Published : Apr 04, 2025, 03:27 PM ISTUpdated : Apr 04, 2025, 03:39 PM IST
ಟಿವಿಎಸ್, ಓಲಾ, ಹೀರೋ ಮೋಟೋಕಾರ್ಪ್, ಬಜಾಜ್ ಆಟೋ ಸೇರಿದಂತೆ ಹಲವು ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ. ಇದರ ಜೊತೆ ಮೈಲೇಜ್, ಆಫರ್ ಸೇರಿದಂತೆ ಹಲವು ವಿಶೇಷತೆಗಳು ಇವೆ. ಭಾರತದಲ್ಲಿ ಮಾರ್ಚ್ ತಿಂಗಳಲ್ಲಿ ಅತೀ ಹೆಚ್ಚು ಜನ ಖರೀದಿಸಿದ ಸ್ಕೂಟರ್ ಯಾವುದು?
ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬೆಳೆಯುತ್ತಿದೆ. ಪ್ರತಿ ದಿನ ಹೊಸ ಹೊಸ ಸ್ಕೂಟರ್ ಬಿಡುಗಡೆಯಾಗುತ್ತಿದೆ. ಬೇಡಿಕೆ ಕೂಡ ಹಚ್ಚಾಗುತ್ತಿದೆ. ಕಡಿಮೆ ನಿರ್ವಹಣೆ , ಗರಿಷ್ಠ ಮೈಲೇಜ್ ಸೇರಿದಂತೆ ಹಲವು ಕಾರಣಗಳಿಂದ ಇವಿ ಸ್ಕೂಟರ್‌ನತ್ತ ಜನ ವಾಲುತ್ತಿದ್ದಾರೆ. ಇದೀಗ ಮಾರ್ಚ್ ತಿಂಗಳ ಮಾರಾಟ ವಿವರ ಬಹಿರಂಗವಾಗಿದೆ. ಕಳೆದ ತಿಂಗಳು ಅತೀ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಸ್ಕೂಟರ್ ಪೈಕಿ ಬಜಾಜ್ ಆಟೋ ಚೇತಕ್ ಸ್ಕೂಟರ್ ಮೊದಲ ಸ್ಥಾನದಲ್ಲಿದೆ. ಅತೀ ಹೆಚ್ಚಿನ ಜನರು ಈ ಸ್ಕೂಟರ್ ಖರೀದಿಸಿದ್ದಾರೆ.
25
ಬಜಾಜ್ ಆಟೋ ಎಲೆಕ್ಟ್ರಿಕ್ ಸ್ಕೂಟರ್ ಫಸ್ಟ್
ಸರಾಸರಿ ದಿನಕ್ಕೆ 1,124 ಯೂನಿಟ್ಗಿಂತ ಜಾಸ್ತಿ ಮಾರಾಟ ಆಗಿದೆ. ಕಂಪನಿ 2025ನೇ ಸಾಲಿನಲ್ಲಿ 230,761 ಯೂನಿಟ್ಗಳನ್ನ ಮಾರಾಟ ಮಾಡಿದೆ. ಈ ಮೂಲಕ ಇದೀಗ ಬಜಾಟ್ ಚೇತಕ್ ಸ್ಕೂಟರ್ ಭಾರತದ ನಂಬರ್ 1 ಎಲೆಕ್ಟ್ರಿಕ್ ಸ್ಕೂಟರ್ ಆಗಿ ಹೊರಹೊಮ್ಮಿದೆ. ಇತ್ತೀಚೆಗೆ ಬಜಾಜ್ ಚೇತಕ್ ಹೊಸ ಮಾದರಿ, ಹೊಸ ಪರ್ಫಾಮೆನ್ಸ್‌ನೊಂದಿಗೆ ಬಿಡುಗಡೆಯಾಗಿದೆ.
35
ಸ್ಟ್ರಾಂಗ್ ಪ್ಲೇಸ್ನಲ್ಲಿ ಟಿವಿಎಸ್ ಐಕ್ಯೂಬ್
ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ ಅಂದರೆ ಸ್ಕೂಟರ್ ಗುಣಮಟ್ಟ, ಪರ್ಫಾಮೆನ್ಸ್, ಸರ್ವೀಸ್ ಸೇರಿದಂತೆ ಇತರ ಕಾರಣಗಳಿಂದ ಟಿವಿಎಸ್ ಐಕ್ಯೂಬ್ ಮೊದಲ ಸ್ಥಾನದಲ್ಲಿದೆ. ಆದರೆ ಮಾರಾಟದಲ್ಲಿ ಟಿವಿಎಸ್ ಐಕ್ಯೂಬ್ 2ನೇ ಸ್ಥಾನದಲ್ಲಿದೆ. ಟಿವಿಎಸ್ ಐಕ್ಯೂಬ್ ಇತ್ತೀಚೆಗೆ ಹಲವು ಬದಲಾವಣೆಗಳೊಂದಿಗೆ ಇವಿ ಸ್ಕೂಟರ್ ಬಿಡುಗಡೆ ಮಾಡಿದೆ.
45
ಓಲಾ ಎಲೆಕ್ಟ್ರಿಕ್ ಸ್ಕೂಟರ್ಗಳು
ಓಲಾ ಎಲೆಕ್ಟ್ರಿಕ್ ಮತ್ತು ಏತರ್ ಎನರ್ಜಿ ಕಾಂಪಿಟೇಷನ್
ಓಲಾ ಎಲೆಕ್ಟ್ರಿಕ್ ಮಾರ್ಚ್ 2025 ರಲ್ಲಿ ಸೇಲ್ಸ್ನಲ್ಲಿ ಡೌನ್ ಆಗಿದೆ. ಓಲಾ ಕುರಿತು ಹಲವು ಟೀಕಗಳು, ಆರೋಪಗಳು ಕೇಳಿಬಂದಿತ್ತು. ಪ್ರಮುಖವಾಗಿ ಸರ್ವೀಸ್ ವಿಚಾರದಲ್ಲಿ ಓಲಾ ಭಾರಿ ಹಿನ್ನಡೆ ಅನುಭವಿಸಿತ್ತು. ಮಾರ್ಚ್ ತಿಂಗಳ ಮಾರಾಟ ಪಟ್ಟಿಯಲ್ಲಿ ಓಲಾ ಮೂರನೇ ಸ್ಥಾನದಲ್ಲಿದೆ. ಇನ್ನು ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಎಥರ್ ಎನರ್ಜಿ ಮಾರಾಟದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
55
ಇ-ಸ್ಕೂಟರ್ ಸೆಗ್ಮೆಂಟ್ನಲ್ಲಿ ಹೀರೋ ಮೋಟೋಕಾರ್ಪ್ ಪ್ಲೇಸ್
ಹೀರೋ ಮೋಟೋಕಾರ್ಪ್ ಮಾರ್ಚ್ 2025 ರಲ್ಲಿ 7,977 ಯೂನಿಟ್ಗಳನ್ನ ಮಾರಾಟ ಮಾಡಿದೆ. ಹೀರೋ ಹಲವು ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಹೊರತಂದಿದೆ. ಅತೀ ಕಡಿಮೆ ಬೆಲೆ, ಗರಿಷ್ಠ ಮೈಲೇಜ್, ಸರಾಸರಿ ಮೈಲೇಜ್ ಸೇರಿದಂತೆ ಹಲವು ಆಯ್ಕೆಗಳು ಇದರಲ್ಲಿದೆ.