ದುಬಾರಿ ಪೊರ್ಶೆ 911 ಕ್ಯಾರೆರಾ S ಕಾರು ಖರೀದಿಸಿದ ನಟ ಫಹದ್ ಫಾಸಿಲ್, ನಾಜ್ರಿಯಾ !

First Published | Oct 11, 2020, 3:35 PM IST

ಮಲೆಯಾಳಂ ನಟ ಫಹದ್ ಫಾಸಿಲ್ ಹಾಗೂ ಪತ್ನಿ, ಖ್ಯಾತ ನಟಿ ನಾಜ್ರಿಯಾ ನಜೀಮ್ ಹೊಚ್ಚ ಹೊಸ ಪೊರ್ಶೆ 911 ಕ್ಯಾರೆರಾ S ಸೂಪರ್ ಕಾರು ಖರೀದಿಸಿದ್ದಾರೆ. ದುಬಾರಿ ಹಾಗೂ ಸ್ಪೋರ್ಟ್ಸ್ ಸೂಪರ್ ಕಾರು ಇದಾಗಿದ್ದು, ಬರೋಬ್ಬರಿ 1.84 ಕೋಟಿ ರೂಪಾಯಿ(ಎಕ್ಸ್ ಶೋ ರೂಂ) ಬೆಲೆ ಹೊಂದಿದೆ ಈ ಕಾರಿನ ವಿಶೇಷತೆ ಏನು, ಬಹುತೇಕ ಸೆಲೆಬ್ರೆಟಿಗಳು ಪೊರ್ಶೆ   911 ಕಾರಿನ ಮೊರೆ ಹೋಗುತ್ತಿರುವುದೇಕೆ? ಇಲ್ಲಿದೆ ವಿವರ.

ಕೇರಳದಲ್ಲಿ ಫಹದ್ ಫಾಸಿಲ್ ಹಾಗೂ ಪತ್ನಿ ನಾಜ್ರಿಯಾ ನಜೀಮ್ ಅತ್ಯಂತ ಜನಪ್ರಿಯ ನಟ ನಟಿಯಾರಾಗಿದ್ದಾರೆ. ಇವರ ನಟನಗೆ ಹಲವು ಪ್ರಶಸ್ತಿಗಳು ಸಂದಿವೆ.
ನಟ ಫಹದ್ ಫಾಸಿಲ್ ಹಾಗೂ ಪತ್ನಿ ನಾಜ್ರಿಯಾ ನಜೀಮ್ ಈಗಾಗಲೇ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಇದೀಗ ಹೊಚ್ಚ ಹೊಸ ಪೊರ್ಶೆ 911 ಕ್ಯಾರೆರಾ S ಕಾರು ಖರೀದಿಸಿದ್ದಾರೆ.
Tap to resize

ಹಸಿರು ಬಣ್ಣದ ಪೊರ್ಶೆ 911 ಕ್ಯಾರೆರಾ S ಕಾರನ್ನು ಈ ಜೋಡಿ ಖರೀದಿಸಿದೆ. ಪೈಥಾನ್ ಗ್ರೀನ್ ಕಲರ್ ಈ ಕಾರಿಗೆ 5.4 ಲಕ್ಷ ರೂಪಾಯಿ ಹೆಚ್ಚುವರಿಯಾಗಿ ನೀಡಬೇಕು. ಈ ಮೊತ್ತ ಕೇವಲ ಕಲರ್‌ಗಾಗಿ.
ಪೊರ್ಶೆ 911 ಕ್ಯಾರೆರಾ S ಕಾರನ್ನು ಗ್ರಾಹಕರ ಬೇಡಿಕೆಗೆ ತಕ್ಕಂತೆ ಕಸ್ಟಮೈಸೇಶನ್ ಮಾಡುವ ಅವಕಾಶವಿದೆ. ಇದಕ್ಕಾಗಿ ಹೆಚ್ಚುವರಿ 15 ಲಕ್ಷ ರೂಪಾಯಿ ನೀಡಬೇಕು.
ಪೊರ್ಶೆ 911 ಕ್ಯಾರೆರಾ S ಕಾರು 3.0 ಲೀಟರ್ ಟ್ವಿನ್ ಟರ್ಬೋ, 6 ಸಿಲಿಂಡರ್ ಎಂಜಿನ್ ಹೊಂದಿದ್ದು, 444 bhp ಪವರ್ ಹಾಗೂ 530 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
ಪೊರ್ಶೆ 911 ಕ್ಯಾರೆರಾ S ಕಾರಿನಲ್ಲಿ 8 ಸ್ಪೀಡ್ PDK ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹಾಗೂ 7 ಸ್ಪೀಡ್ ಮಾನ್ಯುಯೆಲ್ ಆಯ್ಕೆ ಕೂಡ ಲಭ್ಯವಿದೆ.
ನಟ ಫಹದ್ ಫಾಸಿಲ್ ಖರೀದಿಸಿದ ಕಾರು 0-100 ಕಿ.ಮೀ ವೇಗ ತಲುಪಲು ಕೇವಲ 3.7 ಸೆಕೆಂಡ್ ತೆಗೆದುಕೊಳ್ಳಲಿದೆ. ಈ ಕಾರಿನ ಗರಿಷ್ಠ ವೇಗ 308 kmph.
ವಿಶ್ವದಲ್ಲಿ ಲಭ್ಯವಿರುವ ಸ್ಪೋರ್ಟ್ಸ್ ಸೂಪರ್ ಕಾರು ಪೈಕಿ ಪೊರ್ಶೆ 911ಗೆ ಅಗ್ರಸ್ಥಾನ. ಹೀಗಾಗಿ ಹೆಚ್ಚಿನ ಸೆಲೆಬ್ರೆಟಿಗಳು ಪೊರ್ಶೆ ಕಾರಿನ ಮೊರೆ ಹೋಗುತ್ತಾರೆ.
ಫಹದ್ ಹಾಗೂ ನಾಜ್ರಿಯ ದಂಪತಿಯಲ್ಲಿ ರೇಂಜ್ ರೋವರ್ ವೋಗ್ಯೂ, ರೇಂಜ್ ರೋವರ್ ಇವೊಕ್ಯು, ಆಡಿ A6, ಮರ್ಸಡೀಸ್ ಬೆಂಝ್ ML63 AMG ಹಾಗೂ ಮರ್ಸಡೀಸ್ ಬೆಂಝ್ E 63 AMG ಕಾರು ಹೊಂದಿದ್ದಾರೆ.

Latest Videos

click me!