ಲಕ್ಷ್ಮೇಶ್ವರ: ದೀಪಾವಳಿಯಲ್ಲಿ ನಕಲಿ ನೋಟುಗಳ ಹಾವಳಿ

By Web Desk  |  First Published Oct 30, 2019, 10:50 AM IST

ದೀಪಾವಳಿ ಹಬ್ಬದಲ್ಲಿ 2000 ಮತ್ತು  500 ಮುಖ ಬೆಲೆಯ ನಕಲಿ ನೋಟಿನ ಹಾವಳಿ| ಸಾರ್ವಜನಿಕರನ್ನು ಬೆಚ್ಚಿ ಬೀಳುವಂತ ಮಾಡಿದೆ|  ದೀಪಾವಳಿ ಹಬ್ಬದಲ್ಲಿ ನಡೆದ ವ್ಯವಹಾರದಲ್ಲಿ ಈ ನಕಲಿ ನೋಟುಗಳು ಚಲಾವಣೆ| ಅಂದರ್‌ ಬಾಹರ್ ಇಸ್ಪೇಟ್ ಆಟದಲ್ಲಿ ಈ ನೋಟುಗಳು ಚಲಾವಣೆ|


ಲಕ್ಷ್ಮೇಶ್ವರ[ಅ. 30]: ದೀಪಾವಳಿ ಹಬ್ಬದಲ್ಲಿ 2000 ಮತ್ತು  500 ಮುಖ ಬೆಲೆಯ ನಕಲಿ ನೋಟಿನ ಹಾವಳಿ ಹೆಚ್ಚಾಗಿರುವುದು ಸಾರ್ವಜನಿಕರನ್ನು ಬೆಚ್ಚಿ ಬೀಳುವಂತ ಮಾಡಿದೆ.  ಪಟ್ಟಣದಲ್ಲಿ ದೀಪಾವಳಿ ಹಬ್ಬದಲ್ಲಿ ನಡೆದ ವ್ಯವಹಾರದಲ್ಲಿ ಈ ನಕಲಿ ನೋಟುಗಳು ಕೈಕೈ ಬದಲಾಯಿಸುತ್ತ ಸಾಗುತ್ತಿದ್ದು, ಇದು ಸಾರ್ವಜನಿಕರಲ್ಲಿ ಕಳವಳಕ್ಕೆ ದಾರಿ ಮಾಡಿಕೊಟ್ಟಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Tap to resize

Latest Videos

ದೀಪಾವಳಿ ಹಬ್ಬದಲ್ಲಿ2-3 ದಿನಗಳ ಕಾಲ ನಡೆಯುವ ಅಂದರ್‌ ಬಾಹರ್ ಇಸ್ಪೇಟ್ ಆಟದಲ್ಲಿ ಈ ನೋಟುಗಳು ಚಲಾವಣೆಗೆ ಬರುತ್ತಿದ್ದು. ಸಾರ್ವಜನಿಕರ ನಿದ್ದೆಗೆಡಿಸಿವೆ ಎಂದರೆ ತಪ್ಪಾಗಲಾರದು. ಸಾವಿರಾರು ರು. ಕೈಯಿಂದ ಕೈಗೆ ಬದಲಾಗುತ್ತ ಸಾಗುವ ಗದ್ದಲ ಮತ್ತು ಅವಸರದಲ್ಲಿ ಇಂತಹ ನೋಟುಗಳ ಬಗ್ಗೆ ಯಾರೂ ಅಷ್ಟಾಗಿ ಗಮನ ಹರಿಸುವುದಿಲ್ಲ. ಆದರೆ ನಿತ್ಯ ವ್ಯವಹಾರ ಮಾಡುವ ಜನರಿಗೆ ಇಂತಹ ನೋಟುಗಳು ಸುಲಭವಾಗಿ ಗೊತ್ತಾಗಿ ಬಿಡುತ್ತವೆ. ಪಟ್ಟಣದಲ್ಲಿ2000 ಮತ್ತು 500 ಮುಖ ಬೆಲೆಯ ನಕಲಿ ಅಥವಾ ಕಲರ್ ಝರಾಕ್ಸ್  ನೋಟುಗಳು ಎಲ್ಲಿಂದ ಬಂದವು ಎಂಬ ಬಗ್ಗೆ ಅಧಿಕಾರಿಗಳು ತನಿಖೆ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.  

click me!