ಭಾರೀ ಮಳೆ: ಗದಗನಲ್ಲಿ ಶವಸಂಸ್ಕಾರಕ್ಕೂ ಅವಕಾಶ ನೀಡದ ವರುಣ

By Web DeskFirst Published Oct 24, 2019, 8:56 AM IST
Highlights

ನೀರಿನಲ್ಲೇ ಕೆಟ್ಟು ನಿಂತ ವಾಹನ|  ಶವಸಂಸ್ಕಾರ ಮಾಡಲು ಪರದಾಡಿದ  ಬಂಧುಗಳು|ಬ್ರಿಡ್ಜ್‌ ಕೆಳಗೆ ನಿಂತಿರುವ ನೀರಿನಲ್ಲಿ ಶವಯಾತ್ರೆ|  ನೀರಿನಲ್ಲೇ ನಡೆದು ಸ್ಮಶಾನ ತಲುಪಿದ ಮೃತರ ಕುಟುಂಬಸ್ಥರು|

ಗದಗ[ಅ.24]: ಮಳೆ ನಿಂತರೂ ಮರದ ಹನಿ ನಿಂತಿಲ್ಲ ಎನ್ನುವಂತೆ ಮಳೆ ನೀರು ಶವಸಂಸ್ಕಾರಕ್ಕೂ ಅಡ್ಡಿ ಮಾಡಿದೆ. ಹೌದು,  ಇಲ್ಲಿನ ರೆಹಮತ್‌ ನಗರದ ವ್ಯಕ್ತಿಯೊಬ್ಬ ಮೃತಪಟ್ಟಾಗ ಕುಟುಂಬಸ್ಥರು, ಬಂಧುಗಳು ಶವಸಂಸ್ಕಾರ ಮಾಡಲು ಬುಧವಾರ ಪರದಾಡಿದ ಘಟನೆ ನಡೆದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬ್ರಿಡ್ಜ್‌ ಕೆಳಗೆ ನಿಂತಿರುವ ನೀರಿನಲ್ಲಿ ಶವಯಾತ್ರೆ ಸಾಗಿದೆ. ಈ ಮಧ್ಯೆ ಶವ ಸಾಗಿಸುವಾಗ ರೈಲ್ವೆ ಅಂಡರ್‌ ಪಾಸ್‌ನಲ್ಲಿ ವಾಹನ ಕೆಟ್ಟು ನಿಂತಿದೆ. ಇದರಿಂದ ಮೃತರ ಕುಟುಂಬಸ್ಥರು ನೀರಿನಲ್ಲೇ ನಡೆದು ಸ್ಮಶಾನ ತಲುಪಿದ್ದಾರೆ. ಕಳೆದ ಮೂರು ದಿನಗಳಿಂದ ಸುರಿದ ಭಾರಿ ಮಳೆಗೆ ಬ್ರಿಡ್ಜ್‌ ಕೆಳಗೆ ಸಾಕಷ್ಟು ಪ್ರಮಾಣದ ನೀರು ನಿಂತಿತ್ತು.  ಅಲ್ಲಿ ರಾಡಿಯೂ ಇರುವುದರಿಂದ ವಾಹನ ಮುಂದೆ ಸಾಗಿಲ್ಲ. ಹೀಗಾಗಿ, ಈ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ. 

ನರಗುಂದ: ಪ್ರವಾಹದಿಂದ ಆಸ್ಪತ್ರೆಗೆ ತೆರಳಲು ಗರ್ಭಿಣಿಯರ ಹರಸಾಹಸ

 

click me!