ಬಿಜೆಪಿ ಮುಖಂಡ ಹಾಗೂ ಕನಕದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿ ದಂಡಿನ್ ಗೆ ಸೇರಿದ ಹೋಟೆಲ್ ಮೇಲೆ ಐಟಿ ದಾಳಿ| ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ರಾಯಲ್ ವಿಲ್ಲಾ ಹೋಟೆಲ್|ಆದಾಯ ತೆರಿಗೆ ಇಲಾಖೆಯ ಗೋವಾ, ಹುಬ್ಬಳ್ಳಿ ಹಾಗೂ ಬೆಂಗಳೂರು ಕಚೇರಿಯ ನಾಲ್ವರು ಹಿರಿಯ ಅಧಿಕಾರಿಗಳ ನೇತೃತ್ವದ ತಂಡ ದಾಳಿ| ದಾಳಿ ವೇಳೆ ಹೋಟೆಲ್‌ನ ವಿವಿಧ ಕೊಠಡಿಗಳನ್ನು ತಪಾಸಣೆ ನಡೆಸಿ, ಕೈಗೆ ಸಿಕ್ಕ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದ ಅಧಿಕಾರಿಗಳು|
ಗದಗ[ಅ.24]: ಬಿಜೆಪಿ ಮುಖಂಡ ಹಾಗೂ ಕನಕದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿ ದಂಡಿನ್ ಅವರಿಗೆ ಸೇರಿದ ಹೋಟೆಲ್ ರಾಯಲ್ ವಿಲ್ಲಾ ಮೇಲೆ ಐಟಿ ಅಧಿಕಾರಿಗಳು ಇಂದು(ಗುರುವಾರ) ದಾಳಿ ನಡೆಸಿದ್ದಾರೆ.
ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ಹೋಟೆಲ್ ಮೇಲೆ ಆದಾಯ ತೆರಿಗೆ ಇಲಾಖೆಯ ಗೋವಾ, ಹುಬ್ಬಳ್ಳಿ ಹಾಗೂ ಬೆಂಗಳೂರು ಕಚೇರಿಯ ನಾಲ್ವರು ಹಿರಿಯ ಅಧಿಕಾರಿಗಳ ನೇತೃತ್ವದ ತಂಡ ದಾಳಿ ಮಾಡಿದ್ದಾರೆ. ಈ ವೇಳೆ ಹೋಟೆಲ್‌ನ ವಿವಿಧ ಕೊಠಡಿಗಳನ್ನು ತಪಾಸಣೆ ನಡೆಸಿ, ಕೈಗೆ ಸಿಕ್ಕ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದ್ದಾರೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಕ್ರಮ ಆಸ್ತಿ ಸಂಪಾದನೆ, ತೆರಿಗೆ ವಂಚನೆ ಮಾಡಿರಬಹುದಾದ ದಾಖಲೆಗಳಿಗಾಗಿ ಸುಮಾರು 6 ಗಂಟೆಗಳ ಕಾಲ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಓರ್ವ ಮಹಿಳಾ ಅಧಿಕಾರಿ ಸೇರಿದಂತೆ ನಾಲ್ವರು ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳಿಂದ ದಾಳಿ ನಡೆಸಲಾಗಿದೆ. ದಾಳಿಗೆ ಎರಡು ಹುಬ್ಬಳ್ಳಿ, ಗೋವಾ ಹಾಗೂ ಗದಗ ನೋಂದಣಿಯ ಒಟ್ಟು ನಾಲ್ಕು ವಾಹನಗಳಲ್ಲಿ ಅಧಿಕಾರಿಗಳು ಆಗಮಿಸಿದ್ದರು.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅವರು ಕಾಂಗ್ರೆಸ್ ತೊರೆದು, ಬಿಜೆಪಿ ಪಕ್ಷ ಸೇರಿದ್ದರು. ಇನ್ನು ಮುಂಬರುವ ವಾಯುವ್ಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿಯಿಂದ ಕಣಕ್ಕಿಳಿಯಲು ರವಿ ದಂಡಿನ ಸಿದ್ಧತೆ ನಡೆಸಿದ್ದರು. (ಸಾಂದರ್ಭಿಕ ಚಿತ್ರ]
ಅಕ್ಟೋಬರ್ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ