ಡಿ.12ಕ್ಕೆ ಭಾರತೀಯ ಮಾರುಕಟ್ಟೆಗೆ OnePlus X27 ಮತ್ತು E24 ಮಾನಿಟರ್ ಲಾಂಚ್!

By Suvarna NewsFirst Published Dec 5, 2022, 1:02 PM IST
Highlights

*ಸ್ಮಾರ್ಟ್‌ಫೋನ್ ಉತ್ಪಾದನೆ ಮೂಲಕ ಹೆಸರುವಾಸಿಯಾಗಿರುವ ಒನ್ ಪ್ಲಸ್ ಕಂಪನಿ
*ಸ್ಮಾರ್ಟ್‌ಫೋನ್, ಟಿವಿ ಬಳಿಕ ಈಗ ಮಾನಿಟರ್ ಉತ್ಪಾದನೆ ಮಾಡಲಿದೆ ಚೀನಿ ಕಂಪನಿ
*ಭಾರತೀಯ ಮಾರುಕಟ್ಟೆಗೆ ಮಾನಿಟರ್ ಪರಿಚಯಿಸಲು ಮುಂದಾದ ಕಂಪನಿ

ಸ್ಮಾರ್ಟ್‌‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಗಟ್ಟಿ ನೆಲೆಯನ್ನು ಕಂಡುಕೊಂಡಿರುವ ಚೀನಾ ಮೂಲದ ಒನ್‌ಪ್ಲಸ್ (OnePlus) ಕಂಪನಿಯು, ಈಗ ಮಾನಿಟರ್ ಉತ್ಪಾದನೆಗೂ ಕಾಲಿಟ್ಟಿದೆ. ಈ ಮೂಲಕ ತನ್ನ ಉತ್ಪಾದನ ವಲಯವನ್ನು ಮತ್ತೊಂದು ಹಂತಕ್ಕೆ ವಿಸ್ತರಿಸಿಕೊಂಡಿದೆ ಎಂದು ಹೇಳಬಹುದು. ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರೀಮಿಯಂ ಫೋನುಗಳ ಮೂಲಕ ಒನ್‌ಪ್ಲಸ್ ಕಂಪನಿಯು ತನ್ನದೇ ಗ್ರಾಹಕ ಬಳಗವನ್ನು ಹೊಂದಿದೆ. ಒನ್ ಪ್ಲಸ್ ಕಂಪನಿಯು ಡಿಸೆಂಬರ್ 12ರಂದು  ಮಾನಿಟರ್ ಎಕ್ಸ್ 27 (Monitor X27) ಮತ್ತು ಮಾನಿಟರ್ ಇ 24 (Monitor E24) ಎಂಬ ಎರಡು ಮಾನಿಟರ್‌ಗಳು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಕಂಪನಿಯು ಹೇಳಿಕೊಂಡಿದೆ. ಒನ್ ಪ್ಲಸ್ ಕಂಪನಿಯು ತನ್ನ ಸೋಷಿಯಲ್ ಮೀಡಿಯಾ ಚಾನೆಲ್‌ಗಳ ಮೂಲಕ ಈ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಗ್ಗೆ ಮಾಹಿತಿಯನ್ನು ನೀಡಿತ್ತು. ಈ ಬಾರಿ ಒನ್ ಪ್ಲಸ್ ಕಂಪನಿುಯ ಬಿಡುಗಡೆಯನ್ನು ಘೋಷಿಸುವ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.

ಕಂಪನಿಯ ಪ್ರಕಾರ, ಹೊಸ OnePlus ಮಾನಿಟರ್ಗಳು ಜನರಿಗೆ ಸಂಬಂಧಿಸಿದ ಪರಿಸರ ವ್ಯವಸ್ಥೆಯ ಅನುಭವವನ್ನು ನೀಡುವ ಗುರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಕಂಪನಿಯು ಎರಡು ಮಾನಿಟರ್ಗಳನ್ನು  ಎರಡು ವಿಭಿನ್ನ ಬೆಲೆ ಶ್ರೇಣಿಗಳಲ್ಲಿ ಪರಿಚಯಿಸುತ್ತಿದೆ. OnePlus ಮಾನಿಟರ್ X 27 27-ಇಂಚಿನ ಪರದೆಯ ಗಾತ್ರದಲ್ಲಿ ಲಭ್ಯವಿದೆ ಮತ್ತು ಇದು ಹೆಚ್ಚು ಪ್ರೀಮಿಯಂ ಕೊಡುಗೆಯಾಗಿದೆ. "ಉತ್ತಮ ಪ್ರದರ್ಶನ ಮತ್ತು ಕಾರ್ಯಕ್ಷಮತೆ, ಇದು ಗೇಮಿಂಗ್ ಸೆಷನ್‌ಗಳು, ಕೆಲಸದ ಯೋಜನೆಗಳು ಅಥವಾ ಆನ್‌ಲೈನ್ ಅಧ್ಯಯನಕ್ಕೆ ಸೂಕ್ತವಾದ ಆಯ್ಕೆಯಾಗಿದೆ."  

ಮಧ್ಯಮ ಶ್ರೇಣಿಯ ಮಾದರಿ, OnePlus ಮಾನಿಟರ್ E 24, ಅತ್ಯಂತ ಸಮಂಜಸವಾದ ಬೆಲೆಯಲ್ಲಿ ಹಲವಾರು ಅದ್ಭುತ ವೈಶಿಷ್ಟ್ಯಗಳನ್ನು ನೀಡುತ್ತದೆ. ದಿನನಿತ್ಯದ ದೈನಂದಿನ ಕೆಲಸ ಮತ್ತು ವಿರಳ ವಿನೋದಕ್ಕಾಗಿ ಈ ಮಾನಿಟರ್ ಅನ್ನು ವಿನ್ಯಾಸಗೊಳಿಸಲಾಗಿದೆ.OnePlus ಮಾನಿಟರ್ E 24 24-ಇಂಚಿನ ಪರದೆಯ ಗಾತ್ರದಲ್ಲಿ ಲಭ್ಯವಿದೆ.

WhatsApp ವೆಬ್ ಬಳಕೆದಾರರಿಗಾಗಿ ಸ್ಕ್ರೀನ್ ಲಾಕ್ ಫೀಚರ್

ಸ್ಮಾರ್ಟ್ ಫೋನ್ ಉತ್ಪಾದನೆಯ ಮೂಲಕ ಒನ್ ಪ್ಲಸ್ ಹೆಸರುವಾಸಿಯಾಗುತ್ತಿದ್ದಂತೆ ಕಂಪನಿಯು 2019ರಲ್ಲಿ ಸ್ಮಾರ್ಟ್‌ ಟಿವಿ ಮಾರುಕಟ್ಟೆಗೆ ಲಗ್ಗೆ ಹಾಕಿತು. ಆ ಮೂಲಕ ಟಿವಿ ಉತ್ಪಾದನೆಯನ್ನು ಆರಂಭಿಸಿತು. ಕೌಂಟರ್ಪಾಯಿಂಟ್ ರಿಸರ್ಚ್ ಸಂಶೋಧನೆಯ ಪ್ರಕಾರ, ಈ ಬ್ರ್ಯಾಂಡ್ ತನ್ನ ಭಾರತೀಯ ಸಮುದಾಯ ಮತ್ತು ಗ್ರಾಹಕರಿಂದ ಅನುಕೂಲಕರ ಪ್ರತಿಕ್ರಿಯೆಯನ್ನು ಪಡೆದ ನಂತರ ಮತ್ತು ವರ್ಷದ ಮೊದಲಾರ್ಧದಲ್ಲಿ 123% ಬೆಳವಣಿಗೆಯನ್ನು ದಾಖಲಿಸಿದೆ. 2022ರ ಎರಡನೇ ತ್ರೈಮಾಸಿಕದಲ್ಲಿ ಭಾರತದ ಪ್ರಮುಖ ಮೂರು ಸ್ಮಾರ್ಟ್ ಟಿವಿ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಸ್ಮಾರ್ಟ್ ಫೋನ್ ಮತ್ತು ಟಿವಿ ಜತೆಗೆ ಕಂಪನಿಯು ಈ ಮಾನಿಟರ್‌ಗಳ ಉತ್ಪಾದನೆಗೆ ಮುಂದಾಗಿರುವುದು ಬಳಕೆದಾರರಿಗೆ ಹೊಸ ಆಯ್ಕೆಯನ್ನು ನೀಡಿದಂತಾಗಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಇದರೊಂದಿಗೆ ಮಾನಿಟರ್ ಮಾರುಕಟ್ಟೆಯಲ್ಲಿ ಮತ್ತೊಂದು ಪ್ರತಿಸ್ಪರ್ಧಿ ಹುಟ್ಟಿಕೊಂಡಂತಾಗಿದೆ.

ಸೋನಿ LinkBuds S ವೈರ್‌ಲೆಸ್ ಇಯರ್‌ಬಡ್‌ ಏಕೆ ಖರೀದಿಸಬೇಕು? ಇಲ್ಲಿವೆ 5 ಕಾರಣಗಳು

 OnePlus ನ ಸಂಸ್ಥಾಪಕ ಪೀಟ್ ಲಾವ್ (Pete Lau), " ಪ್ರಾರಂಭದಿಂದಲೂ ನಮ್ಮ ಸಾಧನಗಳ ತೊಂದರೆ-ಮುಕ್ತ ಬಳಕೆದಾರ ಅನುಭವ ಮತ್ತು ತ್ವರಿತ ಮತ್ತು ತಡೆರಹಿತ ಕಾರ್ಯಕ್ಷಮತೆಯಿಂದಾಗಿ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿವೆ. ಇದರಿಂದಾಗಿ ನಾವು ಭಾರತದಲ್ಲಿ ಹೆಚ್ಚು ಇಷ್ಟಪಡುವ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾಗಿ ಬೆಳೆದಿದ್ದೇವೆ. OnePlus ಉತ್ಪನ್ನದ ಸಾಲಿಗೆ ಹೊಚ್ಚಹೊಸ ಸೇರ್ಪಡೆಯಾದ OnePlus ಮಾನಿಟರ್ಗಳನ್ನು ಪರಿಚಯಿಸಲು ನಾವು ಈಗ ಹೆಮ್ಮೆಪಡುತ್ತೇವೆ. ಇದು ನಮ್ಮ ಸಮುದಾಯಕ್ಕೆ ವಿಶಿಷ್ಟವಾದ OnePlus ಅನುಭವವನ್ನು ನೀಡುತ್ತದೆ ಎಂದು ನಮಗೆ ಖಚಿತವಾಗಿದೆ" ಎಂದು ಅವರು ಮಾನಿಟರ್ ಬಿಡುಗಡೆ ಸಂಬಂಧ ಹೊರಡಿಸಲಾದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!