ಬೆಂಗಳೂರು ಮೆಟ್ರೋ ಮತ್ತು ಬಿಎಂಟಿಸಿ ಸಮನ್ವಯದಿಂದ ಕಬ್ಬನ್ ಪಾರ್ಕ್ ಹಾಗೂ ತಾವರೆಕೆರೆ ಮೆಟ್ರೋ ನಿಲ್ದಾಣಗಳ ಬಳಿ ಹೊಸ ಬಸ್ ನಿಲ್ದಾಣಗಳನ್ನು ಆರಂಭಿಸಲಾಗಿದೆ. ಇದು ಪ್ರಯಾಣಿಕರ ಸಂಪರ್ಕವನ್ನು ಸುಧಾರಿಸಲಿದೆ. ಇದರ ಜೊತೆಗೆ ಜಿಗಣಿ ಬಳಿ ಮೃತ ಪ್ರಾಣಿಗಳ ವಿಲೇವಾರಿಗೆ ಹೊಸ ಚಿತಾಗಾರ ಸ್ಥಾಪನೆಯಾಗಲಿದೆ.
ಬೆಂಗಳೂರು: ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಸುಧಾರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಹಾಗೂ ಬೆಂಗಳೂರು ಬಿಎಂಟಿಸಿ ಸಮನ್ವಯದೊಂದಿಗೆ ನೂತನವಾಗಿ 2 ಬಸ್ ನಿಲ್ದಾಣಗಳನ್ನು ಆರಂಭಿಸಿದೆ.
25
‘ಬಿ’ ಪ್ರವೇಶದ್ವಾರದ ಹೊಸ ಬಸ್ ನಿಲ್ದಾಣ
ಅ.6ರಿಂದ ಜಾರಿಗೆ ಬರುವಂತೆ ನೇರಳೆ ಮಾರ್ಗದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಕಡೆಯಿಂದ ಬಂದು ಅನಿಲ್ ಕುಂಬ್ಳೆ ವೃತ್ತದ ಮೂಲಕ ಶಾಂತಿನಗರದ ಕಡೆಗೆ ಸಂಚರಿಸುವ ಬಸ್‌ಗಳಿಗಾಗಿ ‘ಬಿ’ ಪ್ರವೇಶದ್ವಾರದ (ಚಿನ್ನಸ್ವಾಮಿ ಕ್ರೀಡಾಂಗಣದ ಕಡೆ) ಸಮೀಪ ಹೊಸ ಬಸ್ ನಿಲ್ದಾಣವನ್ನು ಕಲ್ಪಿಸಲಾಗಿದೆ.
35
‘ಸಿ’ ಪ್ರವೇಶದ್ವಾರದ ಬಳಿ ಹೊಸ ಬಸ್ ನಿಲ್ದಾಣ
ಅದೇ ರೀತಿ ಅನಿಲ್ ಕುಂಬ್ಳೆ ವೃತ್ತದ ಕಡೆಯಿಂದ ಬಂದು ಲೋಕ ಭವನ (ರಾಜಭವನ) ಕಡೆಗೆ ಸಂಚರಿಸುವ ಬಸ್‌ಗಳಿಗಾಗಿ ‘ಸಿ’ ಪ್ರವೇಶದ್ವಾರದ ಸಮೀಪ ಹೊಸ ಬಸ್ ನಿಲ್ದಾಣವನ್ನು ಕಲ್ಪಿಸಲಾಗಿದೆ.
ಡೈರಿ ಸರ್ಕಲ್‌ನಿಂದ ಬನ್ನೇರುಘಟ್ಟ ಕಡೆಗೆ ಸಂಚರಿಸುವ ಪ್ರಯಾಣಿಕರಿಗೆ
ಗುಲಾಬಿ ಮಾರ್ಗ (ಮುಂಬರುವ ಮಾರ್ಗ) ತಾವರೆಕೆರೆ ಮೆಟ್ರೋ ನಿಲ್ದಾಣ (ಬನ್ನೇರುಘಟ್ಟ ರಸ್ತೆ)ದಲ್ಲಿ ಡೈರಿ ಸರ್ಕಲ್‌ನಿಂದ ಬನ್ನೇರುಘಟ್ಟ ಕಡೆಗೆ ಸಂಚರಿಸುವ ಬಸ್‌ಗಳಿಗೆ ಹಾಗೂ ಜಯದೇವ ಆಸ್ಪತ್ರೆ ಕಡೆಯಿಂದ ಡೈರಿ ಸರ್ಕಲ್ ಕಡೆಗೆ ಸಂಚರಿಸುವ ಬಸ್‌ಗಳಿಗೆ ಅನುಕೂಲವಾಗುವಂತೆ ಮೆಟ್ರೋ ನಿಲ್ದಾಣದ ಬಳಿ ಹೊಸ ಬಸ್ ನಿಲ್ದಾಣವನ್ನು ಕಲ್ಪಿಸಲಾಗಿದೆ.
55
ಮೃತ ಪ್ರಾಣಿಗಳ ಕಳೇಬರ ವಿಲೇವಾರಿಗೆ ಜಿಗಣಿ ಬಳಿ ಶೀಘ್ರ ಚಿತಾಗಾರ
ಇನ್ನು, ಬೆಂಗಳೂರಿನ ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸತ್ತು ಪ್ರಾನಿಗಳ ಕಳೇಬರ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಜಿಗಣಿ ಸಮೀಪ ಬಿಂಗೀಪುರ ಬೇಗೂರು ಕೊಪ್ಪ ಮುಖ್ಯರಸ್ತೆಯಲ್ಲಿ ಸುಸಜ್ಜಿತ ಪ್ರಾಣಿ ಚಿತಾಗಾರವನ್ನು ಶೀಘ್ರವೇ ಸ್ಥಾಪಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಕೆಎನ್ ರಮೇಶ್ ತಿಳಿಸಿದ್ದಾರೆ.