ರಾಯಲ್ ಎನ್‌ಫೀಲ್ಡ್ ಪ್ರಿಯರಿಗೆ ಗುಡ್‌ ನ್ಯೂಸ್‌: ಹಿಮಾಲಯನ್ 450 ಜತೆಗೆ ಮತ್ತೊಂದು ಸ್ಪೆಷಲ್‌ ಎಡಿಷನ್‌ ಬೈಕ್‌ ರಿಲೀಸ್‌

First Published Nov 28, 2023, 11:18 AM IST

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಸೀರಿಸ್‌ನ ಹೊಸ ಬೈಕ್‌ ರಿಲೀಸ್‌ ಮಾಡಿದೆ. ಜತೆಗೆ ಶಾಟ್‌ಗನ್ 650 ಎಂಬ ಸ್ಪೆಷಲ್‌ ಎಡಿಷನ್‌ ಬೈಕ್‌ಗಳನ್ನು ಸಹ ಬಿಡುಗಡೆ ಮಾಡಿದ್ದು, ಇದರ ಬೆಲೆ ವಿವರ ಹೀಗಿದೆ.. 

ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಖರೀದಿಸಲು ಈಗಲೂ ಸಹ ಬೈಕ್‌ ಪ್ರಿಯುರ ಮುಗಿಬೀಳುತ್ತಾರೆ. ಇಂತಹ ಬೈಕ್‌ ಪ್ರಿಯರಿಗೆ ಇಲ್ಲಿದೆ ಗುಡ್‌ ನ್ಯೂಸ್‌.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಸೀರಿಸ್‌ನ ಹೊಸ ಬೈಕ್‌ ರಿಲೀಸ್‌ ಮಾಡಿದೆ. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ನಿಜವಾಗಿಯೂ ದ್ವಿಚಕ್ರ ವಾಹನದ ವಾತಾವರಣದಲ್ಲಿ ಹೆಚ್ಚು ನಿರೀಕ್ಷಿತ ಬಿಡುಗಡೆಗಳಲ್ಲಿ ಒಂದಾಗಿತ್ತು.

ಈ ಅಡ್ವೆಂಚರ್-ಟೂರಿಂಗ್ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಲಾಗಿದೆ. ಹಳೆಯ ಹಿಮಾಲಯನ್ 411 ಅನ್ನು ಹೊಸ ಹಿಮಾಲಯನ್ 450 ಬದಲಾಯಿಸುತ್ತದೆ. ಜೊತೆಗೆ, ಬ್ರ್ಯಾಂಡ್ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಮೋಟೋವರ್ಸ್ ವರ್ಷನ್‌ ಅನ್ನು ಸಹ ರಿಲೀಸ್‌ ಮಾಡಲಾಗಿದೆ. ವಾದಲ್ಲಿ ನಡೆಯುತ್ತಿರುವ ಮೋಟಾರ್‌ಸೈಕಲ್ ಫೆಸ್ಟ್‌ನಲ್ಲಿ ಬಿಡುಗಡೆ ಮಾಡಿದ್ದರೂ, ಇದು ಎಲ್ಲರಿಗೂ ಲಭ್ಯವಿಲ್ಲ.

ಇನ್ನು, ಈ ಎರಡು ನೂತನ ಬೈಕ್‌ಗಳ ಬೆಲೆ ಎಷ್ಟು ನೋಡಿ.. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಮೋಟಾರ್‌ ಸೈಕಲ್‌ನ ಬೆಲೆ 2.69 ಲಕ್ಷ ರೂ. ಆಗಿದ್ದು, ಶಾಟ್‌ಗನ್ 650 ಮೋಟೋವರ್ಸ್ ಆವೃತ್ತಿಯ ಎಕ್ಸ್ ಶೋ ರೂಂ ಬೆಲೆ 4.50 ಲಕ್ಷ ರೂ. ಆಗಿದೆ. ಇನ್ನೊಂದೆಡೆ,. ಹಿಮಾಲಯನ್ 450 ಒಂದೊಂದು ಬಣ್ಣದ ಬೈಕ್‌ನ ಬೆಲೆ ಬದಲಾಗುತ್ತದೆ. ಈ ಬಗ್ಗೆ ವಿವರಕ್ಕಾಗಿ ಮುಂದೆ ಓದಿ..

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಬೈಕ್‌ ಯಾವ್ಯಾವ ಬಣ್ಣಗಳಲ್ಲಿ ಬಿಡುಗಡೆಯಾಗಿದೆ ಹಾಗೂ ಯಾವ್ಯಾವ ಬಣ್ಣಕ್ಕೆ ಎಷ್ಟೆಷ್ಟು ಬೆಲೆ ಅನ್ನೋದನ್ನ ನೋಡಿ.. ಈ ಬೈಕ್‌ 5 ಆಯ್ಕೆಗಳಲ್ಲಿ ಲಭ್ಯವಿದ್ದು, ಅತ್ಯಂತ ಕೈಗೆಟುಕುವ ಬೆಲೆ Kaza Brown ಆಗಿದ್ದು, ಇದರ ಬೆಲೆ 2.69 ಲಕ್ಷ ರೂ. ಆಗಿದೆ.

ಹಾಗೆ, Pass Slate Himalayan Salt ಮತ್ತು Pass Slate Poppy Blue ಬಣ್ಣದ ಬೈಕ್‌ಗಳಿಗೆ 2.74 ಲಕ್ಷ ರೂ. ಬೆಲೆ ಇದೆ. ಇತರ ಎರಡು ಬಣ್ಣಗಳ ಆಯ್ಕೆಗಳೆಂದರೆ Summit Kamet White ಮತ್ತು Summit Hanle Black ಆಗಿದ್ದು, ಇದರ ಬೆಲೆ ಕ್ರಮವಾಗಿ 2.79 ಲಕ್ಷ ರೂ. ಮತ್ತು 2.84 ಲಕ್ಷ ರೂ. ಆಗಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 - ವಿಶೇಷಣ
ಹಿಮಾಲಯನ್ 450 ಹೊಸ ಓವರ್-ಸ್ಕ್ವೇರ್ 452cc ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದ್ದು, ಅದು 40 Hp ಮತ್ತು 40 Nm ಪವರ್‌ ಹೊಂದಿದೆ. ಹಳೆಯ LS 411 ಎಂಜಿನ್‌ಗೆ ಹೋಲಿಸಿದರೆ ಹೊಸ ಮೋಟಾರ್ 10 ಕೆಜಿ ಹಗುರವಾಗಿದೆ. ಇದು ಮುಂಭಾಗದಲ್ಲಿ 43 mm USD ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಮಾನೋಶಾಕ್‌ ಅನ್ನು ಹೊಂದಿದೆ. ಆಸನದ ಎತ್ತರವು 825 ಮಿಮೀ ಇರುತ್ತದೆ.

ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650
ಶಾಟ್‌ಗನ್ 650 ಕಳೆದ ವರ್ಷ EICMA ನಲ್ಲಿ ರಾಯಲ್ ಎನ್‌ಫೀಲ್ಡ್ ಅನಾವರಣಗೊಳಿಸಿದ SG650 ಪರಿಕಲ್ಪನೆಯನ್ನು ಆಧರಿಸಿದೆ. 4.50 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆಯಾಗಿದೆ. ಆದರೆ ಪ್ರತಿಯೊಬ್ಬರೂ ಅದನ್ನು ಖರೀದಿಸಲು ಸಾಧ್ಯವಿಲ್ಲ. 25 ಬೈಕ್‌ಗಳನ್ನು ಮಾತ್ರ  ಬಿಡುಗಡೆ ಮಾಡಲಾಗಿದ್ದು, ಗೋವಾದಲ್ಲಿ ನಡೆಯುತ್ತಿರುವ ರಾಯಲ್‌ ಎನ್‌ಫೀಲ್ಡ್‌ ಮೋಟೋವರ್ಸ್ ಈವೆಂಟ್‌ನಲ್ಲಿ ಭಾಗವಹಿಸುವ 25 ಅದೃಷ್ಟಶಾಲಿಗಳಿಗೆ ಇದನ್ನು ಮಾರಾಟ ಮಾಡಲಾಗುತ್ತದೆ. 

click me!