ಜ್ಯೂ.ಎನ್‌ಟಿಆರ್ ಐಷಾರಾಮಿ ಕಾರಿನ ನಂಬರ್ ಪ್ಲೇಟ್‌ನಲ್ಲಿದೆ ಕುಟುಂಬ ರಹಸ್ಯ!

First Published | Sep 9, 2024, 2:43 PM IST

ಜ್ಯೂನಿಯರ್ ಎನ್‌ಟಿಆರ್ ಹಾಗೂ ಕರ್ನಾಟಕಕ್ಕೆ ಅವಿನಾವ ಸಂಬಂಧ. ಇನ್ನು ಎನ್‌ಟಿಆರ್ ಕೂಡ ಕನ್ನಡ ಮಾತನಾಡುತ್ತಾ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಎನ್‌ಟಿಆರ್ ಬಳಿ ಖಾಸಗಿ ಜೆಟ್ ಸೇರಿದಂತೆ ಐಷಾರಾಮಿ ಕಾರುಗಳಿವೆ. ಆದರೆ ಈ ಕಾರಿನ ನಂಬರ್ ಪ್ಲೇಟ್‌ನಲ್ಲಿದೆ ಒಂದು ರಹಸ್ಯ.
 

ನಟ ಜ್ಯೂ.ಎನ್‌ಟಿಆರ್ ಇತ್ತೀಚೆಗೆ ರಿಷಬ್ ಶೆಟ್ಟಿ ಜೊತೆ ಮೂಡುಗಲ್ಲು ದೇವಸ್ಥಾನ ಸೇರಿದಂತೆ ಕರ್ನಾಟಕ ಕೆಲ ದೇವಸ್ಥಾನಕ್ಕೆ ಭೇಟಿ ನೀಡಿ ರಾಜ್ಯದಲ್ಲಿ ಭಾರಿ ಸುದ್ದಿಯಾಗಿದ್ದಾರೆ. ಎನ್‌ಟಿಆರ್ ಅಭಿನಯದ ದೇವಾರ ಚಿತ್ರದ ಹಾಡುಗಳು ರಿಲೀಸ್ ಆಗಿ ಸೂಪರ್ ಹಿಟ್ ಆಗಿವೆ. ಇದರ ಜೊತೆಗೆ ಎನ್‌ಟಿಆರ್ ಕೋಟಿ ಕೋಟಿ ಆಸ್ತಿ, ದುಬಾರಿ ಕಾರುಗಳು ಸುದ್ದಿಯಾಗುತ್ತಿದೆ.

ಈ ಪೈಕಿ ಜ್ಯೂ.ಎನ್‌ಟಿಆರ್ ತಮ್ಮ ಕಾರುಗಳಿಗೆ ಹೆಚ್ಚಾಗಿ ಫ್ಯಾನ್ಸ್ ನಂಬರ್‌ನ್ನೇ ಆಯ್ಕೆ ಮಾಡಿದ್ದಾರೆ. ಎನ್‌ಟಿಆರ್ ಬಹುತೇಕ ಕಾರುಗಳ ನಂಬರ್ ಪ್ಲೇಟ್ 9999. ಲ್ಯಾಂಬೋರ್ಗಿನಿ ಉರುಸ್ ಕಾರಿಗೆ ಈ ನಂಬರ್ ಪ್ಲೇಟ್‌ಗಾಗಿ ಜ್ಯೂ.ಎನ್‌ಟಿಆರ್ ಬರೋಬ್ಬರಿ 17 ಲಕ್ಷ ರೂಪಾಯಿ ನೀಡಿ ಹರಾಜಿನಲ್ಲಿ ಖರೀದಿಸಿದ್ದಾರೆ. ಇದು ಎನ್‌ಟಿಆರ್ ಲಕ್ಕಿ ನಂಬರ್.

Latest Videos


ಇತ್ತೀಚೆಗೆ ಎನ್‌ಟಿಆರ್ ಇತ್ತೀಚೆಗೆ ಮರ್ಸಿಡಿಸ್ ಬೆಂಜ್ ಸೆಡಾನ್ ಕಾರು ಖರೀದಿಸಿದ್ದಾರೆ. ಇದಕ್ಕೆ ಎನ್‌ಟಿಆರ್ ತಮ್ಮ ಲಕ್ಕಿ 9999 ನಂಬರ್ ಬಳಸಿಲ್ಲ. ಇದರ ಬದಲಾಗಿ ಎನ್‌ಟಿಆರ್ 1422 ನಂಬರ್ ಪ್ಲೇಟ್ ಬಳಸಿದ್ದಾರೆ. ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಪ್ರತಿ ಕಾರಿನಲ್ಲೂ ಫ್ಯಾನ್ಸಿ ನಂಬರ್ ಬಳಸಿದ್ದರೆ, ಬೆಂಜ್ ಕಾರಿಗೆ ಮಾತ್ರ ಸಾಮಾನ್ಯ ನಂಬರ್ ಬಳಸಿದ್ದೇಕೆ ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ.

ಈ 1422 ನಂಬರ್ ಪ್ಲೇಟ್ ಹಿಂದೆ ಎನ್‌ಟಿಆರ್ ಕೆಲ ವಿಶೇಷತೆಗಳಿವೆ. ಎನ್‌ಟಿಆರ್ ಮಕ್ಕಳಾದ ಅಭಯ್ ರಾಮ್ ಹಾಗೂ ಭಾರ್ಗವ್ ರಾಮ್ ಹುಟ್ಟಿದ ದಿನಾಂಕ ಸಂಯೋಜಿಸಿ ಬೆಂಜ್ ಕಾರಿಗೆ ಈ ನಂಬರ್ ಪ್ಲೇಟ್ ಪಡೆದುಕೊಂಡಿದ್ದಾರೆ. ಈ ನಂಬರ್ ಪ್ಲೇಟ್ ಕೂಟ ಹರಾಜಿನ ಮೂಲಕ ಎನ್‌ಟಿಆರ್ ಪಡೆದುಕೊಂಡಿದ್ದಾರೆ. 

ಅಭಯ್ ರಾಮ್ ಹುಟ್ಟಿದ ದಿನಾಂಕ 22 ಜುಲೈ, 2014. ಇನ್ನು ಭಾರ್ಗವ್ ರಾಮ್ ಹುಟ್ಟಿದ ದಿನಾಂಕ ಜೂನ್ 14, 2018. ಈ ಎರಡು ಹುಟ್ಟಿದ ದಿನಾಂಕಗಳನ್ನೇ ತಮ್ಮ ಮರ್ಸಿಡಿಸ್ ಬೆಂಜ್ ಕಾರಿಗೆ ಈ ನಂಬರ್ ಪಡೆದುಕೊಂಡಿದ್ದಾರೆ. 

ಜ್ಯೂ.ಎನ್‌ಟಿಆರ್ ಬಳಿ ಹಲವು ದುಬಾರಿ ಕಾರುಗಳಿವೆ. 5 ಕೋಟಿ ರೂಪಾಯಿ ಬೆಲೆಯ ಲ್ಯಾಂಬೋರ್ಗಿನಿ ಉರುಸ್, 2 ಕೋಟಿರೂಪಾಯಿ ಬೆಲೆಯ ರೇಂಜ್ ರೋವರ್, 2 ಕೋಟಿ ರೂಪಾಯಿ ಮೌಲ್ಯದ BMW, 1 ಕೋಟಿ ರೂಪಾಯಿ ಮೌಲ್ಯದ ಪೊರ್ಶೆ, 1 ಕೋಟಿ ರೂಪಾಯಿ ಮೌಲ್ಯದ ಪೊರ್ಶೆ ಸೇರಿದಂತೆ ಕೆಲ ದುಬಾರಿ ಕಾರುಗಳನ್ನೂ ಹೊಂದಿದ್ದಾರೆ.
 

click me!