ಕಿಯಾ ಸೊನೆಟ್ SUV ಬುಕಿಂಗ್: ಮೊದಲ ದಿನವೇ ದಾಖಲೆ ಬರೆದ ಕಾರು!

First Published | Aug 21, 2020, 7:15 PM IST

ಮಾರುತಿ ಬ್ರೆಜಾ ಸೇರಿದಂತೆ ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಕಿಯಾ ಮೋಟಾರ್ಸ್ ಸೊನೆಟ್ ಕಾರು ಅನಾವರಣಗೊಂಡಿದೆ. ಇದೀಗ ಕಾರಿನ ಬುಕಿಂಗ್ ಆರಂಭಿಸಲಾಗಿದ್ದು, ಮೊದಲ ದಿನವೇ ದಾಖಲೆ ಬರೆದಿದೆ. ನೂತನ ಕಿಯಾ ಕಾರಿನ ಬುಕಿಂಗ್ ಬೆಲೆ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

ಕಿಯಾ ಸೊನೆಟ್ ಸಬ್ ಕಾಂಪಾಕ್ಟ್ SUV ಕಾರಿನ ಬುಕಿಂಗ್ ಆರಂಭ, ಮೊದಲ ದಿನವೇ ದಾಖಲೆ ಬರೆದ ಮೇಡ್ ಇನ್ ಇಂಡಿಯಾ ಕಾರು
ಆಗಸ್ಟ್ 20 ರಂದು ಕಿಯಾ ಸೊನೆಟ್ ಕಾರಿನ ಬುಕಿಂಗ್ ಆರಂಭಿಸಿದೆ. ಮೊದಲ ದಿನವೆ ಭಾರತದಲ್ಲಿ 6,523 ಕಾರು ಬುಕ್ ಆಗಿವೆ. ಈ ಮೂಲಕ ಮೊದಲ ದಿನವೇ 5 ಸಾವಿರಕ್ಕಿಂತಲೂ ಹೆಚ್ಚು ಬುಕ್ ಆದ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
Tap to resize

25,000 ರೂಪಾಯಿ ನೀಡಿ ಕಿಯಾ ಸೊನೆಟ್ ಕಾರು ಬುಕ್ ಮಾಡಿಕೊಳ್ಳಬಹುದು. ಕೊರೋನಾ ವೈರಸ್ ಕಾರಣ ಹೆಚ್ಚಿನ ಗ್ರಾಹಕರು ಆನ್‌ಲೈನ್ ಮೂಲಕವೇ ಬುಕಿಂಗ್ ಮಾಡಿಕೊಳ್ಳುತ್ತಿದ್ದಾರೆ.
ಕೊರೋನಾ ವೈರಸ್ ನಡುವೆ ಆಟೋಮೊಬೈಲ್ ಕ್ಷೇತ್ರ ಚೇತರಿಕೆ ಕಾಣುತ್ತಿದೆ. ಗ್ರಾಹಕರ ಸ್ಪಂದನೆಯಿಂದ ನಮ್ಮ ಉತ್ಸಾಹ ಹೆಚ್ಚಾಗಿದೆ ಎಂದು ಕಿಯಾ ಮೋಟಾರ್ಸ್ ಇಂಡಿಯಾ
ಕಿಯಾ ಸೊನೆಟ್ GT ಹಾಗೂ ಟೆಕ್ ಲೈನ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.
ಕಿಯಾ ಸೊನೆಟ್ ಕಾರು 1.2 ಲೀಟರ್ ಪೆಟ್ರೋಲ್, 1.5 ಲೀಟರ್ ಡೀಸೆಲ್ ಹಾಗೂ 1.0 ಲೀಟರ್ ಟರ್ಬೋ ಚಾರ್ಜ್ ಪೆಟ್ರೋಲ್ ಎಂಜಿನ್ ವೇರಿಯೆಂಟ್ ಲಭ್ಯವಿದೆ
6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ 7 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ಕೂಡ ಲಭ್ಯವಿದೆ
2019ರಲ್ಲಿ ಕಿಯಾ ಮೋಟಾರ್ಸ್ ಸೆಲ್ಟೋಸ್ ಕಾರಿನ ಮೂಲಕ ಭಾರತಕ್ಕೆ ಪದಾರ್ಪಣೆ ಮಾಡಿತು. ಸೌತ್ ಕೊರಿಯಾ ಮೂಲಕ ಕಿಯಾ ಇದೀಗ ಭಾರತದಲ್ಲಿ ಬಹುದೊಡ್ಡ ಆಟೋಮೊಬೈಲ್ ಕಂಪನಿಯಾಗಿ ಬೆಳೆಯುತ್ತಿದೆ

Latest Videos

click me!