Dizo Wireless Power: ಸಂಗೀತ ಪ್ರಿಯರು, ಗೇಮರ್ಸ್‌ಗಾಗಿ ಹೊಸ ನೆಕ್‌ಬ್ಯಾಂಡ್‌: ₹999 ಪರಿಚಯಾತ್ಮಕ ಬೆಲೆ!

By Manjunath Nayak  |  First Published Feb 21, 2022, 3:59 PM IST

ಡಿಝೋ ಭಾರತದಲ್ಲಿ ಹೊಸ ನೆಕ್‌ಬ್ಯಾಂಡನ್ನು ಪ್ರಾರಂಭಿಸಿದ್ದು ಇದು ನಿಮ್ಮ ಸಂಗೀತದ ಅನುಭವವನ್ನು ಹೆಚ್ಚಿಸಲು ಗೇನ್ ಮೋಡ್ ಮತ್ತು ಬಾಸ್ ಬೂಸ್ಟ್ + ಅಲ್ಗಾರಿದಮ್‌ನಂತಹ ಕೆಲವು ಆಸಕ್ತಿದಾಯಕ ವೈಶಿಷ್ಟ್ಯಗಳನ್ನು ಹೊಂದಿವೆ. 


Tech Desk: ಡಿಝೋ ಭಾರತದಲ್ಲಿ ತನ್ನ ಹೊಸ ನೆಕ್‌ಬ್ಯಾಂಡ್ ಇಯರ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಡಿಝೋ ವೈರ್‌ಲೆಸ್ ಪವರ್ ಎಂದು ಕರೆಯಲ್ಪಡುವ ನೆಕ್‌ಬ್ಯಾಂಡ್ ಸಾಮನ್ಯ ವಿನ್ಯಾಸವನ್ನು ಹೊಂದಿದ್ದರೂ ಅದನ್ನು ಆಕರ್ಷಕವಾಗಿ ಮಾಡುವುದಲ್ಲದೆ ವೈರ್‌ಲೆಸ್ ಇಯರ್‌ಫೋನ್‌ಗಳ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿದೆ. ಡಿಝೋ ವೈರ್‌ಲೆಸ್ ಪವರ್ ಕುತ್ತಿಗೆಯ ಸುತ್ತ ನೇತಾಡುವ ಭಾಗಗಳಲ್ಲಿ ಜೇನುಗೂಡಿನ ವಿನ್ಯಾಸವನ್ನು ಬಳಸುತ್ತದೆ. ಮತ್ತು ವಿಶೇಷಣಗಳು ನೋಡುವುದಾದರೆ, ಡಿಜೊ ವೈರ್‌ಲೆಸ್ ಪವರ್ ಬಾಸ್-ಕೇಂದ್ರಿತ ಆಡಿಯೊ ಡ್ರೈವರ್‌ಗಳು, ಬ್ಲೂಟೂತ್ ಫಾಸ್ಟ್ ಪೇರ್ ತಂತ್ರಜ್ಞಾನಕ್ಕೆ ಬೆಂಬಲ ಮತ್ತು ದೀರ್ಘಕಾಲೀನ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ.

“ಹೆಸರೇ ಸೂಚಿಸುವಂತೆ, ಬಳಕೆದಾರರಿಗೆ ಉತ್ತಮ ಆಡಿಯೊ ಅನುಭವದ ಶಕ್ತಿಯನ್ನು ನೀಡಲು ಇದನ್ನು ವಿನ್ಯಾಸಗೊಳಿಸಲಾಗಿದೆ. 11.2 ಎಂಎಂ ಲಾರ್ಜ್ ಡ್ರೈವರ್, ಬಾಸ್ ಬೂಸ್ಟ್ + ಅಲ್ಗಾರಿದಮ್, ಗೇಮ್ ಮೋಡ್ ಮತ್ತು ರಿಯಲ್‌ಮಿ ಲಿಂಕ್ ಅಪ್ಲಿಕೇಶನ್‌ನಂತಹ ಉತ್ತಮ ಬೆಲೆಯಲ್ಲಿ ಫೀಚರ್‌ಗಳು ಜನಸಾಮಾನ್ಯರಲ್ಲಿ ತಂತ್ರಜ್ಞಾನವನ್ನು ಜನಪ್ರಿಯಗೊಳಿಸುವತ್ತ ನಮ್ಮ ಹೆಜ್ಜೆಯಾಗಿದೆ ”ಎಂದು ಡಿಜೊ ಇಂಡಿಯಾದ ಸಿಇಒ ಅಭಿಲಾಷ್ ಪಾಂಡಾ ಹೇಳಿದ್ದಾರೆ.

Tap to resize

Latest Videos

ಭಾರತದಲ್ಲಿ ಡಿಝೋ ವೈರ್‌ಲೆಸ್ ಪವರ್ ಬೆಲೆ ಮತ್ತು ಲಭ್ಯತೆ: ಡಿಝೋ ವೈರ್‌ಲೆಸ್ ಪವರ್ ರೂ 1,399 ಬೆಲೆಯಲ್ಲಿ ಬಿಡುಗಡೆಯಾಗಿದ್ದು ಪರಿಚಯಾತ್ಮಕ ಕೊಡುಗೆಯಾಗಿ ರಿಯಾಯಿತಿ ದರದಲ್ಲಿ ಲಭ್ಯವಿದೆ. ಡಿಜೊ ನೆಕ್‌ಬ್ಯಾಂಡ್‌  ಕೇವಲ 999 ರೂ ಪರಿಚಯಾತ್ಮಕ ಬೆಲೆಯಲ್ಲಿ ಲಭ್ಯವಿದೆ. 

ಇದನ್ನೂ ಓದಿ: Realme TechLife: Dizo Buds Z Pro ವೈಯರ್‌ಲೆಸ್ ಇಯರ್‌ಫೋನ್, Dizo Watch R ಸ್ಮಾರ್ಟ್‌ವಾಚ್ ಬಿಡುಗಡೆ!

ಪ್ರಸ್ತುತ ಪರಿಚಯಾತ್ಮಕ ಬೆಲೆ ಯಾವಾಗ ಮುಕ್ತಾಯವಾಗಲಿದೆ ಎಂಬುದರ ಕುರಿತು ಕಂಪನಿ ಯಾವುದೇ ಮಾಹಿತಿ ನೀಡಿಲ್ಲ. ಡಿಜೊ ವೈರ್‌ಲೆಸ್ ಪವರ್ ವೈಲೆಟ್ ಬ್ಲೂ, ಹಂಟರ್ ಗ್ರೀನ್ ಮತ್ತು ಕ್ಲಾಸಿಕ್‌ ಬ್ಲ್ಯಾಕ್ ಬಣ್ಣಗಳಲ್ಲಿ ಬರುತ್ತದೆ. . ನೆಕ್‌ಬ್ಯಾಂಡ್ ಫ್ಲಿಪ್‌ಕಾರ್ಟ್‌ ಮತ್ತು ಆಯ್ದ ರಿಟೇಲ್ ಅಂಗಡಿಗಳಲ್ಲಿ ಲಭ್ಯವಿರುತ್ತದೆ.‌

ಡಿಝೋ ವೈರ್‌ಲೆಸ್ ಪವರ್ ವಿಶೇಷಣಗಳು: ಡಿಝೋ ವೈರ್‌ಲೆಸ್ ಪವರ್ ಕೆಲವು ಉತ್ತಮ ಫೀಚರ್‌ಗಳೊಂದಿಗೆ ಗುಣಮಟ್ಟದ ನೆಕ್‌ಬ್ಯಾಂಡ್ ವಿನ್ಯಾಸವದೊಂದಿಗೆ ಬಿಡುಗಡೆಯಾಗಿದೆ. ಅದರ ಸುತ್ತಲೂ ಇರುವ ಜೇನುಗೂಡಿನ ಮಾದರಿಗಳು ಅದನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ, ಆದರೆ ಇಯರ್‌ಬಡ್‌ಗಳ ಒಳಗಿನ ವಿನ್ಯಾಸವು ಆರಾಮದಾಯಕವಾದ ಫಿಟ್‌ ಆಗುವಂತೆ ವಿನ್ಯಾಸ ಮಾಡಲಾಗಿದೆ.

ವೈರ್‌ಲೆಸ್ ಪವರ್ 11.2mm ದೊಡ್ಡ ಡ್ರೈವರ್‌ ಹೊಂದಿದ್ದು, ಇದು ಜೋರಾಗಿ ಸಂಗೀತಕ್ಕೆ ಸಾಕಷ್ಟು ಉತ್ತಮವಾಗಿದೆ. EDM ಮತ್ತು ಸಂಗೀತವನ್ನು ಕೇಳಲು ಇಷ್ಟಪಡುವ ಜನರಿಗೆ, ಸಂಗೀತದಲ್ಲಿ ಬಾಸನ್ನು ಹೆಚ್ಚಿಸಲು Dizo Bass Boost+ ಅಲ್ಗಾರಿದಮನ್ನು ನೀಡುತ್ತದೆ. Realme Link ಅಪ್ಲಿಕೇಶನನ್ನು ಬಳಸಿಕೊಂಡು ಬಳಕೆದಾರರು ಅದನ್ನು ಟಾಗಲ್ ಮಾಡಬಹುದು.

ಇದನ್ನೂ ಓದಿ: boAt Nirvana 751 ಹೆಡ್‌ಫೋನ್‌ ಆ್ಯಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಷನ್‌ ನೊಂದಿಗೆ ಭಾರತದಲ್ಲಿ ಬಿಡುಗಡೆ: ಬೆಲೆ ಎಷ್ಟು?

ಆಟಗಳನ್ನು ಆಡುವಾಗ "ತಡೆರಹಿತ ಅನುಭವ" ನೀಡಲು 88ms ವರೆಗೆ ಲೇಟೆನ್ಸಿ ತರುವುದರಿಂದ ಗೇಮರುಗಳಿಗಾಗಿ ಗೇಮ್ ಮೋಡ್‌ನ ಆಯ್ಕೆಯು ಉಪಯುಕ್ತವಾಗಿದೆ.  ಆಂಡ್ಯಾಯ್ಡ್ ಫೋನ್‌ಗಳು ಮತ್ತು ಐಫೋನ್‌ಗಳು ಸೇರಿದಂತೆ ಯಾವುದೇ ಸಾಧನದೊಂದಿಗೆ ಸಂಪರ್ಕಕ್ಕಾಗಿ Dizo Wireless Power Bluetooth 5.2  ಬಳಸುತ್ತದೆ.

Android ಮತ್ತು iOS ಎರಡರಲ್ಲೂ ಲಭ್ಯವಿರುವ Realme Link ಅಪ್ಲಿಕೇಶನನ್ನು ಬಳಸಿಕೊಂಡು ನೆಕ್‌ಬ್ಯಾಂಡ್‌ನಲ್ಲಿರುವ ಬಟನ್‌ಗಳು ಮತ್ತು ಇತರ ವೈಶಿಷ್ಟ್ಯಗಳನ್ನು ನೀವು ಕಸ್ಟಮೈಸ್ ಮಾಡಬಹುದು. ನೆಕ್‌ಬ್ಯಾಂಡ್‌ನೊಳಗೆ 150mAh ಬ್ಯಾಟರಿ ಇದೆ ಮತ್ತು ಡಿಝೋ ಒಂದು ಚಾರ್ಜ್‌ನಲ್ಲಿ 18 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಸಂಗೀತವನ್ನು ಕೇಳಲು ಸಮಯ ಕಳೆಯಲು ಇಷ್ಟಪಡುವ ಅಥವಾ ಜೂಮ್ ಕರೆಗಳಲ್ಲಿ ಹೆಚ್ಚಾಗಿ ಇರುವ ಜನರಿಗೆ ಇದು ಸಾಕಷ್ಟು ಉಪಯುಕ್ತವಾಗಲಿದೆ.

click me!