Published : Sep 20, 2024, 02:14 PM ISTUpdated : Sep 21, 2024, 11:23 AM IST
ಎಲೆಕ್ಟ್ರಿಕ್ ವಾಹನದ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಹೊಸ ಹೊಸ ವಾಹನ ಬಿಡುಗಡೆಯಾಗುತ್ತಿದೆ. ಇದೀ ಪ್ಯೂರ್ ಇವಿ ಹೊಚ್ಚ ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 171 ಕಿಲೋಮೀಟರ್ ಮೈಲೇಜ್ ನೀಡುತ್ತದೆ. EcoDryft ಎಲೆಕ್ಟ್ರಿಕ್ ಬೈಕ್ ಕೈಗೆಟುವ ದರದಲ್ಲಿ ಲಭ್ಯವಿದೆ. ತಿಂಗಳಿಗೆ ರೂ.3,021 EMI ಮೂಲಕ ಬೈಕ್ ಖರೀದಿಸಲು ಸಾಧ್ಯವಿದೆ.
ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್ ಕ್ಷೇತ್ರದಲ್ಲಿ ಭಾರಿ ಕ್ರಾಂತಿಯಾಗಿದೆ. ಹೊಸ ಹೊಸ ಬೈಕ್, ಗರಿಷ್ಠ ಮೈಲೇಜ್, ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಬ್ರ್ಯಾಂಡ್ ಎಲೆಕ್ಟ್ರಿಕ್ ಬೈಕ್ ಲಭ್ಯವಿದೆ. ಇದೀಗ ಪ್ಯೂರ್ ಇವಿ ಹೊಚ್ಚ ಹೊಸ ಬೈಕ್ ಬಿಡುಗಡೆ ಮಾಡಿದೆ. PURE EV EcoDryft ಹೊಸ ಸಂಚಲನ ಸೃಷ್ಟಿಸಿದೆ.
25
PURE EV
ಬಜೆಟ್ ಸ್ನೇಹಿ ಎಲೆಕ್ಟ್ರಿಕ್ ಬೈಕ್‌ಗಾಗಿ ಹುಡುಕುತ್ತಿರುವಿರಾ? ಮಾರುಕಟ್ಟೆಯಲ್ಲಿ ಹಲವು ಆಯ್ಕೆಗಳಿವೆ. ಈ ಪೈಕಿ ಪ್ಯೂರ್ ಇಕೋಡ್ರಿಫ್ಟ್ ಬೈಕ್ ಹೊಸ ಸಂಚಲನ ಸೃಷ್ಟಿಸಿದೆ. PURE EV EcoDryft ಬೆಲೆ 99,999 ರೂಪಾಯಿಗೆ ಲಭ್ಯವಿದೆ. ಹೊಸ ಬೈಕ್ ಹಲವು ವಿಶೇಷತೆಗಳಿವೆ.
35
EV ಬೈಕ್
PURE EV EcoDryft ಒಮ್ಮೆ ಚಾರ್ಜ್ ಮಾಡಿದರೆ 171 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. ಇದರಿಂದ ದೂರ ಪ್ರಯಾಣ, ನಗರ ಪ್ರಯಾಣಕ್ಕೂ ಇದು ಹೇಳಿಮಾಡಿಸಿದಂತಿದೆ. ಎಲೆಕ್ಟ್ರಿಕ್ ಬೈಕ್‌ಗೆ ಹೋಲಿಸಿದರೆ ಪ್ಯೂರ್ ಇವಿ 171 ಕಿ.ಮೀ ಮೈಲೇಜ್ ಉತ್ತಮ ರೇಂಜ್ ಆಗಿದೆ. ಹೀಗಾಗಿ ಪ್ಯೂರ್ ಇವಿ ಮೈಲೇಜ್ ವಿಚಾರದಲ್ಲಿ ಪ್ರತಿಸ್ಪರ್ಧಿಗಳಿಗೆ ನಡುಕ ಸೃಷ್ಟಿಸಿದೆ.
45
PURE EV EcoDryft: ನಗರದ ರಸ್ತೆಗಳು ಮತ್ತು ಹೆದ್ದಾರಿಗಳೆರಡರಲ್ಲೂ ಸುಗಮ ಸವಾರಿಗಾಗಿ EcoDryft ಅನ್ನು ವಿನ್ಯಾಸಗೊಳಿಸಲಾಗಿದೆ. ಹಲವು ಪರೀಕ್ಷೆಗಳ ಬಳಿಕ ಪ್ಯೂರ್ ಇವಿ ಹೊಸ ಬೈಕ್ ಲಾಂಚ್ ಮಾಡಿದೆ. ಯಾವುದೇ ರಸ್ತೆಗಳಲ್ಲೂ ಸುಲಭ ಪ್ರಯಾಣ ಮಾಡುವಂತೆ ವಿನ್ಯಾಸ ಮಾಡಲಾಗಿದೆ. ಇದರಿಂದ ರೈಡರ್ಸ್‌ಗೆ ಬೈಕ್ ಫೀಲ್ ನೀಡಲಿದೆ.
55
EcoDryft ಬೆಲೆ
99,999 ರಿಂದ ಪ್ರಾರಂಭವಾಗುವ ಬೆಲೆಯಲ್ಲಿ, EcoDryft ಅತ್ಯುತ್ತಮ ಕಾರ್ಯಕ್ಷಮತೆ, ಶೈಲಿ ಮತ್ತು ವೈಶಿಷ್ಟ್ಯಗಳನ್ನು ನೀಡುತ್ತದೆ. ವಿವಿಧ ಬಣ್ಣಗಳಲ್ಲಿ ಎಲೆಕ್ಟ್ರಿಕ್ ಬೈಕ್ ಲಭ್ಯವಿದೆ. ವಿಶೇಷ ಅಂದರೆ ಇಂಧನ ಬೈಕ್ ವಿನ್ಯಾಸದಲ್ಲೇ ಈ ಬೈಕ್ ಡಿಸೈನ್ ಮಾಡಲಾಗಿದೆ. ಹೀಗಾಗಿ ಪರ್ಫಾಮೆನ್ಸ್ ಕೂಡ ಅಷ್ಟೇ ಉತ್ತಮವಾಗಿದೆ.