NMAX 155 ಟೆಕ್ ಮ್ಯಾಕ್ಸ್‌ಗೆ 155cc ಲಿಕ್ವಿಡ್-ಕೂಲ್ಡ್ ಬ್ಲೂ ಕೋರ್ ಸಿಂಗಲ್ ಸಿಲಿಂಡರ್ ಎಂಜಿನ್ ಶಕ್ತಿ ನೀಡುತ್ತದೆ. ವೇರಿಯಬಲ್ ವಾಲ್ವ್ ಆಕ್ಚುಯೇಶನ್ (VVA) ತಂತ್ರಜ್ಞಾನ ಹೊಂದಿರುವ ಈ ಎಂಜಿನ್, ಜಾಗತಿಕ ಮಾರುಕಟ್ಟೆಯಲ್ಲಿ 15 PS ಪವರ್ ಮತ್ತು 14 Nm ಟಾರ್ಕ್ ಉತ್ಪಾದಿಸುತ್ತದೆ. ಫೀಚರ್‌ಗಳ ವಿಚಾರದಲ್ಲೂ ಈ ಸ್ಕೂಟರ್ ಹಿಂದೆ ಬಿದ್ದಿಲ್ಲ.
ಇದರಲ್ಲಿ 4.2-ಇಂಚಿನ TFT ಕಲರ್ ಡಿಸ್‌ಪ್ಲೇ, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಗಾರ್ಮಿನ್ ನ್ಯಾವಿಗೇಷನ್, ಮೈರೈಡ್ ಆ್ಯಪ್ ಇಂಟಿಗ್ರೇಷನ್, ಸ್ಮಾರ್ಟ್ ಕೀ, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್, ಆಟೋಮ್ಯಾಟಿಕ್ ಸ್ಟಾರ್ಟ್-ಸ್ಟಾಪ್, ಟ್ರ್ಯಾಕ್ಷನ್ ಕಂಟ್ರೋಲ್, ಡ್ಯುಯಲ್ ಚಾನೆಲ್ ಎಬಿಎಸ್ ಮತ್ತು ಫುಲ್-ಫೇಸ್ ಹೆಲ್ಮೆಟ್ ಇಡಬಹುದಾದಷ್ಟು ದೊಡ್ಡ ಅಂಡರ್‌ಸೀಟ್ ಸ್ಟೋರೇಜ್ ಇದೆ.