ಬೆಂಗಳೂರು 1BHK ಬಾಡಿಗೆಗೆ ಬೆಚ್ಚಿಬಿದ್ದ ಟೆಕ್ಕಿ, WFH ಕೊಡಿ ಎಂದಿದಕ್ಕೆ ಕಂಪನಿ ಕೊಡ್ತು ಎರಡೇ ಸಾಲಿನ ಉತ್ತರ

Published : Jul 03, 2026, 03:38 PM IST

ಬೆಂಗಳೂರುದಲ್ಲಿ ಮನೆ ಹುಡುಕಾಟದ ಸಂಕಷ್ಟ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಬೆಂಗಳೂರುದಲ್ಲಿ 1BHK ಮನೆಗೆ ₹1.5 ಲಕ್ಷ ಠೇವಣಿ ಕೇಳಿದ ಹಿನ್ನೆಲೆ WFH ಕೇಳಿದ ಟೆಕ್ಕಿಗೆ ಕಂಪನಿಗೆ ಶಾಕ್‌ ಕೊಟ್ಟಿದೆ.

PREV
14
ಬೆಂಗಳೂರು ರೆಂಟ್‌ ಹೌಸ್

ಬೆಂಗಳೂರುದಲ್ಲಿ ಮನೆ ಹುಡುಕಾಟದ ಸಂಕಷ್ಟ ಮತ್ತೊಮ್ಮೆ ಚರ್ಚೆಗೆ ಬಂದಿದೆ. ನಗರದಲ್ಲಿ ಹೆಚ್ಚುತ್ತಿರುವ ಬಾಡಿಗೆ, ಭಾರೀ ಸೆಕ್ಯುರಿಟಿ ಡೆಪಾಸಿಟ್, ಮನೆ ಮಾಲೀಕರ ಕಠಿಣ ಷರತ್ತುಗಳು ಹಾಗೂ ಸೂಕ್ತ ಮನೆ ಸಿಗದ ಸಮಸ್ಯೆಯಿಂದ ಐಟಿ ಉದ್ಯೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದೇ ನಡುವೆ, ರಿಟರ್ನ್-ಟು-ಆಫೀಸ್ (RTO) ನೀತಿಯ ಬಗ್ಗೆ ಉಂಟಾದ ಭಿನ್ನಾಭಿಪ್ರಾಯದ ಬಳಿಕ ಸಾಫ್ಟ್‌ವೇರ್ ಡೆವಲಪರ್ ಒಬ್ಬರು ಉದ್ಯೋಗ ತೊರೆದಿದ್ದಾರೆ ಎಂಬ ವೈರಲ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ಮನೆ ಹುಡುಕಾಟದ ಸವಾಲುಗಳು ಬೆಂಗಳೂರಿನ ಉದ್ಯೋಗಿಗಳ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿವೆ.

24
1BHK ಮನೆಗೆ ₹1.5 ಲಕ್ಷ ಡೆಪಾಸಿಟ್

ಬೆಂಗಳೂರುದಲ್ಲಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ನಗರದ 1BHK ಮನೆಗೆ ₹1.5 ಲಕ್ಷ ಡೆಪಾಸಿಟ್ ಕೇಳಿರುವ ಅನುಭವವನ್ನು ಹಂಚಿಕೊಂಡಿದ್ದು, ಇದರಿಂದಲೇ ವರ್ಕ್ ಫ್ರಮ್ ಹೋಮ್ (WFH) ಅವಕಾಶ ಕೇಳಿದ ಘಟನೆ ವೈರಲ್ ಆಗಿದೆ. ವರದಿಯ ಪ್ರಕಾರ, ಉದ್ಯೋಗಿಯ ಕಂಪನಿಯು ಅವರನ್ನು ಬೆಂಗಳೂರಿನ ಕಚೇರಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಿತ್ತು. ಆದರೆ ಮನೆ ಹುಡುಕುವ ವೇಳೆ ಎದುರಾದ ಭಾರೀ ಡೆಪಾಸಿಟ್, ಹೆಚ್ಚಿದ ಬಾಡಿಗೆ ಮತ್ತು ಮನೆ ಮಾಲೀಕರ ಕಠಿಣ ಷರತ್ತುಗಳಿಂದ ಬೇಸತ್ತ ಅವರು, ಕಚೇರಿಗೆ ಬರುವ ಬದಲು ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವಂತೆ ಕಂಪನಿಗೆ ಮನವಿ ಮಾಡಿದ್ದರು.

34
ಟೆಕ್ಕಿಗೆ ಕಂಪನಿಗೆ ಶಾಕ್‌

ಆದರೆ ಕಂಪನಿ ಈ ಮನವಿಯನ್ನು ಒಪ್ಪದೇ, "WFH ಸಾಧ್ಯವಿಲ್ಲ, ಕಚೇರಿಗೆ ಸೇರಿ ಅಥವಾ ಜಾಬ್‌ ಬಿಡಿ" ಎಂಬ ಸಂದೇಶ ನೀಡಿದೆಯೆಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಅಂತಿಮವಾಗಿ ಉದ್ಯೋಗಿಯು ರಾಜೀನಾಮೆ ನೀಡಿದರೆಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ಪೋಸ್ಟ್‌ನಲ್ಲಿ ಮತ್ತೊಂದು ವಿಚಾರವೂ ಗಮನ ಸೆಳೆದಿದೆ. ಕೆಲವು ಮನೆ ಮಾಲೀಕರು ಬಾಡಿಗೆದಾರರ LinkedIn ಪ್ರೊಫೈಲ್ ಪರಿಶೀಲಿಸುವುದು, ಉದ್ಯೋಗದ ವಿವರ ಕೇಳುವುದು ಹಾಗೂ ದೊಡ್ಡ ಮೊತ್ತದ ಸೆಕ್ಯುರಿಟಿ ಡೆಪಾಸಿಟ್ ಕಡ್ಡಾಯಗೊಳಿಸುವುದು ಈಗ ಸಾಮಾನ್ಯವಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

44
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಈ ಘಟನೆ ವೈರಲ್ ಆದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಬೆಂಗಳೂರಿನಲ್ಲಿ ಮನೆ ಪಡೆಯುವುದು ಉದ್ಯೋಗ ಪಡೆಯುವುದಕ್ಕಿಂತ ಕಷ್ಟವಾಗಿದೆ ಎಂದು ಅಭಿಪ್ರಾಯಪಟ್ಟರೆ, ಮತ್ತೊಬ್ಬರು ನಗರದಲ್ಲಿ ಬಾಡಿಗೆ ನಿಯಂತ್ರಣ ಹಾಗೂ ವಸತಿ ನೀತಿಗಳ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.ಈ ಘಟನೆಗೆ ಸಂಬಂಧಿಸಿದ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಸ್ಟ್ ಆಧಾರಿತವಾಗಿದ್ದು, ಅದರಲ್ಲಿರುವ ಎಲ್ಲ ವಿವರಗಳನ್ನು ಸ್ವತಂತ್ರವಾಗಿ ದೃಢೀಕರಿಸಲಾಗಿಲ್ಲ.

Read more Photos on
click me!

Recommended Stories