ಹಿಜಾಬ್ ತೀರ್ಪು ವಿರೋಧಿಸಿದ್ದೇ Muslims Traders Boycott ವಿವಾದಕ್ಕೆ ಕಾರಣ

Published : Mar 23, 2022, 09:27 PM ISTUpdated : Mar 23, 2022, 09:33 PM IST
ಹಿಜಾಬ್ ತೀರ್ಪು ವಿರೋಧಿಸಿದ್ದೇ Muslims Traders Boycott ವಿವಾದಕ್ಕೆ ಕಾರಣ

ಸಾರಾಂಶ

'ವ್ಯಾಪಾರ ಧರ್ಮ ಸಮರ' ಕ್ರಿಯೆಗೆ ಪ್ರತಿಕ್ರಿಯೆ.. ಹೈಕೋರ್ಟ್ ತೀರ್ಪುನ ವಿರುದ್ಧ 'ಬಂದ್' ಮಾಡಿದ್ದೇ ಹೊಸ ವಿವಾದಕ್ಕೆ ಕಾರಣ ಎಂದು ಗದಗದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.  

ವರದಿ: ಗಿರೀಶ್ ಕುಮಾರ್, ಏಷ್ಯಾನೆಟ್ ಸುವರ್ಣನ್ಯೂಸ್

ಗದಗ(ಮಾ.23): ದಕ್ಷಿಣ ಕನ್ನಡ (Dakshina Kannada), ಶಿವಮೊಗ್ಗ (Shivamogga) ಸೇರಿ ಕೆಲ ಜಿಲ್ಲೆಗಳ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ (Muslim) ವ್ಯಾಪಾರಿಗಳನ್ನ ಬ್ಯಾನ್ ಮಾಡಿರೋ ವಿಚಾರಕ್ಕೆ ಗದಗದಲ್ಲಿ ಪ್ರತಿಕ್ರಿಯೆ ನೀಡಿದ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಇದು ಕ್ರಿಯೆಗೆ ಪ್ರತಿಕ್ರಿಯೆ ಎಂದಿದ್ದಾರೆ. ಗದಗ ಜಿಲ್ಲಾ ಬಿಜೆಪಿ ನೂತನ ಕಟ್ಟಡ ವೀಕ್ಷಿಸಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ವಿಜಯೇಂದ್ರ (b y vijayendra ), ಎಲ್ಲ ವಿವಾದ ಆರಂಭವಾಗಿದ್ದ ಹಿಜಾಬ್ ನಿಂದ. ಕೋರ್ಟ್ ಆದೇಶ ವಿರುದ್ಧ ಬಂದ್ ಮಾಡಿದ್ದಕ್ಕೆ ವ್ಯಾಪಾರ ಬ್ಯಾನ್ ಮಾಡಲಾಗಿದೆ.

ಹೈಕೋರ್ಟ್  (High Court) ನಿರ್ಧಾರ ಬಂದರೂ ಈ ರೀತಿ ಚಟುವಟಿಕೆ ಮಾಡಿದ್ದು ಯಾರೂ ಒಪ್ಪುವುವಂಥದ್ದಲ್ಲ. ಎಲ್ಲರೂ ಸಮಾಧಾನದಿಂದ ಕೂತು ಚರ್ಚಿಸಬೇಕಾಗಿದೆ.ಕೋರ್ಟ್ ಆದೇಶದ ವಿರುದ್ಧ ಬಂದ್ ಮಾಡಿದಾಗ ಕಣ್ಣು ಮುಚ್ಚಿ ಕೂರಕ್ಕೆ ಸಾಧ್ಯವಿಲ್ಲ ಎಂದು ಜಾತ್ರಾ ಮಹೋತ್ಸವದಲ್ಲಿ ವ್ಯಾಪಾರ ಬ್ಯಾನ್ ಮಾಡಿದ್ದರ ಬಗ್ಗೆ ಬಿವೈ ವಿಜಯೇಂದ್ರ ಸಮರ್ಥಿಸಿಕೊಂಡಿದ್ದಾರೆ.

ಎರಡೂ ಕೈ ಸೇರಿದರೇ ಚಪ್ಪಾಳೆಯಾಗುತ್ತೆ. ಒಂದೇ ಕೈ ಸೇರಿದರೆ ಚಪ್ಪಾಳೆ ಆಗಲ್ಲ.  ಎಲ್ಲರೂ ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕು. ಹಿಜಾಬ್ ನಂತರ ಆದ ಬೆಳವಣಿಗೆ ಯಾರಿಗೂ ಶೋಭೆ ತರುವಂತದ್ದಲ್ಲ. ಹಿಜಾಬ್ ಹೆಸರಲ್ಲಿ ಮಕ್ಕಳ ಮನಸ್ಸು ಹಾಳು ಮಾಡುವ ಪ್ರಕ್ರಿಯೆ ನಡೀತು.ಹೈಕೋರ್ಟ್ ತೀರ್ಪು ನೀಡಿದ ನಂತರವಾದರೂ ಅರ್ಥ ಮಾಡಿಕೊಳ್ಳಬೇಕಿತ್ತು. ಜೆಡ್ಜಮೆಂಟ್ ವಿರುದ್ಧ ಬಂದ್ ಗೆ ಕರೆ ನೀಡಿದ್ದು. ಅಂಗಡಿ ಮುಂಗಟ್ಟು ಬಂದ್ ಮಾಡುವುದು, ಬಂದ್ ಮಾಡಿದ ನಂತರ ಪ್ರತಿಕ್ರಿಯೆ ನಡೀತಿದೆ.

Kapu Marigudi Jatra: ಕಳಚಿದ ಸೌಹಾರ್ದತೆಯ ಕೊಂಡಿ, 2ನೇ ದಿನವು ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ

ಬರುವ ದಿನಗಳಲ್ಲಿ ಯಾವ ರೀತಿಯ ಪ್ರತಿಕ್ರಿಯೆ ನಡೆಯುತ್ತೆ ಅನ್ನೋದು ನೋಡಬೇಕು. ಎಲ್ಲವೂ ಹಿಜಾಬ್ ನಿಂದಲೇ ಶುರುವಾಗಿದ್ದು. ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಹಾಗೂ ಮಾಜಿ ಸಿಎಮ್ ಯಡಿಯೂರಪ್ಪ ಅವರು ಈ ಸಂಗತಿಯನ್ನ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಬರುವ ದಿನದಲ್ಲಿ ಚರ್ಚಿಸಿ ಮುಂದೆ ಯಾವ ರೀತಿ ಸ್ಪಂದಿಸಬೇಕೆಂದು ನಿರ್ಧರಿಸಲಿದ್ದಾರೆ ಎಂದರು.

ಕಲ್ಲಡ್ಕ ಪ್ರಭಾಕರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಕಾರ: ಕೇಸರಿ ಧ್ವಜ ರಾಷ್ಟ್ರಧ್ವ ಆಗುತ್ತೆ ಅನ್ನೋ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಬಿವೈ ವಿಜಯೇಂದ್ರ ನಿರಾಕರಿಸಿದರು. ಸ್ಥಾನ ಮಾನದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹಲವಾರು ಭಾರಿ ವಿಜಯೆಂದ್ರ ಅವರಿಗೆ ಸ್ಥಾನ ಮಾನ ನೀಡುವ ಬಗ್ಗೆ ಚರ್ಚೆ ಆಗ್ತಿದೆ.  ಪಕ್ಷ ನನಗೆ ರಾಜ್ಯದ ಉಪಾಧ್ಯಕ್ಷ ಸ್ಥಾನ ಕೊಟ್ಟಿದೆ. ನನಗೆ ಈ ಬಗ್ಗೆ ಸಮಾಧಾನವಿದೆ.  ಉಪಾಧ್ಯಕ್ಷನಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. 

Vijayapura Boy Beaten: ಅಪ್ರಾಪ್ತ ಬಾಲಕನ ಗುಪ್ತಾಗಂಕ್ಕೆ ಬಣ್ಣ ಹಾಕಿ ಹಿಂಸಿಸಿದ ಊರ ಗೌಡ!

ಗದಗ ಕ್ಷೇತ್ರದಿಂದ ಸ್ಪರ್ಧಿಸಲಿದ್ದೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿ 224 ಕ್ಷೇತ್ರದಲ್ಲಿ ನಿಲ್ಲುವ ಅವಕಾಶ ಇದ್ರೆ ನಿಲ್ಲಬಹುದಿತ್ತು.  ಎಲ್ಲೇ ಉಪ ಚುನಾವಣೆ ಇದ್ದರೂ ನನ್ನ ಹೆಸರು ಕೇಳಿಬರುತ್ತೆ. ಬೇರೆ ಕಡೆ ಹೋದಾಗಲೂ ಈ ಪ್ರಶ್ನೆ ಬರುತ್ತೆ.  ಚುನಾವಣೆ ರಾಜಕೀಯಕ್ಕಿಂತ ಪಕ್ಷ ಸಂಘಟನೆ ಮಾಡುವತ್ತ ಹೆಚ್ಚು ಒತ್ತು ನೀಡುತ್ತೇನೆ ಅಂತಾ ಉತ್ತರ ನೀಡಿದ್ರು.

PREV
Read more Articles on
click me!

Recommended Stories

ಮಾಂಸದ ಮುದ್ದೆಯಂಥಾದ ಮೃತದೇಹದ ಮುಂದೆ ಮಗನ ಕಣ್ಣೀರು, ಪಂಚಭೂತದಲ್ಲಿ ಲೀನರಾದ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ!
ಡಿವೈಡರ್‌ಗೆ ಕಾರ್‌ ಡಿಕ್ಕಿ, ಕುಟುಂಬವನ್ನು ಭೇಟಿ ಮಾಡಲು ಹೋಗುತ್ತಿದ್ದ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಸಜೀವ ದಹನ