ಜೆಲಿಯೋ ಮಿಸ್ಟರಿ ಎಲೆಕ್ಟ್ರಿಕ್ ಸ್ಕೂಟರ್
ಜೆಲಿಯೋ ಇಬೈಕ್ಸ್ ಕಂಪನಿ ಮಿಸ್ಟರಿ ಅಂತ ಹೊಸ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ರಿಲೀಸ್ ಮಾಡೋದಾಗಿ ಹೇಳಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ಗೆ ಮಿಸ್ಟರಿ ಅಂತ ಹೆಸರಿಡಲಾಗಿದೆ. 72V/29AH ಲಿಥಿಯಂ-ಐಯಾನ್ ಬ್ಯಾಟರಿ ಮತ್ತು 72V ಮೋಟಾರ್ ಇದೆ. ಜೀಲಿಯೋ ಇಬೈಕ್ಸ್‌ನ ಈ ಎಲೆಕ್ಟ್ರಿಕ್ ಸ್ಕೂಟರ್ ಒಂದೇ ಚಾರ್ಜ್‌ಗೆ 100 ಕಿ.ಮೀ. ಮೈಲೇಜ್ ಕೊಡುತ್ತೆ. ಅಷ್ಟೇ ಅಲ್ಲದೆ ಗಂಟೆಗೆ 70 ಕಿ.ಮೀ. ವೇಗದಲ್ಲಿ ಹೋಗುತ್ತೆ ಅಂತ ಹೇಳಲಾಗಿದೆ. 4-5 ಗಂಟೆಗಳಲ್ಲಿ ಚಾರ್ಜ್ ಆಗುತ್ತೆ. ಕಡಿಮೆ ಸಮಯದಲ್ಲಿ ಚಾರ್ಜ್ ಮಾಡ್ಕೊಂಡು, ಫಾಸ್ಟ್ ಆಗಿ ಟ್ರಾವೆಲ್ ಮಾಡಬಹುದು. ಈ ಸ್ಕೂಟರ್ 120 ಕೆ.ಜಿ. ತೂಕವಿದ್ದು, 180 ಕೆ.ಜಿ. ತೂಕ ಹೊತ್ತುಕೊಂಡು ಹೋಗಬಹುದು.
ಜೆಲಿಯೋ ಇಬೈಕ್ಸ್
ಒಬ್ಬರು ಅಥವಾ ಇಬ್ಬರು ಕೂತು ಸವಾರಿ ಮಾಡಬಹುದು. ಮುಂದೆ ಮತ್ತು ಹಿಂದೆ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ಇರೋದ್ರಿಂದ ಸ್ಮೂತ್ ಮತ್ತು ಕಂಫರ್ಟೇಬಲ್ ರೈಡ್ ಸಿಗುತ್ತೆ. ಅಡ್ವಾನ್ಸ್ಡ್ ಕಾಂಬಿ-ಬ್ರೇಕ್ ಸಿಸ್ಟಮ್ ಸೇಫ್ಟಿ ಮತ್ತು ಕಂಟ್ರೋಲ್ ಇದೆ. ಇದಲ್ಲದೆ, ಡಿಜಿಟಲ್ ಡಿಸ್‌ಪ್ಲೇ, ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಮತ್ತು ಆಂಟಿ-ಥೆಫ್ಟ್ ಅಲಾರ್ಮ್ ಸಹ ಇದೆ.
ಜೆಲಿಯೋ ಇಬೈಕ್ಸ್ ಮಿಸ್ಟರಿ
ಈ ಸ್ಕೂಟರ್‌ನಲ್ಲಿ ರಿವರ್ಸ್ ಗೇರ್, ಪಾರ್ಕಿಂಗ್ ಸ್ವಿಚ್, ಆಟೋ ರಿಪೇರಿ ಸ್ವಿಚ್, ಯುಎಸ್‌ಬಿ ಚಾರ್ಜಿಂಗ್ ಮತ್ತು ಡಿಜಿಟಲ್ ಡಿಸ್‌ಪ್ಲೇ ಇದೆ. ಜೀಲಿಯೋ ಇಬೈಕ್ಸ್‌ನ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಗುಣಾಲ್ ಆರ್ಯ, 'ಜೆಲಿಯೋದಲ್ಲಿ ಸದಾ ಹೊಸತನ ಮತ್ತು ಸುಸ್ಥಿರತೆಗೆ ಬದ್ಧರಾಗಿದ್ದೇವೆ. ಮಿಸ್ಟರಿ ನಮ್ಮ ಎಲೆಕ್ಟ್ರಿಕ್ ಸ್ಕೂಟರ್ ಸರಣಿಯ ಮುಂದಿನ ಹಂತ. ಇದರ ಕಾರ್ಯಕ್ಷಮತೆ, ವಿಶ್ವಾಸಾರ್ಹತೆ ಮತ್ತು ಪರಿಸರ ಸ್ನೇಹಿ ವಿನ್ಯಾಸದ ಪರಿಪೂರ್ಣ ಸಂಯೋಜನೆಯಾಗಿದ್ದು, ಅದರ ಪ್ರಭಾವಶಾಲಿ ಶ್ರೇಣಿ, ಉತ್ತಮ ನಿರ್ಮಾಣ ಗುಣಮಟ್ಟ ಮತ್ತು ಸುಧಾರಿತ ವೈಶಿಷ್ಟ್ಯಗಳೊಂದಿಗೆ, ಇಂದಿನ ಸವಾರರ ಅಗತ್ಯಗಳನ್ನು ಪೂರೈಸಲು ಮಿಸ್ಟರಿ ವಿನ್ಯಾಸಗೊಳಿಸಲಾಗಿದೆ.
ಗ್ರಾಹಕರ ಕಲ್ಪನೆಯಂತೆ ಸ್ಕೂಟರ್ ಅನ್ನು ವಿನ್ಯಾಸಗೊಳಿಸಿದ್ದು, ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸುತ್ತದೆ. ಕ್ರೇಜಿ, ಎಕ್ಸ್-ಮೆನ್ ಮತ್ತು ಈವ್ ಸರಣಿಯ ಹಿಂದಿನ ಕಡಿಮೆ-ವೇಗದ ಎಲೆಕ್ಟ್ರಿಕ್ ಎರಡು-ಚಕ್ರ ವಾಹನಗಳ ಯಶಸ್ಸಿನ ನಂತರ ಮಿಸ್ಟರಿ ವಿನ್ಯಾಸ ಬಂದಿದೆ ಎಂದು ಕಂಪನಿ ತಿಳಿಸಿದೆ. ಭವಿಷ್ಯದ ಯೋಜನೆಗಳಿಗಾಗಿ, ಕಂಪನಿಯು ಹೈ-ಸ್ಪೀಡ್ ಕಾರ್ಗೋ ಸ್ಕೂಟರ್ ಅನ್ನು ಪರಿಚಯಿಸುತ್ತಿದ್ದು, ಇದು 90 ಕಿಮೀ ಕ್ರಮಿಸಬಲ್ಲದು. 150 ಕೆಜಿ ಲೋಡ್ ಸಾಮರ್ಥ್ಯವಿರಲಿದೆ.
2021ರಲ್ಲಿ ಆರಂಭವಾದ ಜೆಲಿಯೋ ಆಟೋ ಭಾರತೀಯ ಎಲೆಕ್ಟ್ರಿಕ್ ದ್ವಿ-ಚಕ್ರ ವಾಹನ ತಯಾರಕ ಕಂಪನಿಯಾಗಿದ್ದು, ಇದು ಸುಸ್ಥಿರ ವಾಹನಗಳ ತಯಾರಿಕೆಗೆ ಒತ್ತು ನೀಡುತ್ತದೆ. ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಬಲವಾದ ಡೀಲರ್ ನೆಟ್‌ವರ್ಕ್‌ನೊಂದಿಗೆ ಇ-ಸ್ಕೂಟರ್ ಅನ್ನು ಉತ್ಪಾದಿಸುತ್ತದೆ. ದೇಶಾದ್ಯಂತ 256 ಡೀಲರ್‌ಗಳು ಮತ್ತು 200,000ಕ್ಕೂ ಹೆಚ್ಚು ತೃಪ್ತ ಗ್ರಾಹಕರೊಂದಿಗೆ, ಕಂಪನಿಯು ಮಾರ್ಚ್ 2025ರ ವೇಳೆಗೆ ತನ್ನ ಡೀಲರ್‌ಶಿಪ್ ನೆಟ್‌ವರ್ಕ್ ಅನ್ನು 400ಕ್ಕೆ ವಿಸ್ತರಿಸುವ ಗುರಿ ಹೊಂದಿದೆ ಮತ್ತು ಎಲೆಕ್ಟ್ರಿಕ್ ಮೊಬಿಲಿಟಿಯಲ್ಲಿ ಕ್ರಾಂತಿಯನ್ನು ಮಾಡುವ ನಿರೀಕ್ಷೆ, ಎಂದು ಕಂಪನಿ ಹೇಳಿ ಕೊಂಡಿದೆ.