ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಭಾರತ ಹೊಸ ಕ್ರಾಂತಿ ಮಾಡಿದೆ. ಅದರಲ್ಲೂ ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿಗಳ ಕೊಡುಗೆ ಹೆಚ್ಚಿದೆ. ದೇಶದ ಅತ್ಯುತ್ತಮ ಇವಿ ಸ್ಕೂಟರ್ ಬೆಂಗಳೂರಿನಲ್ಲೇ ಉತ್ಪಾದನೆಯಾಗುತ್ತಿದೆ.
ಭಾರತದಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಸ್ಕೂಟರ್ ಪೈಕಿ ಕಡಿಮೆ ಬೆಲೆ ಅಂದರೆ 1 ಲಕ್ಷ ರೂಪಾಯಿ ಒಳಗೆ ಹಲವು ಸ್ಕೂಟರ್ ಲಭ್ಯವಿದೆ. ಸದ್ಯ ಭಾರತದಲ್ಲಿ ಅತ್ಯುತ್ತಮ ಸ್ಕೂಟರ್ ಎಂದೇ ಗುರುತಿಸಿಕೊಂಡಿರು ದ್ವಿಚಕ್ರ ವಾಹನ ಲಿಸ್ಟ್ ಇಲ್ಲಿದೆ
ಒಲಾ S1 X+
ಒಲಾ ಇತ್ತೀಚೆಗೆ ಒಲಾ S1 X+ ಸ್ಕೂಟರ್ ಬಿಡುಗಡೆ ಮಾಡಿದೆ. ಇದರ ಬೆಲೆ 99,999 ರೂಪಾಯಿ(ಎಕ್ಸ್ ಶೋ ರೂಂ). 3 kWh ಬ್ಯಾಟರಿ ಬಳಕೆ ಮಾಡಲಾಗಿದೆ. ಇನ್ನು ಬಹುತೇಕ ಓಲಾ S1 ಏರ್ ಫೀಚರ್ಸ್ ಒಳಗೊಂಡಿದೆ.
ಬೌನ್ಸ್ ಇನ್ಫಿನಿಟಿ e
ಅತ್ಯುತ್ತಮ ಹಾಗೂ ಬಜೆಟ್ ಸ್ಕೂಟರ್ ಪೈಕಿ ಬೌನ್ಸ್ ಉತ್ತಮ ಆಯ್ಕೆಯಾಗಿದೆ. ಈ ಪೈಕಿ ಬೌನ್ಸ್ ಇನ್ಫಿನಿಟಿ e.1+ ಸ್ಕೂಟರ್ ಬೆಲೆ 90,000 ರೂಪಾಯಿ. ಒಂದು ಬಾರಿಚಾರ್ಜ್ ಮಾಡಿದರೆ 85 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ.
ಆ್ಯಂಪರ್ ಝೀಲ್ EX
ಆ್ಯಂಪರ್ ಭಾರತದಲ್ಲಿ ಹಲವು ಇವಿ ಸ್ಕೂಟರ್ ಬಿಡುಗಡೆ ಮಾಡಿದೆ. ಈ ಬೈಕಿ ಆ್ಯಂಪರ್ ಝೀಲ್ EX ಸ್ಕೂಟರ್ ಬೆಲೆ 96,690 ರೂಪಾಯಿ (ಎಕ್ಸ್ ಶೋರೂಂ). ಸಿಂಗಲ್ ಚಾರ್ಜ್‌ಗೆ 100 ಕಿ.ಮಿ ಮೈಲೇಜ್ ರೇಂಜ್ ನೀಡಲಿದೆ.
ಹೀರೋ ಎಲೆಕ್ಟ್ರಿಕ್ ಆಪ್ಟಿಮಾ CX
ಹೀರೋ ಬ್ರ್ಯಾಂಡ್ ಪೈಕಿ ಎಲೆಕ್ಟ್ರಿಕ್ ಆಪ್ಟಿಮಾ CX ಸ್ಕೂಟರ್ 85,190 ರೂಪಾಯಿ (ಎಕ್ಸ್ ಶೋ ರೂಂ) ಲಭ್ಯವಿದೆ. ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ 140 ಕಿ.ಮೀ ಮೈಲೇಜ್ ನೀಡಲಿದೆ
ಒಕಿನಾವಾ ಪ್ರೈಸ್ Pro
ಒಕಿನಾವ ಭಾರತದಲ್ಲಿ ಕಡಿಮೆ ಬೆಲೆಗೆ ಸ್ಕೂಟರ್ ಬಿಡುಗಡೆ ಮಾಡಿದೆ. 60,000 ರೂಪಾಯಿ ಬೆಲೆಯ ಸ್ಕೂಟರ್ ಕೂಡ ಲಭ್ಯವಿದೆ. ಈ ಪೈಕಿ ಉತ್ತಮ ಗುಣಮಟ್ಟ, ಮೈಲೇಜ್ ಹೊಂದಿರುವ ಪ್ರೈಸ್ ಪ್ರೋ ಸ್ಕೂಟರ್ ಬೆಲೆ 99,645 ರೂಪಾಯಿ(ಎಕ್ಸ್ ಶೋ ರೂಂ)