RCB Victory Celebration: 100 ಕೋಟಿ ರೂ ಆಸ್ತಿ ಮಾಡಿದ್ದೀನಿ, RCB ಟೀಂ ನೋಡಲು ಹೋಗಿ ಒಬ್ಬನೇ ಮಗ ಬೀದಿ ಹೆಣವಾದ; ಭೂಮಿಕ್‌ ತಂದೆ ಆಕ್ರೋಶ

Published : Jun 05, 2025, 01:54 PM ISTUpdated : Jun 05, 2025, 02:09 PM IST

RCB ತಂಡವು IPL ಟ್ರೋಫಿ ಗೆದ್ದು ಒಂದು ದಿನ ಕಳೆಯವುದರ ಒಳಗಡೆ ಮಾರಣಹೋಮ ಆಗಿದೆ. ಹಾಸನದ ಬೇಲೂರು ತಾಲೂಕಿನ ಭೂಮಿಕ್‌ ಕೂಡ ನಿಧನರಾಗಿದ್ದಾರೆ. ಈ ಬಗ್ಗೆ ಅವರ ತಂದೆ ಆಕ್ರೋಶ ಹೊರಹಾಕಿದ್ದಾರೆ.

PREV
15

ಹದಿನೇಳು ವರ್ಷಗಳು ಕಳೆದಮೇಲೆ ಆರ್‌ಸಿಬಿ ತಂಡವು ಐಪಿಎಲ್‌ ಟ್ರೋಫಿ ಗೆದ್ದಿತ್ತು. ಈ ವಿಜಯಕ್ಕಾಗಿ ಲಕ್ಷಾಂತರ ಜನರು ಪ್ರಾರ್ಥಿಸುತ್ತಿದ್ದರು. ಆದರೆ ಟ್ರೋಫಿ ಗೆದ್ದು ಒಂದು ದಿನ ಕಳೆಯವುದರ ಒಳಗಡೆ ಮಾರಣಹೋಮ ಆಗಿದೆ. 

25

“ಈ ಥರ ಪಟಾಕಿ ಹೊಡೆಯಬಾರದು, ಆಸ್ತಿ ಬೇಜಾನ್ ಇದೆ, ಯಾರಿಗೋಸ್ಕರ 100 ಕೋಟಿ ರೂಪಾಯಿ ಆಸ್ತಿ ಮಾಡಿಟ್ಟೆ? ಈಗ ಅವನು ಹೊತ್ಕೊಂಡು ಹೋದ್ನಾ? ಅವನು ಹೆಂಗೆ ಇದ್ದನೋ ಹಾಗೆ ಅವನನ್ನು ಕಳಿಸಿಕೊಡ್ತೀನಿ. ನಾನು ಬೇರೆಯವರಿಗೋಸ್ಕರ ಬದುಕಿಲ್ಲ, ಅವನಿಗೋಸ್ಕರ ಬದುಕಿದ್ದೀನಿ. ನನಗೆ ಯಾರಿಂದಲೂ ಸಲಹೆ ಕೇಳೋದು ಬೇಕಾಗಿಲ್ಲ. ಅವನು ಯಾರ ಮಾತನ್ನು ಕೇಳುತ್ತಿರಲಿಲ್ಲ, ಈಗಲೂ ನಾನು ಕೂಡ ಯಾರ ಮಾತನ್ನು ಕೇಳೋದಿಲ್ಲ” ಎಂದು ಭೂಮಿಕ್‌ ತಂದೆ ಹೇಳಿದ್ದಾರೆ.

35

“ನಾನು ಕೋಟಿಗಟ್ಟಲೇ ಟ್ಯಾಕ್ಸ್‌ ಕಟ್ಟುವೆ. ನನಗೂ ಒಬ್ಬನೇ ಮಗ ಇರೋದು. ನಾನು 20 ವರ್ಷ ಕೈತುತ್ತು ಕೊಟ್ಟು ನನ್ನ ಮಗನನ್ನು ಸಾಕಿದ್ದೀನಿ. ನನ್ನ ಮಗ ಪೊರ್ಕಿ ಹುಡುಗ ಅಲ್ಲ. ಊರಿಂದ ಬೆಂಗಳೂರು ಕಾಲೇಜುವರೆಗೆ ಕೇಳಿದ್ರೂ ಅವನು ಓದು ಬಿಟ್ಟು ಯಾವುದೇ ಆಕ್ಟಿವಿಟಿ ಮಾಡಿಲ್ಲ. ಒಂದು ದಿನವೂ ಚಕ್ಕರ್‌ ಹಾಕದೆ ಅವನು ಶಾಲೆಗೆ ಹೋಗಿದ್ದಾನೆ. ಆಂಬುಲೆನ್ಸ್‌ ವ್ಯವಸ್ಥೆ ಮಾಡಿದ್ರೆ ನನ್ನ ಮಗ ಉಳಿಯುತ್ತಿದ್ದ. ನಿನ್ನೆಯಿಂದ ನಾನು ನೋವಿನಲ್ಲಿದ್ದೇನೆ” ಎಂದು ಭೂಮಿಕ್‌ ತಂದೆ ಹೇಳಿದ್ದಾರೆ.

45

“ದುಡ್ಡು, ರಾಜಕೀಯ ಶಾಶ್ವತ ಅಲ್ಲ, ನೀವು ಐದು ವರ್ಷ ಮಾತ್ರ ಅಧಿಕಾರದಲ್ಲಿ ಇರುತ್ತೀರಾ. ಬೇಕು ಅಂತಲೇ ನಮ್ಮ ಮಕ್ಕಳನ್ನು ಕೊ*ಲೆ ಮಾಡಿದ್ದೀರಾ. ನಮಗೆ ಬಂದ ಸ್ಥಿತಿ ನಿಮ್ಮ ಮಕ್ಕಳಿಗೂ ಬರಬೇಕು. ನನ್ನ ಹಾಗೆ 11 ಮಕ್ಕಳ ಪಾಲಕರ ಶಾಪ ನಿಮಗೆ ತಟ್ಟೇ ತಟ್ಟುತ್ತದೆ. ನಿಮ್ಮ ಬೇಳೆ ಕಾಳು ಬೇಯಿಸಿಕೊಳ್ಳೋಕೆ ಆಸ್ಪತ್ರೆಗೆ ಬಂದು ಹೋದ್ರಿ” ಎಂದು ಭೂಮಿಕ್‌ ತಂದೆ ಹೇಳಿದ್ದಾರೆ.

55

RCB ತಂಡವನ್ನು ನೋಡಲು ಬೆಂಗಳೂರಿನಲ್ಲಿ ಕೋಟ್ಯಂತರ ಅಭಿಮಾನಿಗಳು ಜಮಾಯಿಸಿದ್ದರು. ವಿಧಾನಸೌಧದ ಮುಂದೆ ಜನಸಾಗರ ನೆರೆದಿತ್ತು. ಅಷ್ಟೇ ಅಲ್ಲದೆ Rally ಮಾಡದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್‌ ಕೊಹ್ಲಿ ತಂಡವನ್ನು ನೋಡಲು ಜನರು ನೆರೆದಿದ್ದರು. ಅಲ್ಲಿ ಸರಿಯಾಗಿ ವ್ಯವಸ್ಥೆ ಮಾಡಿರಲಿಲ್ಲ, ನೂಕು ನುಗ್ಗುಲು ಆಯ್ತು. ಆಗ ಕಾಲ್ತುಳಿತದಲ್ಲಿ ಹನ್ನೊಂದು ಸಾವಾಗಿದ್ದು, ಇನ್ನೂ ಕೆಲವರು ಬೆಂಗಳೂರಿನ ಬೋರಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Read more Photos on
click me!

Recommended Stories