ನರಗುಂದ: ಪ್ರವಾಹದಿಂದ ಆಸ್ಪತ್ರೆಗೆ ತೆರಳಲು ಗರ್ಭಿಣಿಯರ ಹರಸಾಹಸ

By Web Desk  |  First Published Oct 23, 2019, 8:54 AM IST

ಬೆಣ್ಣಿ ಹಳ್ಳದ ಪ್ರವಾಹದಿಂದ ತತ್ತರಿಸಿರುವ ಸುರಕೋಡ ಗ್ರಾಮ | ಎನ್‌ಡಿಆರ್‌ಎಫ್ ತಂಡದ ನೆರವಿನಿಂದ ಆಸ್ಪತ್ರೆಗೆ| 2009 ರಲ್ಲಿ ಬೆಣ್ಣಿ ಹಳ್ಳಕ್ಕೆ ಪ್ರವಾಹ ಬಂದ ಸಂದರ್ಭದಲ್ಲಿ ಈ ಗ್ರಾಮವು ಸಂಪೂರ್ಣ ಜಲಾವೃತ್ತವಾಗಿತ್ತು|


ನರಗುಂದ[ಅ.23]: ತಾಲೂಕಿನ ಬೆಣ್ಣಿ ಹಳ್ಳಕ್ಕೆ ಹೊಂದಿಕೊಂಡಿರುವ ಸುರಕೋಡ ಗ್ರಾಮವು ಕಳೆದ ಮೂರು ದಿನಗಳಿಂದ ಪ್ರವಾಹದಿಂದ ನಡುಗಡ್ಡೆಯಾಗಿ ಸಂಪರ್ಕಕ ಳೆದುಕೊಂಡಿದೆ. ಗ್ರಾಮದ ಇಬ್ಬರು ಮಹಿಳೆಯರನ್ನು ಮಂಗಳವಾರ ಹೆರಿಗೆಂದು ಆಸ್ಪತ್ರೆಗೆ ಕರೆದುಕೊಂಡು ಬರಲು ಎನ್‌ಡಿಎಫ್‌ಆರ್ ತಂಡದವರು ಹರಸಾಹಸ ಪಟ್ಟಿದ್ದಾರೆ. 

ಗರ್ಭಿಣಿಯರಾದ ಬಸಮ್ಮ ಮತ್ತು ಬೀಬಿಜಾನವರನ್ನು ಬೋಟ್‌ಗಳ ಮೂಲಕ ಕರೆದುಕೊಂಡು ಬಂದು ರಕ್ಷಣೆ ಮಾಡಿ ಆಸ್ಪತ್ರೆಗೆ ಕಳಿಸಿದ್ದಾರೆ. ಹಳೇ ಗ್ರಾಮದಲ್ಲಿ ಇದ್ದ ಬಸಮ್ಮ ರೋಣದ ಹಾಗೂ ಬೀಬಿಜಾನ ಹೊಂಗಲ ಎನ್ನುವ ಗರ್ಭಿಣಿಯರನ್ನು ಹೆರಿಗೆಗೆ ಕರೆದುಕೊಂಡು ಹೋಗಬೇಕೆಂದು ನಡುಗಡ್ಡೆಯಲ್ಲಿ ಸಿಲುಕಿಕೊಂಡು ಗ್ರಾಮಸ್ಥರು ದೂರವಾಣಿ ಮೂಲಕ ಅಧಿಕಾರಿಗಳನ್ನು ಸಂಪರ್ಕಮಾಡಿದಾಗ ಜಿಲ್ಲಾ ಮತ್ತು ತಾಲೂಕು ಆಡಳಿತಅಧಿಕಾರಿಗಳು ಎನ್.ಡಿ.ಆರ್.ಎಫ್. ತಂಡವನ್ನು ಕರೆಯಿಸಿದರು.

Latest Videos

undefined

ನಾಲ್ಕು ದಿನದ ಹಿಂದೆ ಹೆರಿಗೆಯಾದ ರೇಣುಕಾಎಂಬ ಮಹಿಳೆ ಮಗುವಿಗೆ ಆರೋಗ್ಯ ತೊಂದರೆ ಇದ್ದಿರಿಂದ ಈ ಮಹಿಳೆ ಮತ್ತು ಮಗುವನ್ನು ರಕ್ಷಣೆ ತಂಡದವರು ಬೋಟ್ ಮೂಲಕ ಹಳೇ ಗ್ರಾಮಕ್ಕೆ ಹೋಗಿ ಕರೆದುಕೊಂಡು ಬಂದು ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ. ಈ ಹಿಂದೆ 2009 ರಲ್ಲಿ ಬೆಣ್ಣಿ ಹಳ್ಳಕ್ಕೆ ಪ್ರವಾಹ ಬಂದ ಸಂದರ್ಭದಲ್ಲಿ ಈ ಗ್ರಾಮವು ಸಂಪೂರ್ಣ ಜಲಾವೃತ್ತವಾಗಿದ್ದರಿಂದ ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಈ ಗ್ರಾಮ ಜನತೆಗೆ ಹಳ್ಳದ ಎತ್ತರ ಪ್ರದೇಶದಲ್ಲಿಸರ್ಕಾರದಿಂದ 25 ಎಕರೆ ಜಮೀನು ಖರೀದಿಸಿ ದಾನಿಗಳ ಸಹಾಯದಿಂದ ಈ ಗ್ರಾಮದ ಜನತೆಗೆ ಆಸರೆ ಮನೆಗಳನ್ನು ನಿರ್ಮಾಣ ಮಾಡಿ ಕೊಟ್ಟಿದ್ದರು. ಆದರೆ ಈ ಗ್ರಾಮಸ್ಥರು ಬೆಣ್ಣಿ ಹಳ್ಳದ ಪ್ರವಾಹ ಎಷ್ಟೇ ಬಂದರೂ ನಮ್ಮ ಗ್ರಾಮದೊಳಗೆ ಬರುವುದಿಲ್ಲವೆಂದು ಹೆಚ್ಚಿನ ಜನರು ಈಗಲು ಹಳೇ ಗ್ರಾಮದಲ್ಲಿ ವಾಸವಾಗಿದ್ದರೆ. ಆದರೆ ಕಳೆದ ಎರಡು ದಿನಗಳಿಂದ ಬೆಣ್ಣಿ ಹಳ್ಳದ ಮೇಲ್ಭಾಗದಲ್ಲಿ ಹೆಚ್ಚು ಮಳೆಸುರಿಯುತ್ತಿರುವುದರಿಂದ ಈ ಗ್ರಾಮದ ಸುತ್ತಲು ಪ್ರವಾಹ ಸುತ್ತವರಿದು ಹಳೇ ಗ್ರಾಮಕ್ಕೆ ಹೋಗಲು ಸಾಧ್ಯವಾಗದ ರೀತಿಯಲ್ಲಿ ನೀರು ಹರಿಯುತ್ತಿದೆ.

ತಾಲೂಕು ಅಧಿಕಾರಿಗಳು ಎನ್.ಡಿ.ಆರ್.ಎಫ್‌ ತಂಡದವರ ಸಹಾಯದಿಂದ ನಮ್ಮ ಮಗಳನ್ನು ಪ್ರವಾಹ ನೀರಿನಲ್ಲಿ ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಲು ಅನುಕೂಲ ಮಾಡಿದ ಅಧಿಕಾರಿಗಳಿಗೆ ಗಭಿರ್ಣಿಯರ ತಂದೆ ಮಹಾದೇವಪ್ಪ ರೋಣದ ಅಭಿನಂದನೆ ಹೇಳಿದ್ದಾರೆ.

ಗ್ರಾಮಸ್ಥರಿಗೆ ಹೊಸ ಗ್ರಾಮಕ್ಕೆ ತೆರಳಲು ಸೂಚಿಸಿದ್ದೆ ಎರಡು ದಿನದ ಹಿಂದೆ ಹಳೇ ಸುರಕೋಡ ಗ್ರಾಮದಲ್ಲಿರುವ ಎಲ್ಲ ಗ್ರಾಮಸ್ಥರಿಗೆ ಬೆಣ್ಣಿ ಹಳ್ಳದ ಪ್ರವಾಹ ಹೆಚ್ಚು ಬರುತ್ತದೆ, ಆದ್ದರಿಂದ ಎಲ್ಲ ಜನರು ಹೊಸ ಆಸರೆ ಗ್ರಾಮಕ್ಕೆ ಸ್ಥಳಾಂತರ ಆಗಬೇಕೆಂದು ಮನವಿ ಮಾಡಿಕೊಂಡರೂ ಕೂಡ ಜನತೆ ಹೊಸ ಗ್ರಾಮಕ್ಕೆ ಬರದೆ ಹಳೇ ಗ್ರಾಮದಲ್ಲಿಇದ್ದದರಿಂದ ನಮಗೆ ಇಂದು ಈ ಗರ್ಭಿಣಿಯರನ್ನುಕರೆದುಕೊಂಡು ಬರಲು ಎನ್.ಡಿ.ಆರ್.ಎಫ್. ಕರೆಯಿಸಿಕೊಂಡು ಈ ಮಹಿಳೆಯರನ್ನು ರಕ್ಷಣೆ ಮಾಡಬೇಕಾಯಿತು ಎಂದು ತಹಸೀಲ್ದಾರ್‌ಯಲ್ಲಪ್ಪ ಗೋಣ್ಣಿಣವರ ಅವರು ತಿಳಿಸಿದ್ದಾರೆ. 

click me!