ಬೆಂಗಳೂರು(ನ.05) : ದೀಪಾವಳಿ ಹಬ್ಬದ ಪ್ರಯುಕ್ತ ಒಟಿಟಿ ಚಾನಲ್ ಮೇಲೆ ಬಾರೀ ರಿಯಾಯಿತಿಯನ್ನು TCL ಸಂಸ್ಥೆಯು ಘೋಷಿಸಿದೆ. ಗ್ರಾಹಕರಿಗೆ ಒಳ್ಳೆಯ ಸೇವೆಯನ್ನು ಒದಗಿಸುವ ಉದ್ದೇಶದಿಂದ ಸಂಸ್ಥೆಯು ಸ್ಥಳೀಯ ಒಟಿಟಿ ವೇದಿಕೆ ಜತೆಗೆ ಒಪ್ಪಂದವನ್ನು ಸಹ ಮಾಡಿಕೊಂಡಿದೆ. ಈ ವಿಶೇಷ ಆಫರ್ ಜತೆಗೆ ಸಂಸ್ಥೆಯು ಟಿಸಿಎಲ್ 2ಕೆ ಮತ್ತು 4ಕೆ ಯುಎಚ್‌ಡಿ ಆಂಡ್ರಾಯ್ಡ್ ಟಿವಿ ಮೇಲೆ ಶೇಕಡ 50 ರಷ್ಟು ರಿಯಾಯಿತಿ ಕೂಡ ಘೋಷಣೆ ಮಾಡಿದೆ. ಈ ಆಫರ್ ನವೆಂಬರ್ 30 ರ ವರೆಗೆ ಚಾಲ್ತಿಯಲ್ಲಿರುತ್ತದೆ.
TCL ಹೋಂ ಥಿಯೇಟರ್ to ಆಕ್ಟಾವೆಝ್ ಆ್ಯಪ್: ಮಾರುಕಟ್ಟೆಗೆ ಬಂದಿದೆ ಹೊಸ ತಂತ್ರಜ್ಞಾನ!.
ಯುರೋಸ್ ನೌ ಚಾನೆಲ್‌ನ ವಾರ್ಷಿಕ ಚಂದದಾರಿಕೆ ಮೇಲೆ ಶೇಕಡ 50 ರಷ್ಟು ರಿಯಾಯಿತಿ, ಝೀ 5 ಎಲ್ಲಾ ಪ್ಯಾಕೇಜ್ ಮೇಲೆ ಶೇಕಡ 25 ರಷ್ಟು ರಿಯಾಯಿತಿ, ಡೊಕುಬೆ ಚಾನೆಲ್‌ನ ಸೀಜನಲ್ ಮತ್ತು ವಾರ್ಷಿಕ ಪ್ಯಾಕೇಜ್ ಮೇಲೆ ಶೇಕಡ 40 ರಷ್ಟು ರಿಯಾಯತಿ, ಇಪೀಕ್ ಆನ್ ಚಾನೆಲ್‌ನ ಎಲ್ಲಾ ಪ್ಯಾಕೇಜ್ ಮೇಲೆ ಶೇಕಡ 25 ರಷ್ಟು ರಿಯಾಯಿತಿ, ಹಂಗಾಮಾ ಪ್ಲೇ ಚಾನೆಲ್ 3 ತಿಂಗಳು ಫ್ರೀ ಟ್ರಯಲ್ ಮತ್ತು ಸೋನಿಎಲ್‌ಐವಿ ಚಾನೆಲ್‌ನ ವಾರ್ಷಿಕ ಚಂದದಾರಿಕೆ ಮೇಲೆ ಶೇಕಡ 10 ರಷ್ಟು ರಿಯಾಯಿತಿ ಘೋಷಣೆ ಮಾಡಲಾಗಿದೆ.
#YouBuyWePay ಹೆಸರಿನ ಅಡಿಯಲ್ಲಿ ಸಂಸ್ಥೆಯು ಅಭಿಯಾನ ನಡೆಸುತ್ತಿದ್ದು ಅದೃಷ್ಟಶಾಲಿ ಒಟಿಟಿ ಮೇಲೆ ಶೇಕಡ 100 ರಷ್ಟು ಕ್ಯಾಶ್‌ಬ್ಯಾಕ್ ಕೂಡ ಪಡೆದುಕೊಳ್ಳಬಹುದಾಗಿದೆ. ಸಂಸ್ಥೆಯ ಫೇಸ್‌ಬುಕ್, ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ.
“ಹಬ್ಬದ ಋತುವಿನಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವುದರ ಬಗ್ಗೆ ಮಾತ್ರವಲ್ಲದೆ ನಮ್ಮ ಗ್ರಾಹಕರ ಬಗ್ಗೆ ನಮ್ಮ ಕೃತಜ್ಞತೆಯನ್ನು ಪ್ರದರ್ಶಿಸುವ ಬಗ್ಗೆಯೂ ಹೇಳಿದರು. ನಾವು ಉತ್ತಮ ತಂತ್ರಜ್ಞಾನವನ್ನು ಒದಗಿಸುವುದರಲ್ಲಿ ಮಾತ್ರ ನಂಬುವುದಿಲ್ಲ ಆದರೆ ವಿಷಯ ಪ್ಲಾಟ್‌ಫಾರ್ಮ್‌ಗಳು ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ, ಆದ್ದರಿಂದ ಈ ಹಬ್ಬದ ಋತುವಿನಲ್ಲಿ ಈ ಕೊಡುಗೆ ನಮ್ಮ ಗ್ರಾಹಕರಿಗೆ ಉಡುಗೊರೆಯ ಸಂಕೇತವಾಗಿದೆ. ನಮ್ಮ ಗ್ರಾಹಕರು ನಮ್ಮ ಆಂಡ್ರಾಯ್ಡ್ ಟಿವಿಯನ್ನು ಆನ್ ಮಾಡಿದಾಗ ಪ್ರತಿ ಕ್ಷಣವೂ ಆನಂದಿಸುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ” ಎಂದು ಟಿಸಿಎಲ್ ಇಂಡಿಯಾದ ಹಿರಿಯ ಮಾರುಕಟ್ಟೆ ವ್ಯವಸ್ಥಾಪಕ ವಿಜಯ್ ಮಿಕ್ಕಿಲಿನೇನಿ ಹೇಳಿದರು.