Bengaluru school haunted ಬೆಂಗಳೂರು ನಗರದ ಕ್ರಿಶ್ಚಿಯನ್ ಶಾಲೆಯೊಂದರಲ್ಲಿ ನಡೆದಿರುವ ಈ ವಿಚಿತ್ರ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಕಥೆ ಕೇಳಿದವರ ಮೈ ಜುಮ್ಮೆನಿಸುವಂತಿದೆ.
ನಿತಿನ್ ಓದುತ್ತಿದ್ದ ಶಾಲೆಯಲ್ಲಿ ಒಂದು ವಿಚಿತ್ರ ನಂಬಿಕೆ ಇತ್ತು. ಶಾಲೆಯ 6ನೇ ಮಹಡಿ ಹಾಂಟೆಡ್ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದರು. ವರ್ಷಗಳ ಹಿಂದೆ 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಅಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ ಎಂಬ ಸುದ್ದಿ ಹರಡಿತ್ತು.
24
ಹಳೆಯ ಫೇರ್‌ವೆಲ್ ನೋಟ್‌ನಲ್ಲಿ ಬಯಲಾದ ರಹಸ್ಯ
ಒಂದು ದಿನ ನಿತಿನ್ ಮತ್ತು ಆತನ ಸ್ನೇಹಿತರು ಉತ್ತರ ಪತ್ರಿಕೆಗಳನ್ನು ಇಡಲು 6ನೇ ಮಹಡಿಗೆ ಹೋಗಿದ್ದರು. ಅಲ್ಲಿ ಅವರಿಗೆ 2012ರಲ್ಲಿ ಬರೆಯಲಾದ ಒಂದು ಫೇರ್‌ವೆಲ್ ನೋಟ್ ಸಿಕ್ಕಿತ್ತು. ಆ ನೋಟ್‌ನಲ್ಲಿ ಗೀತಾ ಎಂಬ ವಿದ್ಯಾರ್ಥಿನಿಯ ಸಾವಿನ ಕುರಿತ ಭಯಾನಕ ವಿವರಗಳಿದ್ದವು. ಗಾಯಗೊಂಡಿದ್ದ ಆಕೆ ವಾಶ್‌ರೂಮ್‌ಗೆ ಹೋಗಿದ್ದಾಗ, ಶಾಲೆ ಮುಚ್ಚುವ ಸಮಯದಲ್ಲಿ ಆಕೆ ಒಳಗೇ ಸಿಲುಕಿಕೊಂಡಿದ್ದಾಳೆ ಎನ್ನಲಾಗಿದೆ. ಮರುದಿನ ಆಕೆ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂಬ ಉಲ್ಲೇಖ ಆ ನೋಟ್‌ನಲ್ಲಿ ಇತ್ತು.
34
ವಾಶ್‌ರೂಮ್‌ನಲ್ಲಿ ನಡೆದ ವಿಚಿತ್ರ ಘಟನೆ
ಈ ಕಥೆಯನ್ನು ಓದಿದ ನಂತರ, ಕುತೂಹಲದಿಂದ ಮೂವರು ವಿದ್ಯಾರ್ಥಿಗಳು ಆ ವಾಶ್‌ರೂಮ್‌ಗೆ ತೆರಳಿದ್ದಾರೆ. ಅಲ್ಲಿ ಅವರಿಗೆ ವಿಚಿತ್ರ ಭಾವನೆ ಕಾಡತೊಡಗಿದೆ. ಈ ವೇಳೆ ಅವರಲ್ಲಿ ಒಬ್ಬನು ಕನ್ನಡಿಯ ಮುಂದೆ ನಿಂತು ಜನಪ್ರಿಯ 'ಬ್ಲಡಿ ಮೇರಿ' ಆಟವನ್ನು ಆಡಲು ಆರಂಭಿಸಿದ್ದಾನೆ. ಅಷ್ಟರಲ್ಲಿ ಟಾಯ್ಲೆಟ್ ಭಾಗದಿಂದ ಜೋರಾದ ಶಬ್ದ ಕೇಳಿಸಿದೆ. ಕೆಲವೇ ಕ್ಷಣಗಳಲ್ಲಿ ಬಾಗಿಲು ಲಾಕ್ ಆಗಿ, ಲೈಟ್‌ಗಳು ಸಂಪೂರ್ಣ ಆಫ್ ಆಗಿವೆ.
ಒಳಗೆ ಸಿಲುಕಿಕೊಂಡ ಮೂವರು ವಿದ್ಯಾರ್ಥಿಗಳು ಭಯದಿಂದ ಕಿರುಚಲು ಆರಂಭಿಸಿದ್ದಾರೆ. ಅಷ್ಟರಲ್ಲಿ ಹೊರಗಿನಿಂದ ನಿತಿನ್ ತಾಯಿಯ ಧ್ವನಿ ಕೇಳಿಸಿದ್ದು, ಬಾಗಿಲು ತೆರೆಯಲಾಗಿದೆ. ಭಯಭೀತರಾಗಿದ್ದ ಮೂವರು ಕೆಳಗೆ ಓಡಿ ಬಂದಿದ್ದಾರೆ.
44
ಆದರೆ ಅಸಲಿ ಶಾಕ್ ಆಗಿದ್ದು ನಂತರ...
ಕೆಳಗೆ ಬಂದ ನಂತರ ನಿತಿನ್ ತನ್ನ ತಾಯಿಯನ್ನು ಕಂಡು, "ಮೇಲೆ ಬಾಗಿಲು ತೆರೆದಿದ್ದು ನೀವೇ ಅಲ್ಲವೇ?" ಎಂದು ಕೇಳಿದ್ದಾನೆ. ಆದರೆ ಅವರ ತಾಯಿ, "ನಾನು ಕಳೆದ ಒಂದು ಗಂಟೆಯಿಂದ ಸ್ಟಾಫ್ ರೂಮ್‌ನಲ್ಲೇ ಇದ್ದೆ. ನಾನು 6ನೇ ಮಹಡಿಗೆ ಹೋಗಲೇ ಇಲ್ಲ" ಎಂದು ಉತ್ತರಿಸಿದ್ದಾರಂತೆ. ಹಾಗಾದರೆ ಬಾಗಿಲು ತೆರೆದವರು ಯಾರು? ಈ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ. ಆ ದಿನ ನಿಜವಾಗಿ ಏನಾಯಿತು? ಅವರನ್ನು ಕಾಪಾಡಿದ್ದು ಯಾರು? ಇದು ಅತೀಂದ್ರಿಯ ಶಕ್ತಿಯೇ ಅಥವಾ ಕೇವಲ ಕಾಕತಾಳೀಯ ಘಟನೆಯೇ?