ಒಬೆನ್ ಎಲೆಕ್ಟ್ರಿಕ್ ಇದೀಗ ಹೊಸ ಅತ್ಯಾಕರ್ಷಕ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಇದು ಒಬೆನ್ ಹೊರ ತಂದಿರುವ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಬೈಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಬೆನ್ ರೋರ್ ಇಝೆಡ್ ಸೀರಿಸ್ ಬೈಕ್‌ನ್ನು ಬಿಡುಗಡೆ ಮಾಡಿದೆ. ಮೂರು ವೇರಿಯೆಂಟ್‌ನಲ್ಲಿ ರೋರ್ ಇಝೆಡ್ ಬೈಕ್ ಬಿಡುಗಡೆ ಮಾಡಲಾಗಿದೆ.
ವಿವಿಧ ಬ್ಯಾಟರಿ ಪ್ಯಾಕ್‌ನಲ್ಲಿ ಒಬೆನ್ ಬೈಕ್ ಲಭ್ಯವಿದೆ. ವಿಶೇಷ ಅಂದರೆ ಇದು ಒಬೆನ್ ಬಿಡುಗಡೆ ಮಾಡಿದ ಅತೀ ಕಡಿಮೆ ಬೆಲೆಯ ಬೈಕ್ ಆಗಿದೆ. ನೂತನ ರೋಡ್ ಇಝೆಡ್ ಬೈಕ್ ಬೆಲೆ 89,999 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಇದು ಲಾಂಚ್ ಪ್ರಯುಕ್ತ ಘೋಷಿಸಿದ ಲಿಮಿಟೆಡ್ ಪಿರಿಯೆಟ್ ಆಫರ್ ಬೆಲೆಯಾಗಿದೆ.
ಒಬೆನ್ ಹೊಸ ಬೈಕ್‌ಗೆ ಮತ್ತೊಂದು ಆಫರ್ ನೀಡಿದೆ. ಕೇವಲ 2,200 ರೂಪಾಯಿ ಡೌನ್‌ಪೇಮೆಂಟ್ ಮಾಡಿದರೆ ಸಾಕು. ಹೊಸ ಒಬೆನ್ ಬೈಕ್ ಮನೆಗೆ ತರಲು ಸಾಧ್ಯ. ಇನ್ನುಳಿದ ಮೊತ್ತಕ್ಕೆ ಸುಲಭವಾಗಿ ಸಾಲ ಸೌಲಭ್ಯ ಸಿಗಲಿದೆ. ಇಷ್ಟೇ ಅಲ್ಲ ಎಲೆಕ್ಟ್ರಿಕ್ ವಾಹನದ ಕಾರಣ ಕಡಿಮೆ ಬಡ್ಡಿದರ ಸೇರಿದಂತೆ ಇತರ ಸೌಲಭ್ಯಗಳು ಸಿಗಲಿದೆ. 5 ವರ್ಷ ಅಥಾ 75,000 ಕಿಲೋಮೀಟರ್ ವಾರೆಂಟಿಯನ್ನು ಒಬೆನ್ ನೀಡುತ್ತಿದೆ.
ಒಬೆನ್ ಹಲವು ಸಂಶೋಧನೆ ಮೂಲಕ ಬೈಕ್ ಬ್ಯಾಟರಿ ಅಭಿವೃದ್ಧಿಪಡಿಸಿದೆ. ಹೀಗಾಗಿ ತಾಪಮಾನ ಸಹಿಸಿಕೊಳ್ಳುವ ಸಾಮರ್ಥ್ಯ ಮೂಲಕ ಉತ್ತಮ ಬ್ಯಾಟರಿ ಲೈಫ್ ನೀಡಲಾಗಿದೆ. ಮೂರು ಬ್ಯಾಟರಿ ಪ್ಯಾಕ್ ವೇರಿಯೆಂಟ್ ಲಭ್ಯವಿದೆ . ಈ ಪೈಕಿ 4.4kWh ಬ್ಯಾಟರಿ ಪ್ಯಾಕ್ ಬೈಕ್ ಒಂದು ಬಾರಿ ಚಾರ್ಜ್ ಮಾಡಿದರೆ 175 ಕಿಲೋಮೀಟರ್ ಮೈಲೇಜ್ ನೀಡಲಿದೆ.
ಮತ್ತೊಂದು ವಿಶೇಷ ಅಂದರೆ ಹೊಸ ಬೈಕ್ ಶೇಕಡಾ 80 ರಷ್ಟು ಚಾರ್ಜಿಂಗ್ 45 ನಿಮಿಷದಲ್ಲಿ ಆಗಲಿದೆ. ಫಾಸ್ಟ್ ಚಾರ್ಜಿಂಗ್ ಮೂಲಕ 50 ರಿಂದ 55 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ. ಹೀಗಾಗಿ ಚಾರ್ಜಿಂಗ್ ಸಮಯವೂ ಕಡಿತಗೊಂಡಿದೆ. ಸವಾರರು 15 ರಿಂದ 20 ನಿಮಿಷ ಚಾರ್ಜ್ ಮಾಡಿ 50 ರಿಂದ 75 ಕಿ.ಮಿ ಪ್ರಯಾಣ ಮಾಡಲು ಸಾಧ್ಯವಿದೆ. ನೂತನ ಬೈಕ್ ಗರಿಷ್ಠ ಸ್ಪೀಡ್ 90 ಕಿ.ಮಿ ಪ್ರತಿ ಗಟೆಗೆ. ಬೆಂಗಳೂರು, ಪುಣೆ, ದೆಹಲಿ ಸೇರಿದಂತೆ ಭಾರತದ ಪ್ರಮುಖ ನಗರದಲ್ಲಿ 60ಕ್ಕೂ ಹೆಚ್ಚಿನ ಸ್ಟೋರ್ ತೆರೆಯಲು ಒಬೆನ್ ಮುಂದಾಗಿದೆ.