗಳಿವೆ. ಗಂಟೆಗೆ 70 ಕಿ.ಮೀ ವೇಗದಲ್ಲಿ ಈ ಚಿಕ್ಕ ಕಾರು ಓಡಬಲ್ಲದು. 4 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್, 13 bhp ಪವರ್, 19.6 Nm ಟಾರ್ಕ್ ಇದೆ. ಸುಮಾರು 452 ಕಿಲೋ ತೂಕದ ಈ ಕಾರು ಆಟೋಗಿಂತ ಸೇಫ್. ರಿಯರ್ ಎಂಜಿನ್, ರಿಯರ್ ವೀಲ್ ಡ್ರೈವ್, LPG ಆಯ್ಕೆಯೂ ಇದೆ. ಸಿಂಗಲ್ ಸಿಲಿಂಡರ್ ಇದೆ. ಗರಿಷ್ಠ 70 ಕಿ.ಮೀ./ಗಂ ವೇಗದಲ್ಲಿ ಓಡುತ್ತೆ.
ಬಜಾಜ್ ಕ್ಯೂಟ್ RE60 ಪೆಟ್ರೋಲ್ ವೇರಿಯಂಟ್ 35 ಕಿ.ಮೀ. ಮೈಲೇಜ್ ಕೊಡುತ್ತದೆ. CNG ವೇರಿಯಂಟ್ 43 ಕಿ.ಮೀ. ಮೈಲೇಜ್ ಕೊಡುತ್ತೆ. ಮೂರು ಬಣ್ಣಗಳಲ್ಲಿ ಈ ಕಾರು ಸಿಗುತ್ತೆ. 2,752 ಮಿ.ಮೀ. ಉದ್ದ, 1,312 ಮಿ.ಮೀ. ಅಗಲ, 1,652 ಮಿ.ಮೀ. ಎತ್ತರ, 180 ಮಿ.ಮೀ. ಗ್ರೌಂಡ್ ಕ್ಲಿಯರೆನ್ಸ್ ಇದೆ.
ಬಜಾಜ್ ಕ್ಯೂಟ್ RE60 ಕಾರಿನ ಬೆಲೆ 3.61 ಲಕ್ಷ ರೂ. ಆಗಿದೆ. ಆದರೆ, ಕೇವಲ 36,000 ಡೌನ್ ಪೇಮೆಂಟ್ ಕೊಟ್ಟು ಕಾರನ್ನು ಮನೆಗೆ ತೆಗೆದುಕೊಂಡು ಹೋಗಬಹುದು. ಬ್ಯಾಂಕ್ ಆಫರ್‌ಗಳು, EMI ಆಯ್ಕೆಗಳಿವೆ. ಆಫೀಸ್, ಸ್ಕೂಲ್‌ಗೆ ಪ್ರತಿದಿನ ಹೋಗುವವರಿಗೆ ಈ ಕಾರು ಒಳ್ಳೆಯದು. ಸಣ್ಣ ವ್ಯಾಪಾರಗಳಿಗೆ ಸಾಮಾನು ಸಾಗಿಸಲು ಉಪಯುಕ್ತ. ಟ್ರಾಫಿಕ್ ಜಾಸ್ತಿ ಇರುವ ಸಿಟಿಗಳಲ್ಲಿ ಈ ಚಿಕ್ಕ ಕಾರು ತುಂಬಾ ಉಪಯೋಗಕ್ಕೆ ಬರುತ್ತೆ.