ನ.27ಕ್ಕೆ ಹೋಂಡಾ ಆ್ಯಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್, 100 ಕಿ.ಮಿ ಮೈಲೇಜ್!

First Published | Nov 10, 2024, 4:57 PM IST

ಭಾರತದ ಗರಿಷ್ಠ ಮಾರಾಟವಾಗುತ್ತಿರುವ ಆ್ಯಕ್ಟೀವಾ ಸ್ಕೂಟರ್ ಇದೀಗ ಎಲೆಕ್ಟ್ರಿಕ್ ರೂಪದಲ್ಲಿ ನವೆಂಬರ್ 27 ರಂದು ಬಿಡುಗಡೆಯಾಗುತ್ತಿದೆ. ಹಲವು ವಿಶೇಷತೆ, ಬೆಲೆಯಲ್ಲೂ ಪೈಪೋಟಿ ಇರಲಿದೆ. ಹೊಸ ಸ್ಕೂಟರ್ ಮೈಲೇಜ್ ಸೇರಿದಂತೆ ಇತರ ಫೀಚರ್ಸ್ ಏನು?
 

ಭಾರತದಲ್ಲಿ ಹೋಂಡಾ ಆ್ಯಕ್ಟೀವಾ ಸ್ಕೂಟರ್ ಹಲವರ ನೆಚ್ಚಿನ ಸ್ಕೂಟರ್. ಹಲವು ಅಪ್‌ಡೇಟ್ ಆಗಿರುವ ಆ್ಯಕ್ಟೀವಾ ಇದೀಗ 7ಜಿ ವರ್ಶನ್ ಸ್ಕೂಟರ್ ಬಿಡುಗಡೆಯಾಗಿದೆ.  ಗರಿಷ್ಠ ಮಾರಾಟ ಸೇರಿದಂತೆ ಹಲವು ದಾಖಲೆಯನ್ನು ಆ್ಯಕ್ಟೀವಾ ಬರೆದಿದೆ. ಇದೀಗ ಇದೇ ಆ್ಯಕ್ಟೀವಾ ಎಲೆಕ್ಟ್ರಿಕ್ ರೂಪದಲ್ಲಿ ಬರುತ್ತಿದೆ. ಹೌದು, ಹೋಂಡಾ ಭಾರತದಲ್ಲಿ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲು ಸಜ್ಜಾಗಿದೆ. 

ಹೋಂಡಾ ಆ್ಯಕ್ಟೀವಾ ಎಲೆಕ್ಟ್ರಿಕ್ ಸ್ಕೂಟರ್ ನವೆಂಬರ್ 27 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಎಲ್ಲಾ ತಯಾರಿಯೊಂದಿಗೆ ಹೋಂಡಾ ಸ್ಕೂಟರ್ ಬಿಡುಗಡೆಗೆ ಸಜ್ಜಾಗಿದೆ. ಟಿವಿಎಸ್ ಐಕ್ಯೂಬ್, ಎಥರ್ 450 ಎಕ್ಸ್, ಬಜಾಜ್ ಚೇತಕ್ ಸೇರಿದಂತೆ ಹಲವು ಎಲೆಕ್ಟ್ರಿಕ್ ಸ್ಕೂಟರ್‌ಗೆ ಪ್ರತಿಸ್ಪರ್ಧಿಯಾಗಿ ಹೊಸ ಸ್ಕೂಟರ್ ಬಿಡುಗಡೆಯಾಗುತ್ತಿದೆ.
 

Tap to resize

ಆ್ಯಕ್ಟೀವಾ ಎಲೆಕ್ಟ್ರಿಕ್ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 100 ಕಿ.ಮಿ ಮೈಲೇಜ್ ನೀಡುವ ಸಾಧ್ಯತೆ ಇದೆ. ಮೈಲೇಜ್ ಕುರಿತು ಹೋಂಡಾ ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ. ಸ್ಕೂಟರ್ ಸಂಪೂರ್ಣ ಚಾರ್ಜಿಂಗ್ ಸಮಯ 4 ರಿಂದ 5 ಗಂಟೆ ಎಂದು ಹೇಳಲಾಗುತ್ತಿದೆ. ನವೆಂಬರ್ 27 ರಂದು ಹೋಂಡಾ ಈ ಕುರಿತು ಎಲ್ಲಾ ಮಾಹಿತಿ ಬಹಿರಂಗಪಡಿಸಲಿದೆ.
 

ಉತ್ಪಾದನೆ ವೆಚ್ಚ ಕಡಿಮೆ ಮಾಡಿ ಸ್ಕೂಟರ್ ಬಿಡುಗಡೆ ಮಾಡುತ್ತಿದೆ.  ಐಸಿಐ ಫೀಚರ್ ಮೂಲಕ ಉತ್ತಮ ಗುಣಮಟ್ಟ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಹೋಂಡಾ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಸ್ಕೂಟರ್ ಬೆಲೆ ಕುರಿತು ಅಧಿಕೃತ ಮಾಹಿತಿ ಬಿಡುಗಡೆಯಾಗಿಲ್ಲ. ಮೂಲಗಳ ಪ್ರಕಾರ 1 ರಿಂದ 1.5 ಲಕ್ಷ ರೂಪಾಯಿ ಒಳಗಿರಲಿದೆ ಎಂದು ಹೇಳಲಾಗುತ್ತಿದೆ.
 

ಹೋಂಡಾ ಆ್ಯಕ್ಟೀವಾ ಸ್ಕೂಟರ್ ಫಿಕ್ಸ್ ಬ್ಯಾಟರಿ ಪ್ಯಾಕ್ ಹೊಂದಿದೆ. ಇಲ್ಲಿ ಬ್ಯಾಟರಿ ಹೊರತೆಗೆದು ಚಾರ್ಜ್ ಮಾಡುವ ಸೌಲಭ್ಯವಿಲ್ಲ. ಸ್ಕೂಟರ್‌ನಲ್ಲಿ ಚಾರ್ಜಿಂಗ್ ಪ್ಲಗ್ ನೀಡಲಾಗುತ್ತದೆ. ಸ್ಕೂಟರ್ ಜೊತೆಗೆ ಚಾರ್ಜಿಂಗ್ ವೈಯರ್ ಹಾಗೂ ಸಾಕೆಟ್ ನೀಡಲಾಗುತ್ತದೆ. ಮನೆಯಲ್ಲಿ ಅಥವಾ ಚಾರ್ಜಿಂಗ್ ಸ್ಟೇಶನ್‌ನಲ್ಲಿ ಸ್ಕೂಟರ್ ಚಾರ್ಜ್ ಮಾಡಲು ಸಾಧ್ಯವಿದೆ.
 

Latest Videos

click me!