ಯೇ ದೋಸ್ತಿ ಹಮ್ ನಹೀ ತೋಡೆಂಗೆ; ಮತ್ತೆ ಬರುತ್ತಿದೆ ಹಳೇ ಜಮಾನದ ಸೈಡ್‌ಕಾರ್ ಮೋಟರ್‌ಸೈಕಲ್!

First Published | Apr 11, 2020, 3:40 PM IST

ಭಾರತದಲ್ಲಿ ಸುಮಾರು 70, 80 ಹಾಗೂ 90ರ ಶತಕದಲ್ಲಿ ಸೈಡ್‌ಕಾರ್ ಮೋಟರ್‌ಸೈಕಲ್ ಹೆಚ್ಚು ಜನಪ್ರಿಯವಾಗಿತ್ತು. ಬಾಲಿವುಡ್ ಚಿತ್ರವಾದ ಶೋಲೆಯಲ್ಲಿ ಅಮಿತಾಬ್ ಬಚ್ಚನ್ ಹಾಗೂ ಧರ್ಮೆಂದ್ರ ಅವರ ಯೋ ದೋಸ್ತಿ ಹಮ್ ನಹೀ ತೋಡೆಂಗೆ ಹಾಡು ಎಷ್ಟು ಪಾಪ್ಯುಲರ್ ಆಗಿದೆಯೋ ಈ ಹಾಡಿನಲ್ಲಿ ಬಳಸಿರುವ ಸೈಡ್‌ಕಾರ್ ಮೋಟರ್‌ಸೈಕಲ್ ಕೂಡ ಅಷ್ಟೇ ಫೇಮಸ್. ಭಾರತದಲ್ಲಿ ಇದೀಗ ಸೈಡ್‌ಕಾರ್ ಮೋಟರ್‌ಸೈಕಲ್ ಮತ್ತೆ ಬಿಡುಗಡೆಯಾಗುತ್ತಿದೆ. ಉರಲ್ ಕಂಪನಿಯ ಈ ಬೈಕ್ ವಿಶೇಷತೆ, ಬೆಲೆ ಕುರಿತ ಮಾಹಿತಿ ಇಲ್ಲಿದೆ.

ರಷ್ಯಾದ ಉರಲ್ ಕಂಪನಿ ಇದೀಗ ಭಾರತದಲ್ಲಿ ಸೈಡ್‌ಮೋಟರ್‌ಸೈಕಲ್ ಬಿಡುಗಡೆಗೆ ಸಿದ್ದತೆ
ಕೊರೋನಾ ವೈರಸ್ ಸಂಪೂರ್ಣ ಹತೋಟಿಗೆ ಬಂದ ಬಳಿಕ ಭಾರತದಲ್ಲಿ ಮತ್ತೆ ಶುರುವಾಗಲಿದೆ ಹಳೇ ಜಮಾನ
Tap to resize

ರಷ್ಯಾದಲ್ಲಿ ಈಗಲೂ ಸೈಡ್‌ಮೋಟರ್‌ಸೈಕಲ್ ಹೆಚ್ಚು ಜನಪ್ರಿಯವಾಗಿದೆ
ಉರಲ್ ಕಂಪನಿ ಇದೀಗ ನೂತನ ಸೈಡ್‌ಮೋಟರ್‌ಸೈಕಲ್ ರಷ್ಯಾದಲ್ಲಿ ಬಿಡುಗಡೆ ಮಾಡಿದೆ
ಉರಲ್ ಇದೀಗ ಭಾರತದಲ್ಲಿ ಆಟೋಮೊಬೈಲ್ ವ್ಯವಹಾರ ವಿಸ್ತರಿಸಲು ಚಿಂತನೆ
ರಷ್ಯಾದಲ್ಲಿ ಇದರ ಬೆಲೆ $17,549; ಭಾರತೀಯ ರೂಪಾಯಿಗಳಲ್ಲಿ ಈ ಬೈಕ್ ಬೆಲೆ 13.24 ಲಕ್ಷ ರೂಪಾಯಿ
ಭಾರತದಲ್ಲಿ ಈ ಹಿಂದೆ ರಾಯಲ್ ಎನ್‌ಫೀಲ್ಡ್ ಹಾಗೂ ಬಜಾಜ್ ಸೈಡ್‌ಕಾರ್ ಉತ್ಪಾದಿಸಿ ಯಶಸ್ವಿಯಾಗಿತ್ತು
4 ಗೇರ್ ಹೊಂದಿರುವ ಈ ಬೈಕ್‌ ರಿವರ್ಸ್ ಗೇರ್ ಕೂಡ ಹೊಂದಿದೆ
749cc, OHV ಏರ್‌ಕೂಲ್ಡ್, 2 ಸಿಲಿಂಡರ್, 4 ಸ್ಟ್ರೋಕ್ ಎಂಜಿನ್ ಹೊಂದಿದೆ
ರಷ್ಯಾದಲ್ಲಿ 1940ರಲ್ಲಿ ಆರಂಭಗೊಂಡ ಉರಲ್ ಕಂಪನಿ ಈಗಲೂ ಅತ್ಯಂತ ಜನಪ್ರಿಯ ಹಾಗೂ ಯಶಸ್ವಿ ಕಂಪನಿ

Latest Videos

click me!