ಎಸ್ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಹೆಗಡೆಯವರ ದುರಂತ ಸಾವನ್ನು ಉಲ್ಲೇಖಿಸಿ, ಲೇಖನವು ಸಿ.ಜೆ. ರಾಯ್ ಅವರ ವಿವಾದಗಳು, ಹಗರಣಗಳು ಮತ್ತು ಅವರ ಮೇಲಿದ್ದ ಒತ್ತಡವನ್ನು ವಿವರಿಸುತ್ತದೆ. ಐಟಿ ದಾಳಿಯ ತೀವ್ರತೆ ಮತ್ತು ಅವರ ಅಜ್ಞಾತ ಸಹಾಯಗಳ ಬಗ್ಗೆ ಚಕ್ರವರ್ತಿ ಚಂದ್ರಚೂಡ ಮಾಹಿತಿ ಹಂಚಿಕೊಂಡಿದ್ದಾರೆ.
ಆಗರ್ಭ ಶ್ರೀಮಂತರು ವಿಕೃತ ಸಾವಿಗೀಡಾಗಿರುವ ಹಲವಾರು ಉದಾಹರಣೆಗಳಿವೆ. ಹಗ್ಗದ ಗಾತ್ರದ ಪ್ಲಾಟಿನಂ ಸರಗಳನ್ನು ಹಾಕಿಕೊಂಡು ಐಷಾರಾಮಿ ಕಾರುಗಳಲ್ಲಿ ಬರುವ ಕೆಲವರು ದುರಂತ ಅಂತ್ಯ ಕಾಣುತ್ತಾರೆ. ಎಸ್ಎಂ ಕೃಷ್ಣ ಅವರಂತಯ ಕೃಪಾಶೀರ್ವಾದ ಇದ್ರೂ, ಕೇಂದ್ರ ಸರ್ಕಾರದ ಜೊತೆ ಗುದ್ದಾಡುವ ಸಾಮರ್ಥ್ಯವಿದ್ರೂ ಸಿದ್ಧಾರ್ಥ್ ಹೆಗಡೆ ನದಿಪಾಲಾದರು.
25
ಒಂದಿಷ್ಟು ವಿವಾದ ಮತ್ತು ಹಗರಣ
ದೊಡ್ಡಬಳ್ಳಾಪುರದ ರೆಸಾರ್ಟ್‌ನಲ್ಲಿ ಓರ್ವ ನಟಿಯ ಜೊತೆ ಸಿಜೆ ರಾಯ್ ಅವರ ದೊಡ್ಡ ಹಗರಣ ಬಂತು. ಆನಂತರ ಆ ನಟಿ ನಾನಲ್ಲ. ರೆಸಾರ್ಟ್‌ಗೆ ನಾನು ಹೋಗಿರಲಿಲ್ಲ ಎಂಬ ಸ್ಪಷ್ಟನೆಯನ್ನು ಸಹ ನೀಡಿದರು. ಆ ಸಂದರ್ಭದಲ್ಲಿ ಫೋಟೋ, ವಿಡಿಯೋಗಳು ಏನು ಇರಲಿಲ್ಲ. ಇಷ್ಟು ಮಾತ್ರವಲ್ಲದೇ ದುಬೈ ಮಾಡೆಲ್‌ಗಳ ಜೊತೆಗಿನ ಕೆಲ ಫೋಟೋಗಳು ಸಹ ಹೊರ ಬಂದಿದ್ದವು.
35
ಶ್ರೀಮಂತರ ತೆವಲುಗಳು
ಇದೆಲ್ಲವೂ ಶ್ರೀಮಂತರ ವೈಯಕ್ತಿಕ ತೆವಲುಗಳು. ಆದರತೆ ಇದ್ಯಾವೂದು ಕ್ರೈಂ ಅಂತ ನನಗೆ ಅನ್ನಿಸಿಲ್ಲ. ಎರಡೂ ಕಡೆಯಿಂದ ಸಮ್ಮತಿಯಿದ್ದಾಗ ಅದು ಅವರ ವೈಯಕ್ತಿಕ. ಇತ್ತೀಚೆಗಷ್ಟೇ ಸಿ.ಜೆ.ರಾಯ್ ಅವರು ಭಾರತ ತೊರೆದು ಅಮೆರಿಕಾದಲ್ಲಿ ನೆಲೆಸುತ್ತಾರೆ. ವಿಜಯ್ ಮಲ್ಯ, ಲಲಿತ್ ಮೋದಿಯಂತೆಯೇ ದೇಶ ಬಿಡ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು ಎಂಬ ಮಾಹಿತಿಯನ್ನು ಚಕ್ರವರ್ತಿ ಚಂದ್ರಚೂಡ ಹಂಚಿಕೊಂಡಿದ್ದಾರೆ.
ಈ ಬಾರಿಯ ಬಿಗ್‌ಬಾಸ್ ಕಾರ್ಯಕ್ರಮದ ಜೊತೆಯೂ ರಾಯ್ ಹೆಚ್ಚು ಗುರುತಿಸಿಕೊಂಡಿರಲಿಲ್ಲ. ಹೆಚ್ಚಾಗಿ ಹೊರಗೆಯೂ ರಾಯ್ ಕಾಣಿಸಿಕೊಳ್ಳುತ್ತಿರಲಿಲ್ಲ. ಬಿಗ್‌ಬಾಸ್ ವಿನ್ನರ್ ಹನುಮಂತ್‌ಗೆ ಮನೆಯೊಂದನ್ನು ನೀಡಿದ್ದರು. ಅದೇ ರೀತಿ ರಿಯಾಲಿಟಿ ಶೋ ಸ್ಪರ್ಧಿಗಳಿಗೆ ತುಂಬಾ ಸಹಾಯ ಮಾಡಿರುವ ವ್ಯಕ್ತಿ. ಆದ್ರೆ ಇದ್ಯಾವೂದನ್ನು ರಾಯ್ ಬಹಿರಂಗವಾಗಿ ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಚಕ್ರವರ್ತಿ ಚಂದ್ರಚೂಡ, ಈ ಬಾರಿ ಐಟಿ ದಾಳಿ ಮಾಡಿಸಿದವರು ಬಲವಾದ ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆಗೆ ನೀಡಿದ್ದರು. ಈ ಬಾರಿ ಅಧಿಕಾರಿಗಳು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ರೆ ರಾಯ್ ಅವರ ಹಲವು ಭಾಗಗಳಲ್ಲಿಯ ವ್ಯವಹಾರಕ್ಕೆ ಧಕ್ಕೆಯುಂಟು ಆಗುತ್ತಿತ್ತು. ರಾಯ್ ಅವರಿಗಿದ್ದ ಒತ್ತಡಗಳನ್ನು ಸಾಮನ್ಯ ವ್ಯಕ್ತಿಗಳಿಗೆ ಊಹೆಯೂ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದ ಹೇಳುತ್ತಾರೆ.