ಅಲೈ ದೇವರ ವಾಣಿ 'ಹಾಲುಮತದ ಕೈಯಲ್ಲಿ ಅಧಿಕಾರ ಇದೆ, ಬದಲಾವಣೆ ಸುಲಭವಲ್ಲ..'

Published : Jul 07, 2025, 09:49 AM IST
Gadag Video

ಸಾರಾಂಶ

ಕೌಜಗೇರಿ ಗ್ರಾಮದಲ್ಲಿ ನಡೆದ ದೈವ ಕಾರ್ಣಿಕದಲ್ಲಿ ಅಲೈ ದೇವರ ವಾಣಿಯ ಮೂಲಕ ರಾಜಕೀಯ ಭವಿಷ್ಯ, ಮಾರಕ ರೋಗದ ಬಗ್ಗೆ ಭವಿಷ್ಯ ನುಡಿದಿದೆ. ಹಾಲುಮತದವರ ಕೈಯಲ್ಲಿ ಅಧಿಕಾರವಿದೆ, ಬದಲಾವಣೆ ಕಷ್ಟ ಎಂದೂ, ಮದ್ದು ಇಲ್ಲದ ರೋಗ ಹರಡಲಿದೆ ಎಂದೂ ಎಚ್ಚರಿಕೆ ನೀಡಿದೆ.

ಗದಗ (ಜು.7): ಹಾಲು ಮತದ ಕೈಯಲ್ಲಿ ಅಧಿಕಾರ ಇದೆ, ಬದಲಾವಣೆ ಅಷ್ಟು ಸುಲಭವಲ್ಲ ಎಂದು ಕೌಜಗೇರಿ ಗ್ರಾಮದ ಮೊಹರಂ ಹಬ್ಬದ ಆಚರಣೆ ವೇಳೆ ಅಲೈ ದೇವರ ವಾಣಿ ನುಡಿದಿದೆ. ಗದಗ ಜಿಲ್ಲೆ ರೋಣ ತಾಲೂಕಿನ ಕೌಜಗೇರಿ ಗ್ರಾಮದಲ್ಲಿ ನಡೆದ ದೈವ ಕಾರ್ಣಿಕದಲ್ಲಿ ಅಲೈ ದೇವರ ವಾಣಿ ನಡಿದಿದೆ. ಹಾಲು ಕೆಟ್ಟರೂ ಹಾಲಮತ ಕೆಡುವುದಿಲ್ಲ. ಹಾಲುಮತದ ಕೈಯಲ್ಲಿ ಅಧಿಕಾರ ಕೊಟ್ಟಿದ್ದೀರಿ. ಅದನ್ನು ಬದಲಿ ಮಾಡುವುದು ಅಷ್ಟು ಸುಲಭವಲ್ಲ. ಬಹಳ‌ ಕಠಿಣ ಐತಿ ಎಂದು ಹೇಳಿದೆ.

ಅವರಾಗಿಯೇ ಒಲ್ಲೆ ಅಂತ ಬಿಟ್ರೆ ಇನ್ನೊಬ್ಬರಿಗೆ ಅಧಿಕಾರ ಹೋಕೈತಿ. ನದಿ ಒಳಗೆ ಈಜು ಬರುವ ಭೂಪ ಬೇಕು. ಅಂದಾಗ ಮಾತ್ರ ಅಧಿಕಾರ ಬದಲಾವಣೆ ಆಗುತ್ತೆ. ಇಲ್ಲಾಂದ್ರೆ ಇಲ್ಲ ಎಂದು ರಾಜ್ಯ ರಾಜಕಾರಣದ ಬಗ್ಗೆ ಭವಿಷ್ಯ ನುಡಿದಿದೆ.

ಮದ್ದು ಇಲ್ಲದ ವ್ಯಾದಿ ಬರುತೈತಿ. ಅದು ಗಾಳಿ ಮುಖಾಂತರ ಹರಡತೈತಿ. ಸಾಕಷ್ಟು ಸಾವು ನೋವುಗಳು ಆಗುತ್ತವೆ. ಅದು ಭೂಮಿ ಮೇಲೆ ಐದು ವರ್ಷ ಇರುತೈತಿ.. ಎಚ್ಚರಿಕೆಯಿಂದ ಇರಬೇಕು.ಸಾಮಾನ್ಯರಿಗೆ ಮಾತ್ರ ರೋಗ ಅಲ್ಲ. ಆಳುವ ದೊರೆಗಳಿಗೂ ಭಯಂಕರ ರೋಗ ಕಾಡುತ್ತೆ. ಎಚ್ಚರಿಕೆ ಹೆಜ್ಜೆ ಇಡಿರಿ. ನಾನು ನಾನು ಅಂತ ಮೆರಿಬ್ಯಾಡ್ರಿ. ವಾಹನ ತಗೊಂಡು ಹೋಗುವರು ತಂದೆ ತಾಯಿ ಬೇಡ ಅಂದ್ರೆ ಬಿಟ್ಟು ಬಿಡ್ರಿ. ದೇವರ ಆಜ್ಞೆ ಮೀರಿದ್ರೆ ಬಲಿಯಾಗ್ತೀರಿ.ಹೋಗಿದ್ದೆ ಖರೆಯಾದ್ರೆ ಹಾದಿಗೊಂದು ಹೆಣ. ಬೀದಿಗೊಂದು ಹೆಣ ಆಕೈತಿ ಎಂದು ಭವಿಷ್ಯ ಹೇಳಿದೆ.

 

PREV
Read more Articles on
click me!

Recommended Stories

ಡಿವೈಡರ್‌ಗೆ ಕಾರ್‌ ಡಿಕ್ಕಿ, ಕುಟುಂಬವನ್ನು ಭೇಟಿ ಮಾಡಲು ಹೋಗುತ್ತಿದ್ದ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಸಜೀವ ದಹನ
ಬೆಂಬಲ ಬೆಲೆಯಡಿ 20 ಕ್ವಿಂಟಲ್ ಮೆಕ್ಕೆಜೋಳ ಖರೀದಿ: ಸಚಿವ ಎಚ್.ಕೆ. ಪಾಟೀಲ