Mole Astrology: ಮಹಿಳೆಯರಿಗೆ ಸೊಂಟದ ಮೇಲೆ, ಮೂಗಿನ ತುದಿಯಲ್ಲಿ ಮಚ್ಚೆ ಇದ್ರೆ ಏನರ್ಥ?

Published : Feb 03, 2026, 01:19 PM IST

ದೇಹದ ಮೇಲೆ ಮಚ್ಚೆಗಳಿರುವುದು ಸಾಮಾನ್ಯ. ಆದರೆ, ಅವು ಇರುವ ಜಾಗ ನಮ್ಮ ಹಣೆಬರಹವನ್ನೇ ಬದಲಾಯಿಸುತ್ತೆ ಗೊತ್ತಾ? ಹಾಗಿದ್ರೆ, ಮಹಿಳೆಯರ ಸೊಂಟದ ಮೇಲೆ ಮಚ್ಚೆ ಇದ್ದರೆ ಏನೆಲ್ಲಾ ಫಲಗಳು ಸಿಗುತ್ತವೆ ಅಂತ ನೋಡೋಣ ಬನ್ನಿ.

PREV
16
ಸಾಮುದ್ರಿಕ ಶಾಸ್ತ್ರದಲ್ಲಿ ಮಚ್ಚೆಯ ಬಗ್ಗೆ ಸಂಪೂರ್ಣ ಮಾಹಿತಿ
ಸಾಮುದ್ರಿಕ ಶಾಸ್ತ್ರದ ಪ್ರಕಾರ, ಸೊಂಟದ ಮೇಲೆ ಮಚ್ಚೆ ಇರುವ ಮಹಿಳೆಯರು ತುಂಬಾ ಅದೃಷ್ಟವಂತರು. ಇವರು ಜೀವನದಲ್ಲಿ ಐಷಾರಾಮಿ ಸೌಲಭ್ಯಗಳನ್ನು ಪಡೆಯುತ್ತಾರೆ. ಮದುವೆಯ ನಂತರ ಇವರ ಆರ್ಥಿಕ ಸ್ಥಿತಿ ಇನ್ನಷ್ಟು ಸುಧಾರಿಸುತ್ತದೆ. ಇವರು ತುಂಬಾ ಬುದ್ಧಿವಂತರಾಗಿದ್ದು, ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇವರಿಗಿರುತ್ತದೆ. ಶಿಕ್ಷಣ ಅಥವಾ ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೇರುತ್ತಾರೆ.
26
ಸೊಂಟದ ಮೇಲೆ ಮಚ್ಚೆಯಿರುವವರು ಸೌಮ್ಯ ಸ್ವಭಾವದವರು

ಸೊಂಟದ ಮೇಲೆ ಮಚ್ಚೆ ಇರುವ ಮಹಿಳೆಯರು ಸೌಮ್ಯ ಸ್ವಭಾವದವರು. ಎಲ್ಲರೊಂದಿಗೆ ಬೆರೆಯುವ ಇವರು, ಇತರರ ಬಗ್ಗೆ ದಯೆ ಮತ್ತು ಕರುಣೆ ಹೊಂದಿರುತ್ತಾರೆ. ಇವರು ಸ್ವಾತಂತ್ರ್ಯ ಪ್ರಿಯರಾಗಿದ್ದು, ತಮ್ಮದೇ ಆದ ಗುರುತನ್ನು ಹೊಂದಲು ಬಯಸುತ್ತಾರೆ. 

36
ಒಳ್ಳೆಯ ಪತಿ ಸಿಗುತ್ತಾರೆ

ಇವರ ವೈವಾಹಿಕ ಜೀವನ ತುಂಬಾ ಚೆನ್ನಾಗಿರುತ್ತದೆ. ಉತ್ತಮ ಪತಿ ಇವರಿಗೆ ಸಿಗುತ್ತಾರೆ. ಮದುವೆಯ ನಂತರ ಇವರ ಜೀವನ ಸಂತೋಷದಿಂದ ಕೂಡಿರುತ್ತದೆ. ಕುಟುಂಬದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ.

46
ಮಚ್ಚೆ ಸೊಂಟದ ಬಲ ಭಾಗದಲ್ಲಿದ್ದರೇ?

ಮಚ್ಚೆಯು ಸೊಂಟದ ಬಲಭಾಗದಲ್ಲಿದ್ದರೆ, ಅದು ಸಂಪತ್ತಿನ ಸಂಕೇತ. ಇವರು ಹಣವನ್ನು ಚೆನ್ನಾಗಿ ಉಳಿತಾಯ ಮಾಡುತ್ತಾರೆ. ಎಡಭಾಗದಲ್ಲಿದ್ದರೆ, ಅದು ಕೀರ್ತಿಯ ಸಂಕೇತ. ಸಮಾಜದಲ್ಲಿ ಉತ್ತಮ ಗೌರವ ಸಿಗುತ್ತದೆ. 

56
ಮೂಗಿನ ತುದಿಯಲ್ಲಿ ಮಚ್ಚೆಯಿದ್ದರೇ?

ಮೂಗಿನ ಮೇಲೆ ಮಚ್ಚೆ ಇದ್ದರೆ ಸ್ವಲ್ಪ ಹಠಮಾರಿ ಸ್ವಭಾವದವರಾಗಿರುತ್ತಾರೆ. ಆದರೆ ಆರ್ಥಿಕವಾಗಿ ರಾಜಯೋಗವನ್ನು ಪಡೆಯುತ್ತಾರೆ. ಮೂಗಿನ ತುದಿಯಲ್ಲಿ ಮಚ್ಚೆ ಇರುವ ಮಹಿಳೆಯರು ಸಣ್ಣ ಪ್ರಯತ್ನದಿಂದಲೇ ದೊಡ್ಡ ಯಶಸ್ಸನ್ನು ಸಾಧಿಸುತ್ತಾರೆ. ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಇವರಿಗೆ ಬೇಕೆಂದಾಗ ಕೈಗೆ ಹಣ ಬರುತ್ತದೆ.

66
ಇನ್ನು ವೈದ್ಯಕೀಯವಾಗಿ ಹೇಳಬೇಕೆಂದರೆ

ಮಚ್ಚೆಯ ಬಣ್ಣ, ಆಕಾರ ಅಥವಾ ಗಾತ್ರದಲ್ಲಿ ಹಠಾತ್ ಬದಲಾವಣೆಯಾದರೆ ಎಚ್ಚರದಿಂದಿರಿ. ಮಚ್ಚೆಯ ಅಂಚುಗಳು ಸರಿಯಾಗಿಲ್ಲದಿದ್ದರೆ, ತುರಿಕೆ ಅಥವಾ ರಕ್ತಸ್ರಾವವಾದರೆ, ಅಥವಾ ಬಣ್ಣ ಬದಲಾದರೆ ತಕ್ಷಣ ಚರ್ಮರೋಗ ತಜ್ಞರನ್ನು ಸಂಪರ್ಕಿಸುವುದು ಉತ್ತಮ.

Read more Photos on
click me!

Recommended Stories