ಪಂಚಮಸಾಲಿಗೆ 2ಎ ಮೀಸಲಾತಿ ನಂತರವೇ ಹರಜಾತ್ರೆ ಆಚರಣೆ: ವಚನಾನಂದ ಶ್ರೀ

By Sathish Kumar KH  |  First Published Nov 22, 2022, 4:37 PM IST

ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ನಾವು ನಿರ್ಣಾಯಕ ಸ್ಥಿತಿಯಲ್ಲಿದ್ದೇವೆ. ಈ ವರ್ಷದ ಹರ ಜಾತ್ರೆ ಮೀಸಲಾತಿ ಪಡೆದೇ ಮಾಡಬೇಕು ಎಂದುಕೊಂಡಿದ್ದೇವೆ. ಹೀಗಾಗಿ, ಚಳಿಗಾಲದ ಅಧಿವೇಶನದಲ್ಲಿ ಪಂಚಮಸಾಲಿ 2ಎ ಮೀಸಲಾತಿ ಕುರಿತು ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು.


ಗದಗ (ನ.22): ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ನಾವು ನಿರ್ಣಾಯಕ ಸ್ಥಿತಿಯಲ್ಲಿದ್ದೇವೆ. ಈ ವರ್ಷದ ಹರ ಜಾತ್ರೆ ಮೀಸಲಾತಿ ಪಡೆದೇ ಮಾಡಬೇಕು ಎಂದುಕೊಂಡಿದ್ದೇವೆ. ಹೀಗಾಗಿ, ಚಳಿಗಾಲದ ಅಧಿವೇಶನದಲ್ಲಿ ಪಂಚಮಸಾಲಿ 2ಎ ಮೀಸಲಾತಿ ಕುರಿತು ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಆಗ್ರಹಿಸಿದ್ದಾರೆ.

ಮೀಸಲಾತಿ ಕುರಿತ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ಪಂಚಮಸಾಲಿಗೆ ಮೀಸಲಾತಿ (Panchamasali Reservation) ವಿಚಾರವಾಗಿ ಜನಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದೇವೆ. ಈಗಾಗಲೇ ಗದಗ, ಕೊಪ್ಪಳದಲ್ಲಿ ಹಿಂದುಳಿದ ಆಯೋಗ ಸಮೀಕ್ಷೆ (Survey) ನಡೆಸಿದೆ. ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ (Jayaprakash hegde) ಅವರು ಶೀಘ್ರವಾಗಿ ವರದಿಯನ್ನ ಸರ್ಕಾರಕ್ಕೆ ಸಲ್ಲಿಸಬೇಕು. ಈ ವರ್ಷದ ಹರ ಜಾತ್ರೆ (Hara Jatre) ಮೀಸಲಾತಿ ಪಡೆದೇ ಮಾಡಬೇಕು ಎಂದುಕೊಂಡಿದ್ದೇವೆ. ಡಿಸೆಂಬರ್ ಅಂತ್ಯದೊಳಗೆ ನಾವು ಮೀಸಲಾತಿ ಪಡೆಯಲೇಬೇಕು. ವಿಳಂಬ ಮಾಡದೇ ಸರ್ಕಾರ ಶೀಘ್ರವೇ ಮೀಸಲಾತಿಯನ್ನ ಘೋಷಿಸಬೇಕು ಎಂದು ಒತ್ತಾಯಿಸಿದರು.

Tap to resize

Latest Videos

ಲಕ್ಷ್ಮೇಶ್ವರದಲ್ಲಿ ಜಾಗೃತಿ ಸಮಾವೇಶ: ಮೀಸಲಾತಿ ಜನಜಾಗೃತಿ ಹಾಗೂ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡುವ ನಿಟ್ಟಿನಲ್ಲಿ ಡಿಸೆಂಬರ್ 4 ಕ್ಕೆ ಲಕ್ಷ್ಮೇಶ್ವರ (Lakshmeswara) ಪಟ್ಟಣದಲ್ಲಿ ಜನ ಜಾಗೃತಿ  ಸಮಾವೇಶ (Convention) ನಡೆಸಲಾಗುತ್ತಿದೆ. ಇದು ಯಾವುದೇ ರೀತಿಯ ರಾಜಕೀಯ (Political) ಸಮಾವೇಶ ಅಲ್ಲ. ಆದರೆ, ಸಮಾವೇಶಕ್ಕೆ ಪಂಚಮಸಾಲಿ ಸಮಾಜದ ಸಚಿವರು, ಶಾಸಕರು ಆಗಮಿಸಲಿದ್ದಾರೆ. ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯ ವಿವಿಧೆಡೆ ಜನ ಜಾಗೃತಿ (Public awareness) ನಡೆಸುತ್ತಿದ್ದೇವೆ ಎಂದು ವಚನಾನಂದ ಶ್ರೀಗಳು ಮಾಹಿತಿ ನೀಡಿದರು. 

ಪಂಚಮಸಾಲಿ ಸ್ವಾಭಿಮಾನ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ: ಕೂಡಲ ಶ್ರೀ

ಜೋಕರ್ ಮಾತಿಗೆ ಆದ್ಯತೆ ಕೊಡುವುದಿಲ್ಲ: ಪಂಚಮಸಾಲಿ ಸಮಾಜದ ಎರಡು ಪೀಠಗಳಿಂದ ಪ್ರತ್ಯೇಕ ಹೋರಾಟ ನಡೆಯುತ್ತಿರುವ ಬಗ್ಗೆ ಭಕ್ತರಲ್ಲಿ ಗೊಂದಲ (Confuse) ಇಲ್ಲ. ಗೊಂದಲ ಉಂಟುಮಾಡುವ ಕಾಮಿಡಿ ಜೋಕರ್ ( ಶಾಸಕ ಬಸನಗೌಡ ಯತ್ನಾಳ್ ಹೆಸರು ಪ್ರಸ್ತಾಪಿಸದೇ)  ಗಳ ಮಾತುಗಳಿಗೆ ನಾವು ಹೆಚ್ಚು ಆದ್ಯತೆ ಕೊಡುವುದಿಲ್ಲ. ಯಾರ್‍ಯಾರೋ ಹಗುರವಾಗಿ ಮಾತನಾಡಿದರೆ ನಾವು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇಲ್ಲಿ ಯಾರು ಜೋಕರ್ (Jiker) ಎಂದು ಜನರು ಅರ್ಥ ಮಾಡಿಕೊಳ್ಳಬೇಕು. ನಾಲ್ಕು ಕೆಟ್ಟ ಮಾತಗಳನ್ನು ಹೇಳಿದರೆ ಅವರು ದೊಡ್ಡವರು ಆಗೋದಿಲ್ಲ. ಆಕಾಶಕ್ಕೆ ಮುಖಮಾಡಿ ಉಗಿದರೆ, ಅವರ ಮುಖದ ಮೇಲೆ ಬಿಳುತ್ತದೆ. ಜನ ಎಲ್ಲವನ್ನು ಗಮನಿಸುತ್ತಿದ್ದಾರೆ. ನಾವು ರಾಜಕೀಯ ಸಮಾವೇಶ ಮಾಡದೇ, ಮೀಸಲಾತಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಬಗ್ಗೆ ಟೀಕೆ (Criticism) ಮಾಡಿದರೂ ಅದನ್ನು ಸ್ವಾಗತ ಮಾಡುತ್ತೇವೆ. ನಮ್ಮ ಸಮಾಜದಲ್ಲಿ ನಮಗೆ ಯಾರು ಪ್ರಮುಖರು ಎಂಬುದು ಇಲ್ಲವೆಂದು ತಿಳಿಸಿದರು.

click me!