ಬೆಂಗಳೂರಿನ ಅಲ್ಟ್ರಾವೊಯಿಲೆಟ್ ಇವಿ ಹತ್ತಿದ ತೇಜಸ್ವಿ ಸೂರ್ಯ, ಹೆಮ್ಮೆಯ ಬೈಕ್‌ಗೆ ಸಂಸದರ ಶಹಬ್ಬಾಷ್!

First Published | Sep 13, 2024, 8:15 PM IST

ಅಲ್ಟ್ರಾವೊಯಿಲೆಟ್ ಎಲೆಕ್ಟ್ರಿಕ್ ಬೈಕ್ ಸಂಪೂರ್ಣವಾಗಿ ಬೆಂಗಳೂರಿನಲ್ಲೇ ತಯಾರಾದ ಬೈಕ್. ಈಗಾಗಲೇ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತಿರುವ ಈ ಸೂಪರ್ ಬೈಕ್ ಹತ್ತಿದ ಸಂಸದ ತೇಜಸ್ವಿ ಸೂರ್ಯ, ಬೈಕ್ ಕುರಿತು ಹೇಳಿದ್ದೇನು?

ಬೆಂಗಳೂರು ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ಅಲ್ಟ್ರಾವೊಯಿಲೆಟ್ ಕಳೆದ ಕೆಲ ದಿನಗಳಿಂದ ಬಾರಿ ಸದ್ದು ಮಾಡತ್ತಿದೆ. ಬಜಾಜ್ ಸಂಸ್ಥಾಪಕ ಹಾಗೂ ಸಿಇಒಗೆ ಸವಾಲೆಸೆಯುವ ಮೂಲಕ ಭಾರಿ ಸಂಚಲನ ಸೃಷ್ಟಿಯಾಗಿತ್ತು. ಇದೀಗ ಬೆಂಳೂರಿನ ಜಗತ್ತಿಗೆ ನೀಡಿದ ಹೆಮ್ಮೆಯ ಎಲೆಕ್ಟ್ರಿಕ್ ಸೂಪರ್ ಬೈಕ್‌ನ್ನು ಸಂಸದ ತೇಜಸ್ವಿ ಸೂರ್ಯ ರೈಡ್ ಮಾಡಿದ್ದಾರೆ.

ಅಲ್ಟ್ರಾವೊಯಿಲೆಟ್ ಇವಿ ಬೈಕ್ ಸಂಸ್ಥಾಪಕ ಹಾಗೂ ಸಿಇಒ ನಾರಾಯಣ ಸುಬ್ರಮಣಿಯಂ ಭೇಟಿ ಮಾಡಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಬೈಕ್ ಹತ್ತಿ ಸಂಭ್ರಮಿಸಿದ್ದಾರೆ. ಅತ್ಯುತ್ತಮ ದರ್ಜೆಯ ಬೈಕನ್ನು ಜಗತ್ತಿಗೆ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿರುವ ಅಲ್ಟಾವೊಯೆಲೆಟ್ ಬೆಂಗಳೂರಿನ ಹೆಮ್ಮೆ ಎಂದು ತೇಜಸ್ವಿ ಸೂರ್ಯ ಬಣ್ಣಿಸಿದ್ದಾರೆ.

Tap to resize

ಪ್ರಧಾನಿ ಮೋದಿಯ ಮೇಕ್ ಇನ್ ಇಂಡಿಯಾ ಆಶಯದಂತೆ ಅಲ್ಟಾವೊಯಿಲೆಟ್ ಇಲ್ಲೆ ಸಂಶೋಧನೆ ನಡೆಸಿ, ಉತ್ಪಾದನೆ ಮಾಡಿದ ಉತ್ಪನ್ನವಾಗಿದೆ. ಭಾರತದ ಮೇಕ್ ಇನ್ ಇಂಡಿಯಾಗೆ 190ಕ್ಕೂ ಹೆಚ್ಚು ದೇಶಗಳಲ್ಲಿ ಬೇಡಿಕೆ ಇದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಬರೋಬ್ಬರಿ 7  ವರ್ಷಗಳಿಂದ ಸಂಶೋಧನೆ ನಡೆಸಿ ಈ ಬೈಕ್ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಅಲ್ಟ್ರಾವೊಯಿಲೆಟ್ ಎಫ್77 ಬೈಕ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಅತ್ಯಂತ ಗರಿಷ್ಠ ಪವರ್ ಹಾಗೂ ಮೈಲೇಜ್ ರೇಂಜ್ ಹೊಂದಿರುವ ಏಷ್ಯಾದ 2W ಎಲೆಕ್ಟ್ರಿಕ್ ವಾಹನ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಇಡೀ ತಂಡಕ್ಕೆ ತೇಜಸ್ವಿ ಸೂರ್ಯ ಶುಭ ಹಾರೈಸಿದ್ದಾರೆ. ಈ ಸೂಪರ್ ಬೈಕ್ ಅತ್ಯಾಕರ್ಷಕ ವಿನ್ಯಾಸವನ್ನೂ ಹೊಂದಿದ್ದು, ಮೊದಲ ನೋಟದಲ್ಲೆ ಬೈಕ್ ಪ್ರಿಯರ ಸೆಳೆಯಲಿದೆ.

ಅಲ್ಟ್ರಾವೊಯಿಲೆಟ್ ಎಫ್77 ಬೈಕ್‌ನಲ್ಲಿ 30kW ಮೋಟಾರು ಬಳಸಲಾಗಿದೆ. ಇನ್ನು ಎರಡು ವೇರಿಯೆಂಟ್ ಬೈಕ್‌ಗಳಲ್ಲಿ 7.1kWh ಹಾಗೂ 10.3kWh ಬ್ಯಾಟರಿ ಪ್ಯಾಕ್ ಬಳಸಲಾಗಿದೆ.  ಈ ಮೂಲಕ 211 ಕಿ.ಮೀ ಮೈಲೇಜ್ ಹಾಗೂ 323 ಕಿ.ಮೀ ಮೈಲೇಜ್ ರೇಂಜ್ ಲಭ್ಯವಿದೆ. ಇದರ ಜೊತೆಗೆ ಕಾರಿನಲ್ಲಿರುವಂತೆ ಹಿಲ್ ಹೋಲ್ಡ್ ಅಸಿಸ್ಟ್, ಎಬಿಎಸ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ ಸೇರಿದಂತೆ ಹಲುವು ಸುರಕ್ಷತಾ ಫೀಚರ್ಸ್ ಈ ಬೈಕ್‌ನಲ್ಲಿದೆ. 

ಅಲ್ಟ್ರಾವೊಯಿಲೆಟ್ ಎಫ್77 ಬೈಕ್‌ ಬೆಲೆ 2.99 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದ್ದು, ಟಾಪ್ ಮಾಡೆಲ್ ಬೆಲೆ 3.99 ಲಕ್ಷ ರೂಪಾಯಿ. ಅತ್ಯುತ್ತಮ ಪರ್ಫಾಮೆನ್ಸ್, ಅತ್ಯಾಕರ್ಷಕ ವಿನ್ಯಾಸ ಹಾಗೂ ಗರಿಷ್ಠ ಮೈಲೇಜ್ ರೇಂಜ್ ಹೊಂದಿರುವ ಸೂಪರ್ ಬೈಕ್ ಎಂದೇ ಅಲ್ಟಾವೊಯಿಲೆಟ್ ಗುರುತಿಸಿಕೊಂಡಿದೆ.

Latest Videos

click me!