ಕೈಗೆಟುಕುವ ದರದಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಲಾಂಚ್, ಇಲ್ಲಿದೆ ಅತ್ಯಾಕರ್ಷಕ್ ಬೈಕ್ ವಿವರ!

First Published | Sep 4, 2023, 6:39 PM IST

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ  ವಿಶೇಷ ಸ್ಥಾನವಿದೆ. ಎಲ್ಲಾ ವಯೋಮಾನದವರಿಗೂ ರಾಯಲ್ ಎನ್‌ಫೀಲ್ಡ್ ಬೈಕ್ ನೆಚ್ಚಿನ ಬೈಕ್. ಇದೀಗ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ ಬಿಡುಗಡೆಯಾಗಿದೆ. ಕೈಗೆಟುಕುವ ದರದ ಈ ಬೈಕ್ ಹಲವು ವಿಶೇಷತೆಗಳನ್ನು ಹೊಂದಿದೆ. 

ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಪೈಕಿ ಬುಲೆಟ್ 350 ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. 2023ರ ಈ ರಾಯಲ್ ಎನ್‌ಫೀಲ್ಡ್ ಬುಲೆಟ್ 5 ಬಣ್ಣಗಳಲ್ಲಿ ಲಭ್ಯವಿದೆ. 

ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ 350 ಬೈಕ್ ಬೆಲೆ 1.74 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಕ್ಲಾಸಿಕ್ 350 ಬೈಕ್‌ಗೆ ಹೋಲಿಸಿದರೆ 19,000 ರೂಪಾಯಿ ಕಡಿಮೆಗೆ ಬುಲೆಟ್ 350 ಲಭ್ಯವಿದೆ 

Latest Videos


ಹೊಸ ಬುಲೆಟ್ ಬೈಕ್ 349cc  ಜೆ ಪ್ಲಾಟ್‌ಫಾರ್ಮ್ ಎಂಜಿನ್ ಹೊಂದಿದೆ. ಇದರ ಪವರ್ ಕ್ಲಾಸಿಕ್ 350 ಬೈಕ್‌ಗೆ ಹೋಲಿದರೆ ವ್ಯತ್ಯಾಸಗಳಿಲ್ಲ. 20hp ಪವರ್ ಹಾಗೂ  27Nm ಟಾರ್ಕ್ ಜನರೇಟ್ ಮಾಡಲಿದೆ.

ಮಿಲಿಟರಿ ರೆಡ್ ವೇರಿಯೆಂಟ್ ಬುಲೆಟ್ 350 ಬೆಲೆ 1,73,562 ರೂಪಾಯಿ,  ಇನ್ನು ಮಿಲಿಟರಿ ಬ್ಲಾಕ್ 1,97,436 ರೂಪಾಯಿ, ಇನ್ನು ಸ್ಟಾಂಡರ್ಡ್ ಬ್ಲಾಕ್ ಹಾಗೂ ಮರೂನ್ ಬೆಲೆ  2,15,801 ರೂಪಾಯಿ.  ಎಲ್ಲವೂ ಎಕ್ಸ್ ಶೋ ರೂಂ ಬೆಲೆಗಳಾಗಿವೆ.

ರಾಯಲ್ ಎನ್‌ಫೀಲ್ಡ್ 350 ಬೈಕ್‌ನಲ್ಲಿ ಫ್ರಂಟ್ ಡಿಸ್ಕ್ 300mm ಹಾಗೂ ರೇರ್ ಡಿಸ್ಕ್ ಬ್ರೇಕ್ 270mm ಬಳಕೆ ಮಾಡಲಾಗಿದೆ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ ಪೈಕಿ ಮಿಲಿಟರಿ ವರ್ಶನ್ ಬೈಕ್‌ನಲ್ಲಿ ರೇರ್ ಡ್ರಮ್ ಬ್ರೇಕ್ ಬಳಕೆ ಮಾಡಿದ್ದರೆ,. ಇನ್ನುಳಿದ ವೇರಿಯೆಂಟ್‌ಗಳಲ್ಲಿ ರೇರ್ ಡಿಸ್ಕ್ ಬ್ರೇಕ್ ಬಳಕೆ ಮಾಡಲಾಗಿದೆ.   

ನೂತನ ಬೈಕ್ ಸಿಂಗಲ್ ಪೀಸ್ ಸೀಟ್ ಹೊಂದಿದೆ. ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಫ್ಯಾಕ್ಟರಿ ಫಿಟ್ಟೆಡ್ ಡಬಲ್ ಪೀಸ್ ಸೀಟ್ ಸಾಮಾನ್ಯವಾಗಿದೆ.  ಆದರೆ ಬುಲೆಟ್ 350 ಬೈಕ್ ಸಿಂಗಲ್ ಪೀಸ್ ಸೀಟ್ ಹೊಂದಿದೆ.

click me!