ಪೂರ್ವಾಶ್ರಮ ಕೆದಕಿದ್ದ ಸಚಿವ ಸಿಸಿ ಪಾಟೀಲರಿಗೆ ದಿಂಗಾಲೇಶ್ವರ ಶ್ರೀ ಕೌಂಟರ್

By Anusha Kb  |  First Published Apr 21, 2022, 4:20 PM IST
  • ಮೂರು ಸಾವಿರ ಮಠದ ವಿಚಾರಕ್ಜೆ ಏನು ರೌಡಿಸಂ ಮಾಡಿದ್ದೇನೆ?
  • ರೌಡಿಸಂ, ಪೂರ್ವಾಶ್ರಮ, ನೈತಿಕತೆ ಬಗ್ಗೆ ಸ್ಪಷ್ಟತೆ ಕೊಡದಿದ್ದರೆ ಸತ್ಯಾಗ್ರಹ
  • ಸಿಸಿ ಪಾಟೀಲರ ನೈತಿಕತೆ ಪ್ರಪಂಚ ನೋಡಿದೆ 

ಗದಗ : ಅನುದಾನ ಪಡೆಯಲು ಮಠಗಳೂ 30 ಪರ್ಸೆಂಟ್ ಕಮಿಷನ್ ನೀಡ್ಬೇಕು ಅನ್ನೋ ಹೇಳಿಕೆ ನೀಡಿದ್ದ ದಿಂಗಾಲೇಶ್ವರ ಶ್ರೀಗಳ ವಿರುದ್ಧ ಸಚಿವ ಸಿಸಿ ಪಾಟೀಲ ಮುಗಿಬಿದಿದ್ರು. ವಿಧಾನ ಸೌಧದಲ್ಲೇ ಮಾಧ್ಯಮ ಗೋಷ್ಠಿ ನಡೆಸಿ ಶ್ರೀಗಳ ವಿರುದ್ಧ ಮಾತ್ನಾಡಿದ್ರು. ಸ್ವಾಮಿಗಳ ಪೂರ್ವಾಶ್ರಮದ  ಬಗ್ಗೆ ಗೊತ್ತು ಅಂತಾ ಹರಿಹಾಯ್ದಿದ್ದರು.‌ ಈ ಬಗ್ಗೆ ಬಾಲೆಹೊಸೂರು ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತ್ನಾಡಿದ ಫಕೀರ ದಿಂಗಾಲೇಶ್ವರ ಶ್ರೀಗಳು, ಸಿಸಿ ಪಾಟೀಲರ ಹೇಳಿಕೆಗೆ ಕೌಂಟರ್‌ ನೀಡಿದ್ರು. 

ನಾಡಿನ ವಿಚಾರ ಜನರ ಮುಂದಿಟ್ಟ ಸಂದರ್ಭದಲ್ಲಿ ವೈಯಕ್ತಿಕವಾಗಿ ತೆಗೆದುಕೊಳ್ಳಲಾಗಿದೆ. ಬಾಗಲಕೋಟೆಯ ಬಾಡಗಂಡಿಯಲ್ಲಿ ವ್ಯಕ್ತಿ ಪಕ್ಷವನ್ನ ಉದ್ದೇಶಿಸಿ ಮಾತನಾಡಿಲ್ಲ.ಆದ್ರೆ, ಸಚಿವ ಸಿಸಿ ಪಾಟೀಲರು ಸುದ್ದಿಗೋಷ್ಠಿಯಲ್ಲಿ ಕೆಳಮಟ್ಟದ ಶಬ್ದ ಬಳಸಿ ಭಕ್ತರಿಗೆ, ನಮಗೆ ಆಘಾತ ಉಂಟು ಮಾಡಿದ್ದಾರೆ. ಪೂರ್ವಾಶ್ರಮ ಗೊತ್ತಿದೆ. ಪೀಠದಲ್ಲಿ ಇರುವ ಕಾರಣ ಒಪ್ಪುತ್ತೇವೆ ಎಂದು ಸಚಿವರು ಹೇಳಿದ್ದಾರೆ. ಪೂರ್ವಾಶ್ರಮದ ಬಗ್ಗೆ ಯಾರೂ ಮಾತಾಡಿರಲಿಲ್ಲ‌. ಐದನೇ ವರ್ಷದಲ್ಲೇ ಮಾನಸಿಕವಾಗಿ ಸನ್ಯಾಸ ಸ್ವೀಕಾರ ಮಾಡಿದ್ದೇನೆ. ಏಳನೇ ವರ್ಷದಲ್ಲೇ ಮನೆ ಬಿಟ್ಟು ಬಂದಿದ್ದೇನೆ. ನನ್ನ ಪೂರ್ವಾಶ್ರಮ ಏನು ಬಲ್ಲಿರಿ. ನಮ್ಮ ಪೂರ್ವಾಶ್ರಮದ ಮಾಹಿತಿಯನ್ನ ರಾಜ್ಯಕ್ಕೆ ತಿಳಿಸಬೇಕು ಅಂತಾ ಸವಾಲು ಹಾಕಿದ್ರು‌.‌‌

Tap to resize

Latest Videos

Bagalkot: ಮಠಮಾನ್ಯಗಳ ಅನುದಾನದಲ್ಲಿ 30 % ಕಮಿಷನ್ ನೀಡಬೇಕಿದೆ: ದಿಂಗಾಲೇಶ್ವರ ಶ್ರೀ

ಮೂರು ಸಾವಿರ ಮಠದ ವಿಚಾರಕ್ಜೆ ಏನು ರೌಡಿಸಂ ಮಾಡಿದ್ದೇನೆ?

ಶಿರಹಟ್ಟಿ ಮಠಕ್ಕೆ ಸೇರಿದ ಬಳಿಕ ಮೂರು ಸಾವಿರ ಮಠದ ವಿಚಾರ ಮಾತನಾಡಿಲ್ಲ. ಮೂರು ಸಾವಿರ ಮಠಕ್ಕಾಗಿ ಎಂಥಾ ರೌಡಿಸಂ (Rowdisam) ಮಾಡಿದ್ದಾನೆ ಅಂತಾ ನೋಡಿದ್ದೇನೆ ಎಂದಿದ್ದಾರೆ. ಪೀಠಕ್ಕಾಗಿ ಬಡಿದಾಡಿದ್ದೇನೆ ಎಂದು ಸಚಿವರು ಹೇಳಿದ್ದಾರೆ. ಹಣ ಬಲ ತೋಳ್ಬಲ ರೌಡಿಸಂ  ಸಾಕಷ್ಟು ಪದ ಬಳಸಿದ್ದೀರಿಮೂರು ಸಾವಿರ ಮಠದ ವಿಚಾರವಾಗಿ ರೌಡಿಸಂ ಏನು ಮಾಡಿದ್ದೇನೆ ಎಂದು ಸ್ಪಷ್ಟ ಪಡಿಸಬೇಕು.

ರೌಡಿಸಂ, ಪೂರ್ವಾಶ್ರಮ, ನೈತಿಕತೆ ಬಗ್ಗೆ ಸ್ಪಷ್ಟತೆ ಕೊಡದಿದ್ದರೆ ಸತ್ಯಾಗ್ರಹ.

ನಮ್ಮ ಮೇಲೆ ಮಾಡಿರುವ ಆರೋಪಕ್ಕೆ ಶೀಘ್ರ ಸ್ಪಷ್ಟತೆ ಕೊಡದಿದ್ದರೆ 27 ನೇ ತಾರೀಕು ಸಚಿವ ಸಿಸಿ ಪಾಟೀಲರ (C C Patil) ನರಗುಂದ (Naragunda)ಮನೆ ಎದುರು ಸತ್ಯಾಗ್ರಹ ಮಾಡಲಾಗುತ್ತದೆ‌‌‌‌‌.‌ ಸಚಿವರಿಂದ ಸ್ಪಷ್ಟನೆ ಬರದಿದ್ದರೇ ಮುಂದೆ ಉಪವಾಸ ಸತ್ಯಾಗ್ರಹವನ್ನೂ ಸಚಿವರ ನಿವಾಸದ ಮುಂದೆ ಮಾಡುತ್ತೇವೆ. ಸ್ವಾಮಿ ಅಂತಾ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಅಂದಿದ್ದೀರಿ. ನೀವು ಸ್ವಾಮಿ ಅಂತಾ ಒಪ್ಪಿಕೊಳ್ಳಲು ನಾವು ಬಯಸುವುದೂ ಇಲ್ಲ. ರಾಜ್ಯ, ರಾಷ್ಟ್ರ ನಮ್ಮನ್ನ ಸ್ವಾಮಿ ಅಂತಾ ಒಪ್ಪಿದೆ. ಒಬ್ಬ ಸಿಸಿ ಪಾಟೀಲರು ಒಪ್ಪದಿದ್ದರೆ ಸಮಸ್ಯೆಯಲ್ಲ ಒಂದು ಮಠಕ್ಕೆ (Mutt) ಅನುದಾನ ನೀಡಿದ್ದನ್ನ ಸಹಿಸುತ್ತಿಲ್ಲ ಎಂಬ ಹೇಳಿಕೆಯನ್ನ ಸಿಸಿ ಪಾಟೀಲರು ನೀಡಿದ್ದಾರೆ, ಯಾವ ಮಠಕ್ಕೆ ಅನುದಾನ (Grants) ನೀಡಿದ್ದನ್ನ ವಿರೋಧಿಸಿದ್ದೇವೆ ಸ್ಪಷ್ಟಪಡಿಸಿ. ಜಾಮೀನು ಮೇಲೆ ಇದ್ದೇನೆ ಅಂತಾ ಹೇಳಿದ್ದೀರಿ. ಎಲ್ಲ ಕೇಸ್ ಹೈಕೋರ್ಟ್ (Highcourt) ವಜಾಗೊಳಿಸಿತ್ತು. ನಿಮ್ಮಂಥ ರಾಜಕಾರಣಿಗಳು ಕುತಂತ್ರ ಮಾಡಿ ಮತ್ತೆ ನನ್ನ ಸೇರಿಸಿದ್ದೀರಿ. ನ್ಯಾಯಾಲಯದ ವ್ಯವಸ್ಥೆಯಲ್ಲಿ ಮುಂದುವರೆಯುತ್ತೇವೆ. ವಿಧಾನ ಸೌಧದಲ್ಲೇ (Vidhanasoudha) ತೀರ್ಪು ಕೊಡುವುದಾದರೆ. ನ್ಯಾಯಾಲಯದ (Court) ಪ್ರಕರಣ ತಾವು ವಿಧಾನ ಸೌಧಕ್ಕೆ ತರೆಸಿಕೊಳ್ಳಲಿ ಅಂತಾ ಹೇಳಿದರು.

Karnataka Mutt Commission Row ದಿಂಗಾಲೇಶ್ವರ ವಿರುದ್ಧ ಕರಾವಳಿಯ ಮಠಾಧೀಶರುಗಳ ಕಿಡಿ
 

ಪೊಲೀಸ್ ಅಧಿಕಾರಿಗಳನ್ನ ಗ್ರಾಮಕ್ಕೆ ಕಳಿಸಿದ್ದೀರಿ, ಪೊಲೀಸರನ್ನ ಯಾವುದಕ್ಕೆ ಬಳಸುತ್ತಿದ್ದೀರಿ. ಪೊಲೀಸರು ಬಂದು ಹಳೆಯ ಕೇಸ್ ವಿಚಾರ ಕೇಳುತ್ತಿದ್ದಾರೆ.  ಹೆದರಿಸುವ ಕೆಲಸ ಮಾಡುತ್ತಿದ್ದೀರಾ ಹೇಗೆ..? ಹೆದರುವ ಸ್ವಾಮಿಗಳು ನಾವಲ್ಲ. ಅಧಿಕಾರ ಬಳಸಿಕೊಂಡು ಹುಚ್ಚು ಸಾಹಸಕ್ಕೆ ಕೈ ಹಾಕಿದರೆ ಸ್ವಾಗತಿಸುತ್ತೇನೆ.
ಪರಮ ಪೂಜ್ಯರು ಅಂತಾ ಹೇಗೆ ಒಪ್ಪುವುದು ಅಂತಾ ಹೇಳಿದ್ದೀರಿ. ನಮ್ಮನ್ನ ಪರಮ ಪೂಜ್ಯರು ಅಂತಾ ಹೇಳಿ ಅಂತಾ ನಿಮಗೆ ಹೇಳಿಲ್ಲ. ನಮ್ಮನ್ನ ಪರಮ ಪೂಜ್ಯರು ಅಂತಾ ಕರೆಯಬೇಕಾದವರು ಭಕ್ತರು ಸುಸಂಸ್ಕೃತರು. ನಿಮ್ಮಂಥ ಅನಾಗರಿಕರು ಪೂಜ್ಯರು ಎನ್ನುವುದು ಬೇಡ ಅಂತಾ ಕಟುಕಿದ್ರು‌‌.


ಸಿಸಿ ಪಾಟೀಲರ ನೈತಿಕತೆ ಪ್ರಪಂಚ ನೋಡಿದೆ  
ಸಾಕಷ್ಟು ಆರೋಪ ಮಾಡುತ್ತೀರಿ ನಿಮ್ಮ ಮಕ್ಕಳ ಮದುವೆಗೆ ನಮ್ಮನ್ನ ಯಾಕೆ ಕರೆದಿದ್ದೀರಿ, ನಿಮ್ಮ ಮಕ್ಕಳ ಮದ್ವೆಗೆ ಬಂದು ಆಶೀರ್ವದಿಸಿದ್ದೇನೆ. ಆಗ ಇವು ನಿಮಗೆ ಗೊತ್ತಿರಲಿಲ್ಲವೇ. ನಮ್ಮ ಪೂರ್ವಾಶ್ರಮದ ಮಾಹಿತಿಯಾಗಲಿ. ನೈತಿಕತೆ, ರೌಡಿಸಂ ಗೊತ್ತಿರಲಿಲ್ಲವೇ. ಗೊತ್ತಿಲ್ಲದೇ ಕರೆದಿದ್ದರೆ ಸ್ಪಷ್ಟಪಡಿಸಬೇಕು.
ವಿಧಾನ ಸೌಧದಲ್ಲಿ ನೀಲಿ ಚಿತ್ರ ವೀಕ್ಷಿಸಿದ್ದ  ಪ್ರಕರಣವನ್ನ ಪ್ರಸ್ತಾಪಿಸಿದ ಶ್ರೀಗಳು, ಅವರೆಷ್ಟು ನೈತಿಕವಾಗಿದ್ದಾರೆ ಅನ್ನೋದನ್ನ ರಾಜ್ಯಕ್ಕೆ ಪ್ರಪಂಚಕ್ಕೆ ತೋರಿಸಿ ರಾಜೀನಾಮೆ ಕೊಟ್ಟು ಹೊರ ಬಂದವರು. ಅಷ್ಟು ನೈತಿಕತೆ ಇದ್ದವರು ನನ್ನ ನೈತಿಕಥೆ ಬಗ್ಗೆ ಮಾತ್ನಾಡ್ತಾರೆ ಅಂದ್ರೆ ಭಾರೀ ಆಶ್ಚರ್ಯವಾಗುತ್ತೆ ಎಂದರು

ಭಾವೈಕ್ಯತೆ ಪ್ರಶಸ್ತಿ ಶಿರಹಟ್ಟಿ ಫಕ್ಕೀರೇಶ್ವರ ಶ್ರೀಗಳಿಗೆ ಮೀಸಲಾಗಿರಬೇಕು

ಫೆಬ್ರವರಿ 21ರ ತೋಂಟದಾರ್ಯ ಶ್ರೀಗಳ (Tontadarya Sri) ಜನ್ಮದಿನವನ್ನ ಭಾವೈಕ್ಯತ ದಿನವನ್ನಾಗಿ ಆಚರಿಸಲು ನಿರ್ಧರಿಸಿದ್ದೀರಿ. ಭಾವೈಕ್ಯತೆ ಪ್ರಶಸ್ತಿ ಶಿರಹಟ್ಟಿ ಫಕ್ಕೀರೇಶ್ವರ ಶ್ರೀಗಳಿಗೆ ಮೀಸಲಾಗಿರಬೇಕು ಅಂತಾ ಈ ಹಿಂದೆಯೂ ಹೇಳಿದ್ದೇನೆ. ಆಗಿ ಹುಣ್ಣಿಮೆ ದಿನವನ್ನ ಫಕ್ಕೀರೇಶ್ವರರ (Fakireshwara) ಹೆಸರಲ್ಲಿ ಭಾವೈಕ್ಯತೆ ದಿನ ಎಂದು ಘೋಷಿಸಿ. ಆಗ ಪರಂಪರೆ ಇತಿಹಾಸಕ್ಕೆ ಬೆಲೆ ಕೊಟ್ಟಂತಾಗುತ್ತದೆ. ನಿಮ್ಮ ನಿರ್ಣಯ ಹಿಂಪಡೆಯದಿದ್ದರೆ ವಿಧಾನ ಸೌಧದ ಎದುರು ನಿರಂತರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಪರ್ಸೆಂಟೇಜ್ ವಿಚಾರ ಸೇರಿದಂತೆ ಯಾವುದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡದ ಶ್ರೀಗಳು ಮಾಧ್ಯಮಗೋಷ್ಠಿಯುದ್ದಕ್ಕೂ ಸಚಿವರ ವಿರುದ್ಧ ಹರಿಹಾಯ್ದರು.

click me!