ಎಲೆಕ್ಟ್ರಿಕ್ ಟೂ ವೀಲರ್ ಸ್ಟಾರ್ಟಪ್ ಕಂಪನಿಯಾದ ಸಿಂಪಲ್ ಎನರ್ಜಿ, ಸಿಂಪಲ್ ಒನ್ಎಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರೂ.1,39,999 (ಎಕ್ಸ್-ಶೋರೂಮ್) ಆರಂಭಿಕ ಬೆಲೆಯೊಂದಿಗೆ ಬಿಡುಗಡೆ ಮಾಡಿದೆ. ಹೊಸ ಮಾಡೆಲ್ ಒಂದು ಬಾರಿ ಫುಲ್ ಚಾರ್ಜ್ ಮಾಡಿದ್ರೆ 181 ಕಿಮೀ ಹೋಗುತ್ತೆ ಅಂತ ಕಂಪನಿ ಹೇಳಿದೆ. ಈ ಕಂಪನಿ ಎರಡು ವೇರಿಯಂಟ್ ಸ್ಕೂಟರ್ ತಂದಿದೆ. ಒಂದ್ ಸಿಂಪಲ್ ಒನ್ಎಸ್ ಆದ್ರೆ ಇನ್ನೊಂದು ಸಿಂಪಲ್ ಒನ್ ಜನರಲ್ 1.5.
ಸಿಂಪಲ್ ವನ್ ಎಸ್ ಸ್ಕೂಟರ್ 3.7kWh ಬ್ಯಾಟರಿಯಿಂದ 8.5kW ಮೋಟಾರ್ ಪವರ್ ತಗೊಳ್ಳುತ್ತೆ. ನಾಲ್ಕು ರೈಡಿಂಗ್ ಮೋಡ್ ಇದೆ - ಈಕೋ, ರೈಡ್, ಡ್ಯಾಶ್, ಸೋನಿಕ್. ಎಲೆಕ್ಟ್ರಿಕ್ ಸ್ಕೂಟರ್ ಸೋನಿಕ್ ಮೋಡ್‌ನಲ್ಲಿ 2.55 ಸೆಕೆಂಡುಗಳಲ್ಲಿ 0 ಇಂದ 40 ಕಿಮೀ ಸ್ಪೀಡ್ ತಲುಪುತ್ತೆ. ಈ ಸ್ಕೂಟರ್ ಗಂಟೆಗೆ 105 ಕಿಲೋಮೀಟರ್ ಸ್ಪೀಡ್ ಅಲ್ಲಿ ಹೋಗುತ್ತೆ.
ಈ ಸ್ಕೂಟರ್ ಬ್ರೇಸೆನ್ ಬ್ಲಾಕ್, ಗ್ರೇಸ್ ವೈಟ್, ಅಜೂರ್ ಬ್ಲೂ, ರೆಡ್ ಕಲರ್ ಅಲ್ಲಿ ಸಿಗುತ್ತೆ. ಈ ಸ್ಕೂಟಿ ಸೀಟ್ ಕೆಳಗೆ 35 ಲೀಟರ್ ಸ್ಟೋರೇಜ್ ಇದೆ. ಸೀಟ್ ಹೈಟ್ 770 ಮಿಮೀ ಇದೆ. ಸಿಂಪಲ್ ಒನ್ಎಸ್‌ನಲ್ಲಿ 7 ಇಂಚಿನ ಟಚ್‌ಸ್ಕ್ರೀನ್ ಡ್ಯಾಶ್‌ಬೋರ್ಡ್ ಇದೆ. ಇದು ಅಪ್ಲಿಕೇಶನ್ ಇಂಟಿಗ್ರೇಷನ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಅಪ್‌ಡೇಟ್ ಗೆ ಸಪೋರ್ಟ್ ಮಾಡುತ್ತೆ. ಫೈಂಡ್ ಮೈ ವೆಹಿಕಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಫಾಸ್ಟ್ ಬ್ರೇಕಿಂಗ್ ಸಿಸ್ಟಮ್ ಫೀಚರ್ಸ್ ಇದೆ. ಪಾರ್ಕಿಂಗ್ ಸೆನ್ಸಾರ್ ಕೂಡ ಇದೆ. ಈ ಸ್ಕೂಟಿ 5G ಇ-ಸಿಮ್‌ಗೆ ಸಪೋರ್ಟ್ ಮಾಡುತ್ತೆ. ಬ್ಲೂಟೂತ್ ಕನೆಕ್ಟಿವಿಟಿಗೂ ಸಪೋರ್ಟ್ ಮಾಡುತ್ತೆ.
ಸಿಂಪಲ್ ಒನ್ಎಸ್ ಬೆಂಗಳೂರು, ಪುಣೆ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂ, ಕೊಚ್ಚಿ, ಮಂಗಳೂರಿನ ಸಿಂಪಲ್ ಎನರ್ಜಿ ಶೋರೂಮ್‌ಗಳಲ್ಲಿ ಸಿಗುತ್ತೆ. ಸಿಂಪಲ್ ಎನರ್ಜಿ ತನ್ನ ಸೇವೆಗಳನ್ನು 23 ರಾಜ್ಯಗಳಲ್ಲಿ 150 ಹೊಸ ಶೋರೂಮ್, 200 ಸರ್ವೀಸ್ ಸೆಂಟರ್ ಜೊತೆ ಶುರು ಮಾಡ್ತಿದೆ. ಈ ಕಂಪನಿ ತಮಿಳುನಾಡಿನ ಹೊಸೂರಿನಲ್ಲಿ ವರ್ಷಕ್ಕೆ 1,50,000 ಯುನಿಟ್ ಉತ್ಪಾದನೆ ಮಾಡೋಕೆ ತಯಾರಿಯಲ್ಲಿದೆ.