ಎಲ್ಲಾ ವಾಹನಗಳ ಬೆಲೆ ದುಬಾರಿಯಾಗಿದೆ. ಇತ್ತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೂ ಗಗನಕ್ಕೇರಿದೆ. ಹೀಗಾಗಿ ವಾಹನ ಖರೀದಿ ಹಾಗೂ ನಿರ್ವಹಣೆ ಸುಲಭದ ಮಾತಲ್ಲ. ಇದರ ನಡುವೆ ಭಾರತದಲ್ಲಿ ಕಡಿಮೆ ದರದಲ್ಲಿ ಉತ್ತಮ ಮೈಲೇಜ್ ನೀಡಬಲ್ಲ ಬೈಕ್ ಲಭ್ಯವಿದೆ.
ಭಾರತದಲ್ಲಿ ಅತೀ ಕಡಿಮೆ ಬೆಲೆಗೆ ಲಭ್ಯವಿರುವ ಬೈಕ್ ಅನ್ನೋ ಹೆಗ್ಗಳಿಕೆಗೆ ಹೀರೋ HF 100 ಪಾತ್ರವಾಗಿದೆ. ಈ ಬೈಕ್ ಬೆಲೆ 59,018 ರೂಪಾಯಿ(ಎಕ್ಸ್ ಶೋ ರೂಂ). ಮೈಲೇಜ್ 70 ಕಿಲೋಮೀಟರ್ ಪ್ರತಿ ಲೀಟರ್ ಪೆಟ್ರೋಲ್‌ಗೆ
ಹೀರೋ ಮೋಟಾರ್‌ಕಾರ್ಪ್ ಪೈಕಿ ಮತ್ತೊಂದು ಕೈಗೆಟುಕುವ ದರದ ಬೈಕ್ ಎಂದರೆ ಹೀರೋ HF ಡಿಲಕ್ಸ್. ಈ ಬೈಕ್ ಬೆಲೆ 68,768 ರೂಪಾಯಿ(ಎಕ್ಸ್ ಶೋ ರೂಂ). ಈ ಬೈಕ್ ಕೂಡ 70 ಕಿ.ಮೀ ಮೈಲೇಜ್ ನೀಡಲಿದೆ.
ಟಿವಿಎಸ್ ಬೈಕ್‌ಗಳ ಪೈಕಿ ಟಿವಿಎಸ್ ಸ್ಪೋರ್ಟ್ ಬೈಕ್ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಈ ಬೈಕ್ ಆರಂಭಿಕ ಬೆಲೆ 70,673 ರೂಪಾಯಿ(ಎಕ್ಸ್ ಶೋ ರೂಂ). ಇದು 110 ಸಿಸಿ ಎಂಜಿನ್ ಬೈಕ್ ಆಗಿದೆ.
ಬಜಾಜ್ ಸಿಟಿ 100 X ಬೈಕ್ ಬೆಲೆ 69 216 ರೂಪಾಯಿ(ಎಕ್ಸ್ ಶೋ ರೂಂ). ಪ್ರತಿ ಲೀಟರ್ ಪೆಟ್ರೋಲ್‌ಗೆ 70 ಕಿಲೋಮೀಟರ್ ಮೈಲೇಜ್ ನೀಡುತ್ತದೆ.
ಬಜಾಜ್ ಸಿಟಿ 125X ಬೈಕ್ ಡಿಟಿಎಸ್ಐ ಎಂಜಿನ್ ಹೊಂದಿದೆ. 10.9 ಮ್ಯಾಕ್ಸ್ ಪವರ್ ಹೊಂದಿರುವ ಈ ಬೈಕ್ ಬೆಲೆ 77 216 ರೂಪಾಯಿ(ಎಕ್ಸ್ ಶೋ ರೂಂ)
ಈ ಬೈಕ್ ಹೊರತುಪಡಿಸಿದರೆ ಇನ್ನೂ ಹಲವು ಬೈಕ್‌ಗಳು 80 ರೂಪಾಯಿ ಒಳಗೆ ಲಭ್ಯವಿದೆ. ಇದೀಗ ಜನರು ಹೆಚ್ಚಿನ ಮೈಲೇಜ್‌ಗಾಗಿ ಈ ರೀತಿಯ ಬೈಕ್ ಖರೀದಿಸಿ ನಿರ್ವಹಣೆ ವೆಚ್ಚ ಕಡಿಮೆ ಮಾಡುತ್ತಿದ್ದಾರೆ.