ಅಲ್ಟ್ರವೈಲೆಟ್ ಇವಿ ಸ್ಕೂಟರ್ ಲಾಂಚ್, 100ರೂಗೆ 500km ಮೈಲೇಜ್, 14 ದಿನದಲ್ಲಿ 50000 ಬುಕಿಂಗ್

ಅಲ್ಟ್ರಾ ವೈಲೆಟ್‌ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ 'ಟೆಸ್ಸರಾಕ್ಟ್' ಬಿಡುಗಡೆಯಾದ ತಕ್ಷಣ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿದೆ.  ಕೇವಲ 14 ದಿನಗಳಲ್ಲಿ 50,000 ಬುಕಿಂಗ್ ಪಡೆದಿದೆ. ಈ ಸ್ಕೂಟರ್ 100 ರೂಪಾಯಿ ಖರ್ಚಿನಲ್ಲಿ 500 ಕಿಮೀ ಮೈಲೇಜ್ ನೀಡುತ್ತೆ. 

Ultraviolette Tesseract create record with 50000 bookings in just 14 days

ಟಾಪ್ ರೇಂಜ್ ಎಲೆಕ್ಟ್ರಿಕ್ ಸ್ಕೂಟರ್: ಅಲ್ಟ್ರಾ ವೈಲೆಟ್‌ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಟೆಸ್ಸರಾಕ್ಟ್ ಬಿಡುಗಡೆಯಾದ ಬೆನ್ನಲ್ಲೇ ಭಾರಿ ಬೇಡಿಕೆ ಪೆಡೆದುಕೊಂಡಿದೆ.  ಈ ಸ್ಕೂಟರ್ ಫೆಬ್ರವರಿ 5 ರಂದು ಬಿಡುಗಡೆಯಾಯಿತು. ಇಲ್ಲಿಯವರೆಗೆ 50,000 ಬುಕಿಂಗ್‌ಗಳು ಬಂದಿವೆ ಎಂದು ಕಂಪನಿ ಹೇಳಿದೆ. ಕೇವಲ 14 ದಿನಗಳಲ್ಲಿ ಇಷ್ಟು ಬುಕಿಂಗ್ ಬಂದಿರುವುದು ಗ್ರಾಹಕರು ಈ ಸ್ಕೂಟರ್ ಅನ್ನು ಇಷ್ಟಪಟ್ಟಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಹಿಂದೆ ಬಿಡುಗಡೆಯಾದ 48 ಗಂಟೆಗಳಲ್ಲಿ 20000 ಬುಕಿಂಗ್‌ಗಳನ್ನು ಪಡೆದಿತ್ತು. ಈ ಸ್ಕೂಟರ್ ಮೇಲೆ ಜನರಿಗೆ ಸಿಕ್ಕಾಪಟ್ಟೆ ಮೋಹವಿದೆ. ಟೆಸ್ಸರಾಕ್ಟ್ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ರೂ 1.20 ಲಕ್ಷದಿಂದ (ಆರಂಭಿಕ ಬೆಲೆ) ಮೊದಲ 50,000 ಗ್ರಾಹಕರಿಗೆ ಲಭ್ಯವಿದೆ.
 

Ultraviolette Tesseract create record with 50000 bookings in just 14 days
ಸೂಪರ್ ಎಲೆಕ್ಟ್ರಿಕ್ ಸ್ಕೂಟರ್

ಬೆಲೆಯಲ್ಲಿ ಬದಲಾವಣೆ ಇದೆಯಾ?

ಮೊದಲ 50 ಸಾವಿರ ಬುಕಿಂಗ್‌ಗಳಿಗೆ, ಈ ಸ್ಕೂಟರ್‌ನ ಎಕ್ಸ್-ಶೋರೂಮ್ ಬೆಲೆ ರೂ 1.20 ಲಕ್ಷ ಇತ್ತು, ಅದರ ನಂತರ ಇದರ ಎಕ್ಸ್ ಶೋರೂಮ್ ಬೆಲೆ ರೂ 1.45 ಲಕ್ಷದಿಂದ ಪ್ರಾರಂಭವಾಗುತ್ತದೆ. ಈಗ ಅದರ ಬೆಲೆಯಲ್ಲಿ ಕಂಪನಿ ಏನು ಕ್ರಮ ತೆಗೆದುಕೊಳ್ಳುತ್ತೆ ಅಂತ ನೋಡಬೇಕು. ಈ ಹೊಸ ಸ್ಕೂಟರ್‌ನ ಫೀಚರ್‌ಗಳ ಬಗ್ಗೆ ತಿಳ್ಕೊಳ್ಳೋಣ.


ಎಲೆಕ್ಟ್ರಿಕ್ ಸ್ಕೂಟರ್

ಬ್ಯಾಟರಿ ಮತ್ತು ರೇಂಜ್

ಈ ಸ್ಕೂಟರ್ ಫುಲ್ ಚಾರ್ಜ್ ಮಾಡಿದ್ರೆ 261 ಕಿಲೋಮೀಟರ್ ವರೆಗೆ ಹೋಗುತ್ತೆ ಅಂತ ಕಂಪನಿ ಹೇಳಿದೆ. ಇದರಲ್ಲಿ 20 ಹೆಚ್‌ಪಿ ಪವರ್ ನೀಡುವ ಎಲೆಕ್ಟ್ರಿಕ್ ಮೋಟಾರ್ ಇದೆ. ಈ ಸ್ಕೂಟರ್ 0 ಇಂದ 60 ಕಿಮೀ ವೇಗವನ್ನು 2.9 ಸೆಕೆಂಡುಗಳಲ್ಲಿ ತಲುಪುತ್ತೆ ಮತ್ತು ಇದರ ಗರಿಷ್ಠ ವೇಗ ಗಂಟೆಗೆ 125 ಕಿಮೀ. ಈ ಸ್ಕೂಟರ್ 100 ರೂಪಾಯಿ ಖರ್ಚಿನಲ್ಲಿ 500 ಕಿಮೀ ಓಡುತ್ತೆ ಅಂತ ಕಂಪನಿ ಹೇಳಿದೆ.

ಅಲ್ಟ್ರಾ ವೈಲೆಟ್ ಟೆಸ್ಸರಾಕ್ಟ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಇಂಟಿಗ್ರೇಟೆಡ್ ರೇಡಾರ್ ಮತ್ತು ಡ್ಯಾಶ್‌ಕ್ಯಾಮ್ ಇದೆ. ಇದು ಪರಿಸರ ಸ್ನೇಹಿ ಹೈ ಪರ್ಫಾರ್ಮೆನ್ಸ್ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಡಿಸೈನ್ ತುಂಬಾ ಫ್ಯೂಚರಿಸ್ಟಿಕ್ ಆಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಯುದ್ಧ ವಿಮಾನಗಳಿಂದ ಪ್ರೇರಿತವಾಗಿ ಡಿಸೈನ್ ಮಾಡಲಾಗಿದೆ. ಟೆಸ್ಸರಾಕ್ಟ್‌ಗೆ ಸಿಕ್ಕಿರುವ ರೆಸ್ಪಾನ್ಸ್‌ನಿಂದ ನಾವು ತುಂಬಾ ಖುಷಿಯಾಗಿದ್ದೇವೆ ಅಂತ ಕಂಪನಿ ಹೇಳಿದೆ.

ದೂರದ ಪ್ರಯಾಣಕ್ಕೆ ಬೆಸ್ಟ್ EV ಸ್ಕೂಟರ್

ಫೀಚರ್‌ಗಳು

ಹೊಸ ಟೆಸ್ಸರಾಕ್ಟ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 7 ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಇದೆ, ಇದರ ಜೊತೆಗೆ 34 ಲೀಟರ್ ಅಂಡರ್ ಸೀಟ್ ಸ್ಟೋರೇಜ್, 14 ಇಂಚಿನ ವೀಲ್ಸ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಓವರ್‌ಟೇಕ್ ಅಲರ್ಟ್ ಮತ್ತು ಲೇನ್ ಚೇಂಜ್ ಅಸಿಸ್ಟ್‌ನಂತಹ ಫೀಚರ್‌ಗಳಿವೆ. ಅಲ್ಟ್ರಾ ವೈಲೆಟ್ ಟೆಸ್ಸರಾಕ್ಟ್ ಎಲೆಕ್ಟ್ರಿಕ್ ಸ್ಕೂಟರ್‌ನ ನಿಜವಾದ ಪೈಪೋಟಿ ಓಲಾ, ಬಜಾಜ್ ಚೇತಕ್, ಏಥರ್ ಮತ್ತು ಟಿವಿಎಸ್.

Latest Videos

vuukle one pixel image
click me!